ಹೋರಾಟಗಾರ ಸುನೀಲ್ ಬಜಿಲಕೇರಿ ಪೊಲೀಸ್ ವಶಕ್ಕೆ

ಮಂಗಳೂರು : ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಮಧ್ಯರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಫೇಸ್ ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಸುನೀಲ್ ಬಜಿಲಕೇರಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೆನ್ನಲಾಗಿದ್ದು, ಸದ್ಯ ಅವರನ್ನು ಉರ್ವ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಅವರನ್ನು ಊರ್ವ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸುನೀಲ್ ಕುಮಾರ್ ಆಪ್ತರು ತಿಳಿಸಿದ್ದಾರೆ.

ಸುನೀಲ್ ಬಜಿಲಕೇರಿ ಯಾರು? ಸುನೀಲ್ ಬಜಿಲಕೆರೆ ಸಂಘ ಪರಿವಾರದ ಮಾಜಿ ಕಾರ್ಯಕರ್ತ. ಬಿಜೆಪಿ ನಾಯಕರ ಕಾರ್ಯವೈಖರಿಯ ಕಟುವಾಗಿ ಟೀಕಿಸುತ್ತಾ ಬರುತ್ತಿದ್ದಾರೆ.

ಇತ್ತೀಚೆಗೆ, ಫೇಸ್‌ಬುಕ್‌ನಲ್ಲಿ ಚೀತಾ, ಗರ್ಭಿಣಿ ಬಗ್ಗೆ ಬರಹ ಬರೆದಿದ್ದರು ಎನ್ನಲಾಗಿದೆ. ‌’ನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಅಂತ ಪೋಸ್ಟ್ ಮಾಡಿ ಗರ್ಭಿಣಿಯ ಫೋಟೋಗೆ ಚೀತಾದ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು.

ಬಂಧನ ಖಂಡನೀಯ : ಈ ಕುರಿತು ಡಿವೈಎಫ್ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ನೀಡಿದ್ದು, ಬಂಧನ ನಡೆಸುವ ಮುನ್ನ‌ ಆರೋಪಿಗೆ ಬಂಧನದ ಸ್ಪಷ್ಟ ಕಾರಣ ನೀಡಬೇಕಾಗುತ್ತದೆ. ಸಾಮಾಜಿಕ ಜಾಲತಾಣದ ಪ್ರಕರಣ ಆದರೆ ಸೈಬರ್ ವಿಭಾಗದ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ನೋಟೀಸ ನೀಡಿ ವಿಚಾರಣೆಗೆ ಕರೆಸುವುದು ಕ್ರಮ. fIR ಆಗಿದೆ ಅಂತ ಹೇಳಿ‌ ದೂರಿನ ವಿವರ ನೀಡದೆ ಬಲವಂತವಾಗಿ ಮನೆಗೆ ನುಗ್ಗಿ ಬಂಧಿಸುವುದು ಗೂಂಡಾಗಿರಿಯಾಗುತ್ತದೆ. ಮಂಗಳೂರು ಪೊಲೀಸರ ನಢೆ ಖಂಡನೀಯ. ಪೊಲೀಸ್ ಇಲಾಖೆ ಬಿಜೆಪಿಯ ಅಂಗ ಸಂಸ್ಥೆ ಅಲ್ಲ. ನ್ಯಾಯಯುತವಾಗಿ ನಡೆದುಕೊಳ್ಳಿ ಪೊಲೀಸರೆ. ಬಿಜೆಪಿಯ ಶಾಸಕರು “ಶಾಶ್ವತ ಶಾಸಕರಲ್ಲ”. ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *