ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಭೂಮಿಗೆ ಸದ್ಯಕ್ಕೆ ಮರಳುವ ಸಾಧ್ಯತೆ ಇಲ್ಲ. ಮುಂದಿನ ವರ್ಷ ಅಂದರೆ 2025ರಲ್ಲಿ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಕಳೆದ ಜೂನ್ ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ತೆರಳಿದ್ದು, ಭೂಮಿಗೆ ಮರಳಲು ಸಾಧ್ಯವಾಗದೇ 80 ದಿನಗಳಿಂದ ಬಾಹ್ಯಕಾಶದಲ್ಲಿ ಸಿಲುಕಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸುನೀಲ್ ವಿಲಿಯಮ್ಸ್ ಅವರನ್ನು ಕರೆತರುವುದು ಕಠಿಣ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ 2025ರಲ್ಲಿ ಇಲಾನ್ ಮಸ್ಕ್ ಗಗನಯಾತ್ರೆ ಪ್ರಯಾಣಿಸಿದ ಸಂದರ್ಭದಲ್ಲಿ ಅವರನ್ನು ವಾಪಸ್ ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ಅಮೆರಿಕದ ಬಾಹ್ಯಕಾಶ ಸಂಸ್ಥೆ ನಾಸಾ ತಿಳಿಸಿದೆ.
ಇಲಾನ್ ಮಸ್ಕ್ ಅವರ ನೌಕೆ 2025 ಫೆಬ್ರವರಿಗೆ ಬಾಹ್ಯಕಾಶ ನಿಲ್ದಾಣಕ್ಕೆ ತೆರಳುವ ಕಾರ್ಯಕ್ರಮವಿದೆ. ಆಗ ಇಬ್ಬರು ಗಗನಯಾತ್ರಿಗಳನ್ನು ಕರೆತರಲಾಗುವುದು ಎಂದು ನಾಸಾ ತಿಳಿಸಿದೆ.