ಲಕ್ನೋ: ಇಬ್ಬರು ವಿದ್ಯಾರ್ಥಿಗಳ ಬಾಯಿಗೆ ಬಟ್ಟೆ ತುರುಕಿ ಬೆಲ್ಟ್‌ನಿಂದ ಥಳಿಸುತ್ತಿರುವ ಅಮಾನುಷ್ಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದೀಗಾ ವೀಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಒಂದು ತಿಂಗಳ ಹಳೆಯದು ಎಂದು ಹೇಳಲಾದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೀಡಿಯೊ ಶೀರ್ಷಿಕೆಯಲ್ಲಿ, ಉತ್ತರಪ್ರದೇಶದ ಆಗ್ರಾದಲ್ಲಿ ಕ್ರೌರ್ಯ ಮಿತಿಮೀರಿದೆ ಎನ್ನೋದಕ್ಕೆ ಇದೇ ಸಾಕ್ಷಿ. ವಿದ್ಯಾರ್ಥಿ ಶಿವಂ ಮತ್ತು ಆತನ ಸ್ನೇಹಿತನ ಬಾಯಿಗೆ ಬಟ್ಟೆ ತುರುಕಿ ನಂತರ ಬೆಲ್ಟ್‌ನಿಂದ ಪಿಜಿ ಹಾಸ್ಟೆಲ್ ಮ್ಯಾನೇಜರ್ ಅಮಾನುಷವಾಗಿ ಥಳಿಸಿದ್ದಾನೆ. ಬಾಡಿಗೆ ವಿವಾದದ ನಂತರ ವಿದ್ಯಾರ್ಥಿಗಳು ಕೊಠಡಿಯನ್ನು ತೊರೆದಿದ್ದಾರೆ.
ಇದನ್ನು ಓದಿ : ಓವರ್ ಟೇಕ್ ಮಾಡಿದ ಎಂದು ಥಳಿಸಿದ ಜನ; ಯುವಕ ಸಾವು
ವಿಡಿಯೋದಲ್ಲಿರುವ ವಿದ್ಯಾರ್ಥಿಯನ್ನು ಶಿವಂ ಎಂದು ಹೆಸರಿಸಲಾಗಿದೆ. ಇಟಾಹ್ ನಿವಾಸಿಯಾಗಿರುವ ಈತ ಅಧ್ಯಯನಕ್ಕಾಗಿ ಆಗ್ರಾಕ್ಕೆ ಬಂದಿದ್ದನು. ಪಿಜಿ ಹಾಸ್ಟೆಲ್‌ನಲ್ಲಿ ಬಾಡಿಗೆ ಮೊತ್ತದ ವಿಚಾರದಲ್ಲಿ ಜಗಳ ನಡೆದಿದ್ದು, ಭಯದಿಂದ ವಿದ್ಯಾರ್ಥಿ ದೂರು ದಾಖಲಿಸದೆ ಮನೆಗೆ ತೆರಳಿದ್ದಾನೆ ಎಂದು ವರದಿಗಳು ತಿಳಿಸಿವೆ.
ಇತ್ತ ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆಗ್ರಾ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಆಗ್ರಾದ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿ, ಈ ಪ್ರಕರಣ ಹಳೆಯದಾಗಿದ್ದು, ಸಂಬಂಧಪಟ್ಟ ಪಿಜಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯಿಂದ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
The video of students being beaten up is from Agra. Here, 2 students studying in class 11 were being thrashed with a belt by the PG Owner. The video is said to be a month old.#Agra | #UttarPradesh | @agrapolice | @Uppolice | #viralvideo pic.twitter.com/goP7k2WsXx
— Krishna Chaudhary (@KrishnaTOI) October 15, 2024
ಇದನ್ನು ನೋಡಿ : ಕಿರುಕುಳ ಆರೋಪ: ತರಗತಿಯಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಉಪನ್ಯಾಸಕಿ Janashakthi Media