ಕೃಷಿಕಾಯ್ದೆ ವಿರೋಧಿಸಿ ಸಂಯುಕ್ತ ಹೋರಾಟ ಸಮಿತಿಯಿಂದ ಜಾಥಾ

ಕೋಲಾರ ಜ 19 : ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ, ಕೃಷಿ, ಕಾರ್ಮಿಕರ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಲು ಒತ್ತಾಯಿಸಿ ಕೋಲಾರ ತಾಲ್ಲೂಕಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರಚಾರಾಂದೋಲನ ಜಾಥಾ ನಡೆಸಲಾಯಿತು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ನಡೆದ ಪ್ರಚಾರಾಂದೋಲನದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ದೇಶದಲ್ಲಿ ಮೂರು ಕೃಷಿ ಕಾಯ್ದೆಗಳಿಂದ ರೈತರಿಗಾಗುವ ಸಮಸ್ಯೆಗಳನ್ನು ಸಾರ್ವಜನಿಕರಿಗೆ ಬಿಚ್ಚಿಟ್ಟರು ಈ ಕಾಯ್ದೆಗಳಿಂದ ಕಾರ್ಪೊರೇಟ್‌ನವರಿಗೆ ಅನುಕೂಲ ಹೊರತು ರೈತರಿಗಲ್ಲ. ಈ ಕಾಯ್ದೆಗಳಿಂದ ರೈತರ ಬದುಕು ಹಸನಾಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಈ ಕಾಯಿದೆಯಿಂದ ಆಗುವ ಅನಾನುಕೂಲಗಳನ್ನು ಜನರ ಮಧ್ಯೆ ಪ್ರಚಾರ ಮಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ರಕ್ಷಿಸಿಕೊಳ್ಳಬೇಕಾಗಿದೆ ಎಂದರು

ದೇಶದ ರಾಜಧಾನಿಯಲ್ಲಿ ನಮ್ಮ ಹಕ್ಕನ್ನು ಕೇಳಲು ದೇಶದ ವಿವಿಧ ಭಾಗದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದಿನೇ ದಿನೇ ಅದಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಿದ್ದರೂ ಕೇಂದ್ರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಇದು ಸರಿಯಲ್ಲ. ದೇಶದ ಎಲ್ಲ ರೈತರು ಅದರ ವಿರುದ್ಧ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ರೈತರು ಅವರ ಜಮೀನಿನಲ್ಲಿಯೇ ಜೀತದಾಳುಗಳಾಗಿ ಕೆಲಸ ಮಾಡುವ ದಿನಗಳು ದೂರವಿಲ್ಲ’ ಎಂದು ಎಚ್ಚರಿಸಿದರು ಇದುವರೆಗೆ ಆಹಾರ ಧಾನ್ಯ ಸರ್ಕಾರ ಮಾತ್ರ ಸಂಗ್ರಹಿಸಿ ಇಡಬಹುದಿತ್ತು. ಹೊಸ ಕಾಯ್ದೆ ಪ್ರಕಾರ ಯಾರು ಬೇಕಾದರೂ ಸಂಗ್ರಹಿಸಬಹುದು. ಇದರಿಂದಾಗಿ ಬರುವ ದಿನಗಳಲ್ಲಿ ಹಣವಿದ್ದವರೂ ಖರೀದಿಸಿ, ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಕೃತಕವಾಗಿ ಬೆಲೆ ಹೆಚ್ಚಿಸಬಹುದು ಎಂದು ಕಾಯಿದೆಯ ಅಪಾಯಗಳ ಬಗ್ಗೆ ತಿಳಿಸಿದರು.

ಕೆಪಿಆರ್ ಎಸ್ ತಾಲೂಕು ಅಧ್ಯಕ್ಷ ಎನ್.ಎನ್ ಶ್ರೀರಾಮ್ ಮಾತನಾಡಿ, ರಾಜ್ಯ ಸರಕಾರ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರಾಜ್ಯದ ಜನತೆಯ ಮುಂದೆ ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡಸದೇ ವಿಧಾನ ಸಭೆಯಲ್ಲಿ ಶಾಸಕರು ಚರ್ಚೆಸಲು ಅವಕಾಶ ನೀಡದೇ ವಿಧಾನ ಪರಿಷತ್ ಕಲಾಪದಲ್ಲಿ ಪ್ರಜಾಸತ್ತಾತ್ಮಕವಾಗಿ ಅಂಗೀಕರಿಸದೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೇ ಇದರ ಅಗತ್ಯ ಮತ್ತು ಅವಸರವಾದರೂ ಏನಿತ್ತು ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸರ್ವಾಧಿಕಾರ ದೋರಣಿಯೂ ಆಗಿದೆ. ಇದು ಕಾರ್ಪೊರೇಟ್ ಲೂಟಿಯನ್ನು ವಿಸ್ತರಿಸಿದೆ ಎಂದರು

ಇಲ್ಲಿಯವರೆಗೂ ಜಾನುವಾರು ಗೋವುಗಳ ಸಂತತಿಯನ್ನು ಮತ್ತು ದೇಶಿಯ ತಳಿ ರಕ್ಷಣೆಯನ್ನು ಮತ್ತು ಅವುಗಳ ಅಭಿವೃದ್ಧಿಯನ್ನು ರೈತರು ಕೂಲಿಕಾರರು ಕಸುಬುದಾರರು ಹಾಗೂ ಇತರೆ ಕಸುಬುದಾರರು ಮಾಡುತ್ತಾ ಬಂದಿದ್ದಾರೆ. ಈ ದಿನ ಅವರ ಉಪ ಕಸುಬುಗಳನ್ನು ಸರ್ಕಾರಗಳು ದಿವಾಳಿ ಕೋರ ನೀತಿಗಳಿಂದಾಗಿ ಅಳಿವಿನಂಚಿಗೆ ತಲುಪಿದೆ. ಜಾನುವಾರು ಸಂರಕ್ಷಣೆಯೂ ಅಥವಾ ದೇಶಿಯ ತಳಿಗಳ ರಕ್ಷಣೆಯೆಂದರೆ ಉಪ ಕಸುಬಿನ ಅಭಿವೃದ್ಧಿ ಮತ್ತು ದೇಶಿಯ ತಳಿಯ ಇಳುವರಿ ಹೆಚ್ಚಳಕ್ಕೆ ಕೈಗೊಳ್ಳುವ ಕ್ರಮಗಳಾಗಿರುತ್ತವೆ. ಆದರೇ ಮಸೂದೆಯಲ್ಲಿ ಅಂತಹ ಯಾವುದೇ ಕ್ರಮಗಳು ಕಂಡು ಬರುತ್ತಿಲ್ಲ. ಬದಲಿಗೆ ಸಂಕಷ್ಟದಲ್ಲಿರುವ ಉಪಕಸುಬುನ್ನುಮತ್ತಷ್ಟು ಸಂಕಷ್ಟಕ್ಕೆ ದೂಡುವ ಅಂಶಗಳೆ ಹೆಚ್ಚಾಗಿವೆ ಎಂದರು

ಪ್ರಚಾರಾಂದೋಲನ ಜಾಥದಲ್ಲಿ ಕೆಪಿಆರ್ ಎಸ್ ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ತಾಲೂಕು ಸಹ ಕಾರ್ಯದರ್ಶಿ ಯಲ್ಲಪ್ಪ,ಸುಗಟೂರು ಶ್ರೀಧರ್, ರಾಮಾಂಜಿ, ಭೀಮರಾಜ್, ಆರೋಗ್ಯನಾಥನ್, ನಾರಾಯಣಪ್ಪ, ಮುಂತಾದವರು ಇದ್ದರು

Donate Janashakthi Media

Leave a Reply

Your email address will not be published. Required fields are marked *