ಗುಣಮಟ್ಟದ ಆಹಾರ‌ ವಿತರಿಸುವಂತೆ‌ ಹಾಗೂ ವಾರ್ಡನ್ ಬದಲಿಸುವಂತೆ‌ ಆಗ್ರಹಿಸಿ  ವಿದ್ಯಾರ್ಥಿಗಳು ಪ್ರತಿಭಟನೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಸರ್ಕಾರಿ ಸ್ನಾತಕೋತ್ತರ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು  ಗುಣಮಟ್ಟದ ಆಹಾರ‌ ವಿತರಿಸುವಂತೆ‌ ಹಾಗೂ ಪ್ರಭಾರ ವಾರ್ಡನ್ ಬದಲಿಸುವಂತೆ‌ ಆಗ್ರಹಿಸಿ  ಬುಧವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ‌.

ಇದನ್ನೂ ಓದಿ: ಸರ್ಕಾರಿ ಪ್ರೌಢ ಶಾಲೆಯ ಶುಲ್ಕ – ಬಿಸಿ ಊಟದ ವ್ಯವಸ್ತೆಯಲ್ಲಿ ಅಕ್ರಮ; ಎಸ್ಎಫ್ಐ ಪ್ರತಿಭಟನೆ

‘ಮಂಗಳವಾರ ರಾತ್ರಿ ಊಟಕ್ಕೆ ನೀಡಿದ್ದ ಬೇಳೆ ಸಾರಿನಲ್ಲಿ ಹುಳು ಬಂದಿತ್ತು. ವಿದ್ಯಾರ್ಥಿಗಳು ‌ಪ್ರತಿಭಟನೆ‌ ನಡೆಸಿದ್ದರಿಂದ ಮತ್ತೊಮ್ಮೆ ಸಾರು ಸಿದ್ಧಪಡಿಸಿ ಕೊಡಲಾಗಿತ್ತು. ಇದೀಗ ಬುಧವಾರ ಬೆಳಿಗ್ಗೆ ನಾಸ್ಟಾದಲ್ಲಿ ಉಪ್ಪಿಟ್ಟು ‌ತಯಾರಿಸಲಾಗಿದ್ದು, ಅದರ‌ ಗುಣಮಟ್ಟವೂ ಚೆನ್ನಾಗಿಲ್ಲ’ ಎಂದು ಪ್ರತಿಭಟನೆ‌ ನಿರತ ವಿದ್ಯಾರ್ಥಿಗಳು ‌ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ‌ ಕಲ್ಯಾಣ ಇಲಾಖೆ‌ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರಬೇಕು ಹಾಗೂ ಹಾಸ್ಟೆಲ್ ನ ಪ್ರಭಾರ‌ ವಾರ್ಡನ್ ‌ಬದಲಿಸಬೇಕು, ಗುಣಮಟ್ಟದ ‌ಆಹಾರ‌ ವಿತರಣೆಗೆ ಕ್ರಮವಹಿಸಬೇಕು ಎಂದು ವಿದ್ಯಾರ್ಥಿಗಳು ‌ಆಗ್ರಹಿಸಿದರು.

ಇದನ್ನೂ ನೋಡಿ: ಮೈಸೂರು ದಸರಾ ಉದ್ಘಾಟನೆ : ಬಿಜೆಪಿಯ ಧರ್ಮದ್ವೇಷಕ್ಕೆ ಸಾಹಿತಿಗಳ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *