ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿ ಜಾಲಹಳ್ಳಿಯನ್ನು ಪಟ್ಟಣ ಪಂಚಾಯತಿ ಎಂದು ಘೋಷಣೆ

ಜಾಲಹಳ್ಳಿ: ಸುಳ್ಳು ದಾಖಲೆಗಳನ್ನು ಸೃಷ್ಠಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮ ಪಂಚಾಯತಿ ಆಗಿದ್ದ ಜಾಲಹಳ್ಳಿಯನ್ನು ಪಟ್ಟಣ ಪಂಚಾಯತಿ ಎಂದು ಘೋಷಣೆ ಮಾಡಿರುವ ಕ್ರಮದ ವಿರುದ್ಧ ಕೂಲಿಕಾರರು ಮತ್ತು ದಲಿತರು ಹೋರಾಟವನ್ನು ನಡೆಸಿದರು.

ಈ ಪ್ರದೇಶವನ್ನು ಸರಕಾರ ಶೇಕಡಾ 70ರಷ್ಟು ಕೈಗಾರಿಕಾ ವಲಯ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಶೇಕಡಾ 95ರಷ್ಟು ಕೃಷಿ ಕೂಲಿಕಾರರು ಇರುವ ಜನಸಂಖ್ಯೆಯನ್ನು ಕೇವಲ ಶೇಕಡಾ 30ರಷ್ಟು ಇದ್ದಾರೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದೂ ಅಲ್ಲದೆ, ಜಾಲಹಳ್ಳಿಯ ಹಳ್ಳಿಗಳಿಗೆ ವರದಾನವಾಗಿದ್ದ ಗ್ರಾಮ ಪಂಚಾಯತಿ ಯೋಜನೆಗಳನ್ನು ರದ್ದುಪಡಿಸಿ ಪಟ್ಟಣ ಪಂಚಾಯತಿ ಮಾಡಿ ಮೇಲ್ದರ್ಜೆಗೆ ಏರಿಸಿ ಸರಕಾರದ ಎಲ್ಲಾ ಯೋಜನೆಗಳಿಂದ ಜನರನ್ನು ವಂಚನೆ ಮಾಡಿದ್ದಾರೆ.

