ನವದೆಹಲಿ| ಸುಪ್ರೀಂ ಕೋರ್ಟ್‌ಗೆ ಅಪರಾಧೀಕರಣ ದತ್ತಾಂಶ ಸಲ್ಲಿಕೆ

ನವದೆಹಲಿ: ರಾಜಕೀಯ ಅಪರಾಧೀಕರಣ ದತ್ತಾಂಶವನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ. ವರದಿ ಅನ್ವಯ, 543 ಲೋಕಸಭಾ ಸಂಸದರ ಪೈಕಿ 251 ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

170 ಸಂಸದರ ಮೇಲೆ 5 ಅಥವಾ ಹೆಚ್ಚು ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪವಿದೆ ಎಂಬ ಸಂಗತಿ ಹೊರಬಿದ್ದಿದೆ. ಹನ್ಸಾರಿಯಾ ಅವರು ವಿವಿಧ ಹೈಕೋರ್ಟ್ ಗಳಿಂದ ಮಾಹಿತಿ ಪಡೆದು 83 ಪುಟಗಳ ವರದಿಯನ್ನು ಸಿದ್ದಪಡಿಸಿ ನ್ಯಾ.ದೀಪಂಕರ್ ದತ್ತಾ ಮತ್ತು ನ್ಯಾ. ಮನಮೋಹನ್ ಅವರ ಪೀಠಕ್ಕೆ ಸಲ್ಲಿಸಿದ್ದಾರೆ. ನವದೆಹಲಿ

ಇದನ್ನೂ ಓದಿ: ಬಜೆಟ್‌ ನಲ್ಲಿ ಕೃಷಿ ನಿರ್ಲಕ್ಷಣೆ

ಕೇರಳದ 20 ಸಂಸದರ ಪೈಕಿ 19 (ಶೇ.95), ತೆಲಂಗಾಣದ 17ರಲ್ಲಿ 14 (ಶೇ.82), ಬಿಹಾರದ 40ರಲ್ಲಿ 16 (ಶೇ.76), ಜಾರ್ಖಂಡದ 14ರಲ್ಲಿ 10 (ಶೇ.71), ತಮಿಳುನಾಡಿನ 39ರಲ್ಲಿ 26 (ಶೇ.67) ಸಂಸದರ ಮೇಲೆ ಅಪರಾಧ ಪ್ರಕರಣಗಳಿವೆ. ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪ.ಬಂಗಾಳ, ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಈ ಸಂಖ್ಯೆ ಶೇ.50 ಇದೆ.

ಹರ್ಯಾಣ (10) ಮತ್ತು ಛತ್ತೀಸಗಢದ (11) ತಲಾ ಒಬ್ಬೊಬ್ಬ ಸಂಸದರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪಂಜಾಬ್‌ನ 13ರಲ್ಲಿ 2, ಅಸ್ಸಾಂನ 14ರಲ್ಲಿ 3, ದೆಹಲಿಯ 7ರಲ್ಲಿ 3, ರಾಜಸ್ಥಾನದ 25ರಲ್ಲಿ 5. ಗುಜರಾತ್‌ನ 25ರಲ್ಲಿ 5, ಮಧ್ಯ ಪ್ರದೇಶದ 29ರಲ್ಲಿ 9 ಸಂಸದರ ಮೇಲೆ ಅಪರಾಧ ಪ್ರಕರಣಗಳಿರುವುದು ವರದಿಯಿಂದ ತಿಳಿದುಬಂದಿದೆ.

ಇದನ್ನೂ ನೋಡಿ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ರೈತ ಕೂಲಿಕಾರರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *