ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಭೆ

ಬೆಂಗಳೂರು: ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್‌ಗೆ 5500ನೀಡಬೇಕು ಎಂದು ಕರ್ನಾಟಕ ಕಬ್ಬು ಬೆಳೆಗಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎನ್ ಎಲ್ ಭರತ್ ರಾಜ್ ಆಗ್ರಹಿಸಿದ್ದಾರೆ. ಅಧ್ಯಕ್ಷತೆ

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರ ಸಭೆಯಲ್ಲಿ ನಾವು ಭಾಗವಹಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಬೇಡಿಕೆಗಳನ್ನು ಸಲ್ಲಿಸಿ ಒತ್ತಾಯಿಸಲಾಯಿತು. ಅಧ್ಯಕ್ಷತೆ

ಬೇಡಿಕೆಗಳು ಇಂತಿನಂತಿದೆ

1. ಕೇಂದ್ರ ಸರ್ಕಾರ 2019 ಕ್ಕಿಂತ ಮೊದಲು ಶೇಕಡ 8.5 ಹಾಗೂ 2010 ರಿಂದ 2018 ರವರೆಗೆ ಶೇಕಡ 9.50, 2018 ರಿಂದ 2022 ರವರೆಗೆ ಶೇಕಡ 10, 2022.ರಿಂದ 10.25 ಸಕ್ಕರೆ ಇಳುವರಿ ಆಧಾರದ ಮೇಲೆ FRP.ಬೆಲೆ ನಿಗದಿ ಮಾಡುತ್ತಿದ್ದಾರೆ. ಶೇಕಡ ಒಂದರಷ್ಟು ಸಕ್ಕರೆ ಇಳುವರಿ ಹೆಚ್ಚಾದರೆ 346 ರೂಗಳನ್ನ ಹೆಚ್ಚಾಗಿ ಹಣ ಕೊಡಬೇಕು ಆಕಾರಣಕ್ಕೆ ಇಳುವರಿಯನ್ನ ವ್ಯತ್ಯಾಸ ಮಾಡುತ್ತಿದ್ದಾರೆ ಅದ್ದರಿಂದ FRP ನಿಗದಿಯನ್ನ ಶೇ. 9.50. ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 5500 ರೂ ಬೆಲೆ ನಿಗದಿಗಾಗಿ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕೆಂದು ಆಗ್ರಹಿಸಲಾಯಿತು. ಅಧ್ಯಕ್ಷತೆ

2. ರಾಜ್ಯ ಸರ್ಕಾರ ಹರಿಯಾಣದಲ್ಲಿ 800 ರೂ ಪಂಜಾಬ್ ನಲ್ಲಿ 900 ರೂಗಳು ತಮಿಳುನಾಡಿನಲ್ಲಿ 250 ರೂಗಳನ್ನು ಎಸ್‌ಎಪಿ ನಿಗದಿಪಡಿಸಲಾಗಿದೆ ಇದಕ್ಕೆ ಅಡ್ಡಿಯಾಗಿರುವ 2013ರ ಕಾಯ್ದೆಯನ್ನು ರದ್ದು ಮಾಡಿ ಹಿಂದಿನ ರೀತಿ ಕನಿಷ್ಠ ರಾಜ್ಯ ಸರ್ಕಾರ 500ರೂ ಎಸ್‌ಎಪಿ ನಿಗದಿಪಡಿಸಬೇಕು. ಅಧ್ಯಕ್ಷತೆ

ಇದನ್ನೂ ಓದಿ: ಜಾತಿ ಸಂಕಟಗಳ ನಡುವೆ ಸ್ವಾಭಿಮಾನದ ಶೋಧ

3. ಸಕ್ಕರೆ ಇಳುವರಿಯಲ್ಲಿ ಕಾರ್ಖಾನೆ ಮಾಲೀಕರು ಘೋಷಣೆ ಮಾಡುವಾಗ ಮೋಸ ನಡೆಸುತ್ತಿದ್ದಾರೆ ಅದ್ದರಿಂದ ಜಿಲ್ಲಾಡಳಿತ ಮತ್ತು ಕೃಷಿ ತಜ್ಞರು ಸೇರಿದಂತೆ ಕಬ್ಬು ಬೆಳೆಗಾರರ ಸಂಘದ ಮುಖಂಡರ ಸಮಿತಿ ರಚಿಸಿ ಕನಿಷ್ಠ 15 ದಿನಕ್ಕೊಮ್ಮೆ ಹಾಗಾಗಿ ಪರೀಕ್ಷಿಸಿ ಒಟ್ಟಾರೆ ಸರಾಸರಿ ಆಧಾರದ ಮೇಲೆ ಸಕ್ಕರೆ ಇಳುವರಿಯನ್ನ ಘೋಷಣೆ ಮಾಡಬೇಕು. ಅಲ್ಲದೆ ರೈತರು ಸಹ ಮುಕ್ತವಾಗಿ ಸಕ್ಕರೆ ಇಳುವರಿಯನ್ನ ಪರೀಕ್ಷಿಸಿಕೊಳ್ಳಲು ಲ್ಯಾಬ್ ವ್ಯವಸ್ಥೆ ಕಲ್ಪಿಸಬೇಕು .

4. ತೂಕದಲ್ಲಿ ನಡೆಯುತ್ತಿರುವ ಮೋಸವನ್ನು ತಡೆಗಟ್ಟಬೇಕು ಅದಕ್ಕಾಗಿ ಸರ್ಕಾರಗಳೇ ಸಕ್ಕರೆ ಕಾರ್ಖಾನೆ ಬಳಿ ವೇಬ್ರಿಡ್ಜನ್ನ ನಿರ್ಮಿಸಬೇಕು.

5. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡಬೇಕು ಇಲ್ಲವಾದರೆ ಶೇಕಡಾ 15 ರಷ್ಟು ಬಡ್ಡಿ ಸೇರಿಸಿ ಹಣ ಪಾವತಿಸಬೇಕು ತೀರ ವಿಳಂಬವಾದರೆ ಜಿಲ್ಲಾಧಿಕಾರಿಗಳು ಭೂ ಕಂದಾಯದ ಕಾನೂನುಡಿ ಸಕ್ಕರೆ ಕಾರ್ಖಾನೆ ಮಾಲಕರ ಆಸ್ತಿಯನ್ನು ಮುಟ್ಟುಗೋಲ ಹಾಕಿಕೊಳ್ಳಬೇಕು .

6. ಕಬ್ಬಿನ ಗಾಡಿ ಮತ್ತು ಟ್ರ್ಯಾಕ್ಟರ್ ಹಾಗೂ ಲಾರಿಗಳು ಕಬ್ಬಿ ತುಂಬಿಕೊಂಡು ಕಾರ್ಖಾನೆಗೆ ಪ್ರವೇಶ ಆದ ತಕ್ಷಣ ತೂಕ ಆಗಬೇಕು ಎರಡು ಮೂರು ದಿನಗಳ ಕಾಲ ವಿನಾಕಾರಣ ಕಬ್ಬ ಒಣಗಿಸಿ ಕಬ್ಬನ್ನ ಹಾಳು ಮಾಡಿ ರೈತರಿಗೆ ನಷ್ಟ ಉಂಟು ಮಾಡಬಾರದು

7 .ಬೆಲೆ ವಿಷಯದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ ಎಣಿಸದೆ ರಾಜ್ಯಾದ್ಯಂತ ಒಂದೇ ರೀತಿಯ ಬೆಲೆ ನೀತಿಯನ್ನು ಅನುಸರಿಸಬೇಕು.

8. 2022 ಹಾಗೂ 23ರಲ್ಲಿ ನಿಗದಿಪಡಿಸಿದ್ದ ಪ್ರತಿ ಟನ್ ಗೆ ಎಸ್‌ಎಪಿ 150 ರೂಪಾಯಿ ಬಾಕಿಯನ್ನು ತಕ್ಷಣ ನೀಡಬೇಕು ಜೊತೆಗೆ 2023. 24, 24. 25ನೇ ಸಾಲಿನ ಎಸ್‌ಎಪಿ ಯನ್ನ ನಿಗದಿಪಡಿಸಬೇಕೆಂದು ಒತ್ತಾಯಿಸಲಾಯಿತು .

9. H@T ಯನ್ನು ನಿಗದಿತ ಹಣಕಿಂತ ಹೆಚ್ಚಾಗಿ ಪಡೆದಿರುವ ಕಾರ್ಖಾನೆಗಳು ರೈತರಿಗೆ ವಾಪಸ್ಸು ಕೊಡಬೇಕು. ಬೆಳಗಾಂನಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಅವರ ಬೇಡಿಕೆಯಂತೆ ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ಕಳೆದು ಪ್ರತಿ ಟನ್ ಕಬ್ಬಿಗೆ 3500 ರೂಗಳನ್ನ ನೀಡಬೇಕೆಂದು ಒತ್ತಾಯಿಸಲಾಯಿತು.

ಈ ಒಂದು ಸಭೆಯಲ್ಲಿ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್., ಹೆಚ್ ಕೆ ಪಾಟೀಲ್., ಎಂ ಬಿ ಪಾಟೀಲ್ ತಿಮ್ಮಪುರ್ ಮುಂತಾದ ಮಂತ್ರಿ ಹಾಗೂ ಶಾಸಕರಿದ್ದರು .

ಕರ್ನಾಟಕ ಕಬ್ಬು ಬೆಳೆಗಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎನ್ ಎಲ್ ಭರತ್ ರಾಜ್, ಕಲಬುರ್ಗಿ ಜಿಲ್ಲಾ ಮುಖಂಡರಾದ ಶ್ರೀಮಂತ ಬಿರಾದಾರ, ಶರಣಬಸಪ್ಪ ಮಮಶೆಟ್ಟಿ, ಪ್ರಾಂತ ರೈತ ಸಂಘದ ರಾಜ್ಯ ಸಹಕಾರ್ಯದರ್ಶಿ ಎನ್ ಪ್ರಭ ಹಾಗೂ ಹಾವೇರಿ , ಬಿಜಾಪುರ ಬಾಗಲಕೋಟೆ ವಿಜಯಪುರ ಮುಂತಾದ ಜಿಲ್ಲೆಗಳ ರೈತ ಮುಖಂಡರು ಭಾಗವಹಿಸಿದ್ದರು.

ಇದನ್ನೂ ನೋಡಿ: ಸಕ್ಕರಿ ಇಳುವರಿ ಆಧಾರದ ಮೇಲೆ ಪ್ರತಿ ಟನ್‌ಗೆ 5500ನೀಡಬೇಕು – ಎನ್‌ ಎಲ್‌. ಭರತ್‌ರಾಜ್‌Janashakthi Media

Donate Janashakthi Media

Leave a Reply

Your email address will not be published. Required fields are marked *