ಇದನ್ನು ಓದಿ: ದಲಿತರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ

ಇಲ್ಲಿ ಸುಮಾರು 4 ರಿಂದ 5 ಸಾವಿರ ಜನರು ಬಡ ಕೂಲಿಕಾರ್ಮಿಕರಿದ್ದಾರೆ. ಅವರು ಹೆಚ್ಚು ಕೂಲಿಯನ್ನು ನಂಬಿ ಜೀವನ ಸಾಗಿಸುವಂತಹ ಪರಿಸ್ಥಿತಿಯಲ್ಲಿ ಅವರದು. ಇವರು ತುತ್ತಿನ ಚೀಲ ತುಂಬಲು ಸುಗ್ಗಿಯ ಸಂದರ್ಭದಲ್ಲಿ ದೇವದುರ್ಗ ತಾಲೂಕಿನ ವಿವಿಧ ಪ್ರದೇಶಗಳಿಗೆ ಆಟೋ, ಟಂಟಂ ಹತ್ತಿಕೊಂಡು ದುಡಿಯಲು ಹೋಗುತ್ತಾರೆ. ಉಳಿದ ಸಮಯದಲ್ಲಿ ಸರಕಾರದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸದಲ್ಲಿ ತೊಡಗುತ್ತಾರೆ. ಕೆಲವರು ದೂರದ ಪುನಾ, ಬೆಂಗಳೂರು, ಬಾಂಬೆ, ಗೋವಾಗಳಂತಹ ಪ್ರದೇಶಹಳಿಗೆ ಗೂಳೆ ಹೋಗುತ್ತಾರೆ. ಕೋವಿಡ್ ನಿಂದ ಎದುರಾದ ಲಾಕ್‌ಡೌನ್‌ ಪರಿಣಾಮವಾಗಿ ಅವರೆಲ್ಲರು ಊರಿಗೆ ಮರಳಿ ಬಂದಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ಸರಕಾರ ಏಕಾಏಕಿ ಜನರ ಅಭಿಪ್ರಾಯ ಸಂಗ್ರಹ ಮಾಡದೆ ಈ ಭಾಗದ ಜನರಿಗೆ ಹಲವು ರೀತಿಯಾಗಿ ವಂಚನೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಒಂದು ಕಡೆ ಆರ್ಥಿಕ ಸಂಕಷ್ಟ. ಮತ್ತೊಂದು ಕಡೆ ಉದ್ಯೋಗ ನಷ್ಟ, ಈ ಭಾಗದಲ್ಲಿ ಯಾವುದೇ ಕೈಗಾರಿಕಾ ಪ್ರದೇಶವೂ ಇಲ್ಲ. ಅಲ್ಲದೆ, ಈ ಭಾಗದ ಜನರಿಗೆ ಇನ್ನೊಂದು ಹೊಡೆತ ಅಂದರೆ, ರಾಜಕೀಯ ದ್ರೋಹ ಮಾಡಿ ಅತಿದೊಡ್ಡ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತಿ ಕ್ಷೇತ್ರವಾಗಿದ್ದ ಜಾಲಹಳ್ಳಿಯಲ್ಲಿ ಬೇರೆ ಪಂಚಾಯತಿಯ ದೂರದ ಗ್ರಾಮಗಳಾದ ಲಿಂಗದಳ್ಳಿ ಮತ್ತು ಮುದುಗೋಟ ಗ್ರಾಮಗಳನ್ನು ನಮ್ಮ ತಾಲೂಕ ಪಂಚಾಯತಿಯಿಂದ ಹೊರಗಿನ ಪ್ರದೇಶಗಳನ್ನು ಸೇರಿಸಿಕೊಂಡು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಇದರ ವಿರುದ್ಧ ಕಲಬುರಗಿ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿ ಮತ್ತೆ ಮೂರು ಗ್ರಾಮಗಳಿಗೆ ಚುನಾವಣೆ ನಡೆಸಬೇಕೆಂದು ಆದೇಶ ಮಾಡಿದ್ದರು. ಆದರೂ ಜಿಲ್ಲಾಧಿಕಾರಿಗಳು ಅದಕ್ಕೆ ಉತ್ತರ ಕೊಡದೆ ಕಾಲಹರಣ ಮಾಡುತ್ತಿದ್ದಾರೆ.

ಇದನ್ನು ಓದಿ: ಸಂಸದ ಪ್ರತಾಪಸಿಂಹ ಅವಿವೇಕಿ – ರೈತರ ಆಕ್ರೋಶ

ಕೂಡಲೇ ಅವೈಜ್ಞಾನಿಕವಾಗಿ ಹಾಗೂ ಯಾವ ಪೂರ್ವ ತಯಾರಿಗಳಿಲ್ಲದೆ, ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗೇ ಮೇಲ್ದರ್ಜೆಗೆ ಏರಿಸಿದವರ ಮೇಲೆ ಶಿಸ್ತುಕ್ರಮವನ್ನು ಕೈಗೊಳ್ಳಬೇಕೆಂದು ಮತ್ತು ಅಧಿಕಾರಿಗಳು ಜನಪ್ರತಿನಿಗಳ ನಡೆಯನ್ನು ಖಂಡಿಸಿ ಪ್ರತಿಭಟನಾಕಾರರು ಆಗ್ರಹಿಸಿದ್ದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಾಟಗಾರರು ನಂತರ ಹಿರಿಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ), ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್‌) ಸಂಘಟನೆಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಯಲ್ಲಿ ಶಬ್ಬೀರ ಜಾಲಹಳ್ಳಿ, ಮೇಲಪ್ಪ ಬಾವಿಮನಿ, ಹನುಮಂತ ಮಡಿವಾಳ, ಮೌನೇಶ ದಾಸರ, ಮಕ್ತುಂಪಾಷ, ಗುರು ನಾಯಕ, ಮೈಹಿಬೂಬ್, ಬಸವರಾಜ, ರಮೇಶ ಬಾವಿಮನಿ,  ಬಾಲಪ್ಪ ಗೋಸಲ್, ರಂಗನಾಥ ಮುಂತಾದವರು ನೇತೃತ್ವವನ್ನು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *