ದೌಸಾ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬ ನಾಲ್ಕು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಶುಕ್ರವಾರ ರಾಜಸ್ಥಾನದ ಲಾಲ್ಸೋಟ್ ಬಳಿ ನಡೆದಿದೆ. ಆರೋಪಿಯನ್ನು ಭೂಪೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಆರೋಪಿ ಮಧ್ಯಾಹ್ನದ ಹೊತ್ತಿಗೆ ಅಪ್ರಾಪ್ತ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.
ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಎಸ್ಪಿ ರಾಮಚಂದ್ರ ಸಿಂಗ್ ನೆಹ್ರಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಈ ಮಧ್ಯೆ, ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಹುವಾಸ್ ಪೊಲೀಸ್ ಠಾಣೆಗೆ ಘೇರಾವ್ ಹಾಕಿ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಆರೋಪಿಯನ್ನು ಅಧಿಕೃತವಾಗಿ ಪೊಲೀಸರಿಗೆ ಒಪ್ಪಿಸುವ ಮೊದಲು ಆರೋಪಿ ಸಬ್ ಇನ್ಸ್ಪೆಕ್ಟರ್ಗೆ ಥಳಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಇ.ವಿ ಕರಡು ನೀತಿ ಸಿದ್ಧ| 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಗುರಿ; ಸಚಿವ ಎಂಬಿ ಪಾಟೀಲ್
ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಕೂಡ ಸ್ಥಳಕ್ಕಾಗಮಿಸಿ, ”ಲಾಲ್ಸೋಟ್ನಲ್ಲಿ ದಲಿತ ಬಾಲಕಿಯ ಮೇಲೆ ಪೋಲೀಸರೊಬ್ಬರು ಅತ್ಯಾಚಾರವೆಸಗಿದ ಘಟನೆಯಿಂದ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅಮಾಯಕ ಮಗುವಿಗೆ ನ್ಯಾಯ ದೊರಕಿಸಿಕೊಡಲು ಸ್ಥಳಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾರೆ. ರಾಜಸ್ಥಾನ
4 साल की बच्ची से जघन्य कांड मामला और @DrKirodilalBJP कूच pic.twitter.com/5ypqcom9LI
— Aishwarya Pradhan ✍️ 🇮🇳 (@aishwaryam99) November 10, 2023
ಅಶೋಕ್ ಗೆಹ್ಲೋಟ್ ಸರ್ಕಾರದ ಅದಕ್ಷತೆಯಿಂದಾಗಿ ನಿರಂಕುಶಾಧಿಕಾರಿಗಳಾಗಿರುವ ಪೊಲೀಸರು ಚುನಾವಣೆಯಂತಹ ಸೂಕ್ಷ್ಮ ಸಂದರ್ಭದಲ್ಲೂ ದೌರ್ಜನ್ಯ ಎಸಗಲು ಹಿಂಜರಿಯುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಬಿಜೆಪಿ ಸಂಸದ ಹೇಳಿದ್ದಾರೆ. ರಾಜಸ್ಥಾನ
“ಆರೋಪಿ, ಎಎಸ್ಐ ಭೂಪೇಂದ್ರ ಸಿಂಗ್ ಅವರು ಕಠಿಣ ಕ್ರಮವನ್ನು ಎದುರಿಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ಕೆಲಸದಿಂದ ವಜಾಗೊಳಿಸಲಾಗುವುದು. ಪೊಲೀಸರು, ಸಂತ್ರಸ್ತ ಕುಟುಂಬದೊಂದಿಗೆ ಇದ್ದಾರೆ. ಕುಟುಂಬದ ಎಲ್ಲಾ ಸಂತ್ರಸ್ತ ಸದಸ್ಯರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ನೆರವು ನೀಡುತ್ತಾರೆ” ಎಂದು ಸಂಸದ ಮೀನಾ ಹೇಳಿದ್ದಾರೆ.
ವಿಡಿಯೊ ನೋಡಿ: ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿರುವ ಪ್ಯಾಲಿಸ್ಟೈನ್ ಕಾರ್ಮಿಕರನ್ನು ಹೊರದಬ್ಬಲಾಗುತ್ತಿದೆ. Janashakthi Media