ಹಾವೇರಿ: ಎಸ್ಎಫ್ಐ ಭದ್ರ ಬುನಾದಿ ಸೈದ್ಧಾಂತಿಕ ನಿಲ್ಲುವ ಹೊಂದಿರುವ ಸಂಘಟನೆ. ಜೀವನ ಪರವಾಗಿ, ಜೀವ ಪರವಾಗಿ, ಸಮಾಜದ ಪರವಾಗಿ ಯಾವುದು ಕೆಲಸ ಮಾಡುತ್ತದೆ. ಅಂತಹ ಸಿದ್ಧಾಂತ ಇಟ್ಟುಕೊಂಡು ನೆಲ್ಲಗಟ್ಟಿನ ಮೇಲೆ ಹೋರಾಟ ಮಾಡುತ್ತಿರುವ ಎಸ್ಎಫ್ಐ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಬರಬೇಕು ಎಂದು ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿದರು.
ಸಾರ್ವತ್ರಿಕ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ, ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಸಾಮರಸ್ಯ, ಭಾವೈಕ್ಯತೆ ಮತ್ತು ಬಹುತ್ವ ಪರಂಪರೆಯ ಸಂರಕ್ಷಣೆಗಾಗಿ ಸರ್ಕಾರಿ ನೌಕರರ ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಹಾವೇರಿ ಜಿಲ್ಲಾ ಸಮಿತಿ ಆಯೋಜಿಸಿದ 8ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ದೊಡ್ಡ ಶಕ್ತಿಯನ್ನು ಹೊಂದಿದೆ ಎಂದು ಭಾವಿಸಿದ್ದೇನೆ. ವೈಚಾರಿಕ ಶಿಕ್ಷಣ ಹೋರಾಟ ಜೊತೆ ಜೊತೆಗೆ ಸಾಗಲಿ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ತಂದೆ ತಾಯಿಗಳ ಅಭಿಲಾಷ ಈಡೇರಿಸಬೇಕು, ಪಠ್ಯೇತರ ಚಟುವಟಿಕೆಗಳನ್ನು ಮಾಡಬೇಕು, ವೈಚಾರಿಕ ನಿಲ್ಲುವಗಳನ್ನು ಇಟ್ಟುಕೊಳ್ಳಬೇಕು. ವಿದ್ಯಾರ್ಥಿ-ಯುವಜನರ ದೇಶವನ್ನು, ಸಮಾಜವನ್ನು ನೋಡು ದೃಷ್ಟಿ ಕೋನ ಬೇರೆಯಾಗಿರುತ್ತದೆ. ಬಹಳಷ್ಟು ಬದಲಾವಣೆವಾಗಿರುತ್ತೆ ತಪ್ಪು ಸರಿಯೋ ಎಂಬ ವೈಚಾರಿಕ ನಿಲವು ಬೆಳೆಯುತ್ತದೆ. ಓದುವಿನ ಜೊತೆಗೆ ಹೋರಾಟದ ಗುಣವನ್ನು ಬೆಳೆಸಿಕೊಳ್ಳಬೇಕು. ಜನ ಸಮುದಾಯದ, ಜನರ ನಡುವೆ ಬಂದಾಗ ನಿಮ್ಮ ಶಕ್ತಿ ಪರೀಕ್ಷೆಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕ್ರಿಕೆಟ್ ಬ್ಯಾಟ್‌ನಿಂದ ಬೀದಿನಾಯಿಯನ್ನು ಹೊಡೆದು ಸಾಯಿಸಿ ಕ್ರೌರ್ಯ ಮೇರೆದ ವ್ಯಕ್ತಿ: ಎಫ್‌ಐಆರ್ ದಾಖಲು
ಮನೆಯ ಶಿಕ್ಷಣ, ತರಗತಿ ಶಿಕ್ಷಣ, ವೈಚಾರಿಕತೆ ಜೊತೆಗೆ ಹೋರಾಟವನ್ನು ತಾವುಗಳು ಮಾಡಬೇಕು ಜೊತೆಗೆ ಇಂತಹ ಸಂಘಟನೆಗಳನ್ನು ಬೆಳೆಸಬೇಕು. ಯಾರು ವೈಚಾರಿಕ ಗಟ್ಟಿಯಾಗಿರುವ ಸಂಘಟನೆಗಳಗೆ ಕೆಲಸ ಮಾಡಬೇಕು. ಸಮಾಜದ ಪ್ರೀತಿ, ಚಿಂತನೆ, ಕೊಡುಗೆ ಈ ನಾಡಿನಲ್ಲಿ ಏನಾದರೂ ಬದಲಾವಣೆ ತರಬೇಕು ಎಂದು ತಿಳಿದುಕೊಂಡು ಅಂತರಂಗದಲ್ಲಿ ತುಡಿತ ಇದೆ ಎಂಬುದರ ಎಸ್ಎಫ್ಐ ನಾಯಕರು ಸಾಕ್ಷಿಯಾಗಿದ್ದಾರೆ.ತಾವುಗಳು ಕೂಡ ಮುಂದೆ ತಮ್ಮ ಅಭ್ಯಾಸದ ಜೊತೆಗೆ ಹೋರಾಟ , ವೈಚಾರಿಕತೆ ಬೆಳೆಸಿಕೊಂಡು ಇವತ್ತು ಅನೇಕ ಕಲುಷಿತ ವಾತಾವರಣ ಇದೆ. ಯಾವುದು ಬಾಳ್ ಜನಪ್ರಿಯವಾಗಿರುತ್ತದೆ ಅದೇ ಶ್ರೇಷ್ಠ ಎಂಬ ಭಾವನೆ ಇದೆ. ಹೆಚ್ಚು ಮಾತನಾಡುವ ವಿಚಾರಗಳಿಗೆ ಮರುಳಾಗದೆ ಹೋರಾಟವನ್ನು ಮುಂದುವರಿಸಬೇಕೆಂದರು.
ಎಸ್ಎಫ್ಐ ಬಹಳಷ್ಟು ಬದ್ಧತೆಯಿಂದ ಇರುವ ವಿದ್ಯಾರ್ಥಿ ಸಂಘಟನೆಯಾಗಿದೆ. ಪ್ರತಿ ಪೀಳಿಗೆಗೆ ಹೊಸ ದಿಕ್ಕನ್ನು ತೋರಿಸುವ, ಬದ್ಧತೆಯನ್ನು ಕಲಿಸುವ ಸಂಘಟನೆಯಾಗಿದೆ. ಅಂಬೇಡ್ಕರ್ ಜೀವನ ಚರಿತ್ರೆ ಅರಿತು ಅವರ ನಡೆದ ಕ್ರಾಂತಿಕಾರಿ ನಡೆಗಳನ್ನು ರೂಢಿಸಿಕೊಳ್ಳಬೇಕು. ಓದು ಅಭ್ಯಾಸ, ಹೋರಾಟವನ್ನು ಮುನ್ನಡೆಸಿದರೆ ಉಜ್ವಲ ಭವಿಷ್ಯವಿದೆ. ಜ್ಯೋತಿ ಬಸು ಒಂದು ವೇಳೆ ಪ್ರಧಾನ ಮಂತ್ರಿ ಅವಕಾಶ ತ್ಯಾಗ ಮಾಡದಿದ್ದರೆ ದೇಶದ ದಿಕ್ಕು ಬದಲಾವಣೆ ಆಗುತ್ತಿತ್ತು ಎಂದು ಅಭಿಪ್ರಾಯ ಪಟ್ಟರು.
ಡಿವೈಎಫ್ಐ ಜಿಲ್ಲಾ ಸಂಚಾಲಕರು ನಾರಾಯಣ ಕಾಳೆ, ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ, ಮಾಜಿ ಜಿಲ್ಲಾಧ್ಯಕ್ಷೆ ರೇಣುಕಾ ಕಹಾರ, ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿದರು. ವೇದಿಕೆಯಲ್ಲಿ ಶೃತಿ ಆರ್ ಎಮ್, ಕೀರ್ತನಾ ಹಿರಿಯಕ್ಕನವರ ಇದ್ದರು. ಎಸ್ಎಫ್ಐ ಮುಖಂಡರಾದ ದುರುಗಪ್ಪ ಯಮ್ಮಿಯವರ, ಸುಲೇಮಾನ್ ಮತ್ತಿಹಳ್ಳಿ, ದೇವರಾಜ ಅಕ್ಕಸಾಲಿ, ಅಣ್ಣಪ್ಪ ಕೊರವರ್, ಮುತ್ತುರಾಜ್ ದೊಡ್ಡಮನಿ, ವಿಜಯ ಶಿರಹಟ್ಟಿ, ಪ್ರಜ್ವಲ್ ಹರಿಜನ, ಮಹೇಶ್ ಮರೋಳ, ಪೂರ್ಣಿಮಾ ಡವಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಫತೀಮಾ ಶೇಖ್ ಸ್ವಾಗತಿಸಿದರು, ಲಲಿತಾ ಹಾವೇರ ಕಾರ್ಯಕ್ರಮ ನಿರೂಪಿಸಿದರು, ಸುಜಾತ ಕಮ್ಮಾರ ವಂದಿಸಿದರು.
ಇದನ್ನೂ ನೋಡಿ: ವಚನಾನುಭವ -13| ಮನದೊಳಗಿನ ಕೊಳೆಯನ್ನು ತೊಳೆಯದೆ , ಮೈ ಮೇಲಿನ ಕೊಳೆಯನ್ನು ತೊಳೆದು, ಮಡಿಯುಟ್ಟುರೆ ಸಾಕೆ? | ಅಲ್ಲಮನ ವಚನ