ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ಖ್ಯಾತ ವಕೀಲರು ಹಾಗೂ ವಾಗಿಗಳಾದ ಸುಧೀರ್‌ಕುಮಾರ್ ಮುರೊಳ್ಳಿ ರನ್ನು ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್‌ಕುಮಾರ್ ಸೊರಕೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕಾಫಿನಾಡು ಹಾಗೂ ಕರಾವಳಿ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿರುವ ಸುಧೀರ್‌ಕುಮಾರ್ ಮುರೊಳ್ಳಿ, ಉತ್ತಮ ಸಂಘಟನಾಕಾರರಾಗಿದ್ದು ಜೊತೆಗೆ ವಾಗಿಗಳೂ ಆಗಿದ್ದಾರೆ.
ಇದನ್ನೂ ಓದಿ: ಸತ್ಯವನ್ನು ಪಂಚ್ ಡೈಲಾಗ್‌ನೊಂದಿಗೆ ಪ್ರಸ್ತುತಪಡಿಸುವುದೆ ಸ್ಟ್ಯಾಂಡ್-ಅಪ್ ಕಾಮಿಡಿ
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ನೇಹಜೀವಿಯಾಗಿ ಸಮಾಜಮುಖಿ ಹಾಗೂ ಶೃಂಗೇರಿ, ಕೊಪ್ಪ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇವರ ಕಾರ್ಯವೈಖರಿಯನ್ನು ಪರಿಗಣಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media