ಕಿತ್ತೂರು | ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ” – ವಿ. ರಶ್ಮಿ ಮಹೇಶ್

ಕಿತ್ತೂರು: ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆ. ಸಾಕಷ್ಟು ಮಾಹಿತಿಗಳನ್ನು ನಾವು ಅಂತರ್ಜಾಲದಲ್ಲಿ ಹುಡುಕಾಡಬಹುದು. ಅವುಗಳಲ್ಲಿ ಯಾವುದು ನಮ್ಮ  ಅನುಕೂಲಕ್ಕ ಬರುತ್ತದೆಯೊ ಅದನ್ನು ಮಾತ್ರ ಓದಿಗೆ ಪೂರಕವಾಗಿ ಬಳಸಿಕೊಳ್ಳಬೇಕು.  ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಅನುಮಾನಗಳಿಗೆ ಉತ್ತರಗಳನ್ನು ಪಡೆದುಕೊಂಡು ಆತಂಕಗಳನ್ನು ಸರಿಪಡಿಸಿಕೊಳ್ಳಬೇಕು ಎಂದು  ಶಿಕ್ಷಣ  ಇಲಾಖೆಯ  ಎಸಿಎಸ್ ವಿ. ರಶ್ಮಿ ಮಹೇಶ್ ರವರು ಕಿವಿ ಮಾತು ಹೇಳಿದರು. ಅವರು  ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರಿನ ಕಿತ್ತೂರ ರಾಣಿ ಚೆನ್ನಮ್ಮ ಸೈನಿಕ ಶಾಲೆಯ 54ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ : ವಿಜಯನಗರ | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಲಪನಗುಡಿಯಲ್ಲಿ ನೃತ್ಯ, ನಾಟಕೋತ್ಸವ

ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಅನುಮಾನಗಳಿಗೆ ಉತ್ತರಗಳನ್ನು ಪಡೆದುಕೊಂಡು ಆತಂಕಗಳನ್ನು ಸರಿಪಡಿಸಿಕೊಳ್ಳಬೇಕು ಎಂದು  ಶಿಕ್ಷಣ  ಇಲಾಖೆಯ  ಎಸಿಎಸ್ ವಿ. ರಶ್ಮಿ ಮಹೇಶ್ ರವರು ಕಿವಿ ಮಾತು ಹೇಳಿದರು. ಅವರು  ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರಿನ ಕಿತ್ತೂರ ರಾಣಿ ಚೆನ್ನಮ್ಮ ಸೈನಿಕ ಶಾಲೆಯ 54ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ಪಡೆದುಕೊಂಡು ಉತ್ತಮವಾದ ಬದುಕನ್ನು ಸೃಷ್ಟಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಈಗ ಕಲಿಯಲು ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಬದುಕಿನಲ್ಲಿ ಉತ್ತಮವಾದ ಮತ್ತು ದೊಡ್ಡದಾದ ಗುರಿಯನ್ನು ಇಟ್ಟುಕೊಳ್ಳಬೇಕು ಮತ್ತು ಸತತ ಶ್ರಮವಹಿಸಿ ಸಾಧಕರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕಿಯರು ಮತ್ತು ಸಿಬ್ಬಂದಿವರ್ಗ ಹಾಗೂ ವಿವಿಧ ಕ್ರೀಡೆಗಳಲ್ಲಿ ಪದಕ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಯರು ವಿವಿಧ ಪ್ರಕಾರದ ಶೌರ್ಯ, ಕಲೆ, ಸಂಸ್ಕೃತಿ, ಮತ್ತು ಯೋಗ, ಮಲ್ಲಕಂಬ ಹೀಗೆ ಹತ್ತು ಹಲವಾರು ಪ್ರದರ್ಶನಗಳನ್ನು ನೀಡಿ ಗಮನ ಸೆಳೆದರು.

ಕಾಲೇಜಿನ ಪ್ರಾಚಾರ್ಯರಾದ ಕರ್ನಲ್ ಡಾ.ರಾಹುಲ್ ಶರ್ಮಾ, ಸಂಸ್ಥೆಯ ಅಧ್ಯಕ್ಷ ಎ.ಕೆ.ಕೊಟ್ರಶೆಟ್ಟಿ, ಉಪಾಧ್ಯಕ್ಷ ಅರುಣಾ ಅಕ್ಕಿ, ಕಾರ್ಯಾಧ್ಯಕ್ಷ ಡಾ.ವಿರೇಂದ್ರ ತೆಗ್ಗಿನಮನೆ, ಸದಸ್ಯ ಕಾರ್ಯದರ್ಶಿ ಹಾಗೂ ಶಾಸಕ ಮಹಾಂತೇಶ ಕೌಜಲಗಿ, ಶಿಕ್ಷಣ  ಇಲಾಖೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಆಯುಕ್ತೆ ಶಾಲಿನಿ, ಶಾಲೆಯ ಕ್ಯಾಪ್ಟನ್ ಕೆಡೆಟ್ ಅಪೂರ್ವ ಎನ್ ಡಿ ಉಪಸ್ಥಿತರಿದ್ದರು.

ಇದನ್ನೂ ನೋಡಿ : ಮುಟ್ಟಿನ ರಜೆ ಮಹಿಳೆಯರ ಹಕ್ಕು Janashakthi Media

 

Donate Janashakthi Media

Leave a Reply

Your email address will not be published. Required fields are marked *