ದಾವಣಗೆರೆ: ನಗರದ ಶಾಮನೂರಿನ ಜೆಎಚ್ ಪಟೇಲ್ ಬಡಾವಣೆ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಇಂದು(ಶನಿವಾರ) ವಿದ್ಯಾರ್ಥಿಗಳು ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ನಲ್ಲಿ ಇರುವ ತಾಲೂಕಾ ಸಮಾಜ ಕಲ್ಯಾಣ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಚಿಕನ್
ಈ ವೇಳೆ ಹಾಸ್ಟೆಲ್ ವಾರ್ಡನ್ ಬಗ್ಗೆ ಆಕ್ರೋಶ ಹೊರಹಾಕಿದ ವಿದ್ಯಾರ್ಥಿನಿಯರು ‘ನೀರಲ್ಲಿ ಹುಳು ಬಿದ್ದ ವಿಚಾರ ಹೇಳಿದ್ರೆ ಚಿಕನ್, ಮಟನ್ ತಿಂತೀರಾ ನಿಮಗೆ ಹುಳು ಯಾವ ಲೆಕ್ಕ ಎಂದು ವಾರ್ಡನ್ ಕೇಳುತ್ತಾರೆ ಎಂದು ಆರೋಪಿಸಿದರು.
ಇದನ್ನು ಓದಿ : ದಸರಾ ಆನೆಗಳ ಕಾದಾಟ; ಚಾಣಾಕ್ಷತದಿಂದ ಸಮಾಧಾನ ಪಡಿಸಿದ ಮಾವುತ
ವಿದ್ಯಾರ್ಥಿನಿಯರ ನಡತೆ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ಇದರ ಜೊತೆಗೆ ಮೂರು ತಿಂಗಳಿಂದ ಕುಡಿಯುವ ನೀರು ಹಾಗೂ ಬಳಸಲು ನೀರಿಲ್ಲ. ಊಟದ ವ್ಯವಸ್ಥೆ ಕೂಡ ಸರಿಯಿಲ್ಲ ಎಂದು ಆರೋಪಿಸಿದರು.
ಊರಿಂದ ಓಡಾಡಲು ಬಸ್ ವ್ಯವಸ್ಥೆ ಇರುವುದಿಲ್ಲ, ಹಾಗಾಗಿ ಹಾಸ್ಟೆಲ್‌ನಲ್ಲಿ ಇರ್ತೇವೆ, ನಮಗಾಗಿ ಸರ್ಕಾರ ಸೌಲಭ್ಯ ನೀಡುತ್ತಿದೆ, ಆದರೆ ವಾರ್ಡನ್ ನಡೆದುಕೊಳ್ಳುತ್ತಿರುವದನ್ನು ನೋಡಿದರೆ ಇವರ ಮನೆಯಿಂದ ತಂದು ಹಾಕಿದಂತೆ ಕಾಣುತ್ತೆ. ಹುಳು ಬಿದ್ದಿರುವ ನೀರು ಕುಡಿರಿ, ಆಹಾರ ತಿನ್ನಿ ಎನ್ನುವ ವಾರ್ಡ್‌ನ್ ನಮ್ಮನ್ನು ಮುಂದೆ ಚನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇಲ್ಲ ಹಾಗಾಗಿ ಕೂಡಲೇ ಇವರನ್ನು ಅಮಾನತ್ತು ಮಾಡಿ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದುಕುಳಿತಿದ್ದಾರೆ.
ಸುಡುಬಿಸಿಲಿನಲ್ಲಿ ನಾಲ್ಕೈದು ಗಂಟೆಗಳಿಂದ ಹೋರಾಟ ಮಾಡುತ್ತಿದ್ದರೂ ತಾಲೂಕಾ ಸಮಾಜ ಕಲ್ಯಾಣ ಕಚೇರಿ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ನೋಡಿ : ಸಚಿವರ ಮನೆಗೆ ರೈತರ ಮುತ್ತಿಗೆ | ನಮ್ಮ ಭೂಮಿ ನಮಗೆ ಕೊಡಿ ರೈತರ ಆಗ್ರಹ