ಬೆಂಗಳೂರು: ಚಂದ್ರಾ ಲೇಔಟ್ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಶಿಕ್ಷಕರು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿ ಇಂದು ಪೋಷಕರು ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಶಿಕ್ಷಕರು ಕಿರುಕುಳ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ನಡುವೆ ಬೋರ್ಡ್ ಮೇಲೆ ಹಿಜಾಬ್ ಬಗ್ಗೆ ಅಶ್ಲೀಲವಾಗಿ ಬರೆದಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆ ವಿವಾದಕ್ಕೆ ಕಾರಣವಾದ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿದೆ. ಹಿಜಾಬ್ ಬಗ್ಗೆ ಅವಹೇಳನಕಾರಿಯಾಗಿ ತರಗತಿಯ ಬೋರ್ಡ್ ನಲ್ಲಿ ಶಿಕ್ಷಕಿ ಶಶಿಕಲಾ ಬರೆದಿದ್ದಾರೆ ಎಂಬ ಆರೋಪದಿಂದ ಇಂದು ಬೆಳಗ್ಗೆ ಚಂದ್ರಾ ಲೇಔಟ್ ನ ವಿದ್ಯಾಸಾಗರ್ ಶಾಲೆ ಬಳಿ ತೀವ್ರ ಗಲಾಟೆ ಉಂಟಾಗಿದ್ದು, ಸ್ಥಳಕ್ಕೆ ಪೋಷಕರು ಬಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದರು.
ಇದನ್ನೂ ಓದಿ : ಹಿಜಾಬ್ ವಿವಾದ: ಕರ್ನಾಟಕದ ನಡೆಯನ್ನು ಟೀಕಿಸಿದ ಅಮೆರಿಕ ಹೇಳಿದ್ದು ಹೀಗೆ
ಸ್ಥಳಕ್ಕೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮತ್ತು ಡಿಡಿಪಿಐ ಉಪ ನಿರ್ದೇಶಕರು ಬಂದಿದ್ದಾರೆ. ಸದ್ಯ ಪೋಷಕರ ಒತ್ತಾಯದ ಮೇರೆಗೆ ಶಿಕ್ಷಕಿ ಶಶಿಕಲಾರನ್ನು ಅಮಾನತುಮಾಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಶಿವಕುಮಾರ್ ತಿಳಿಸಿದ್ದಾರೆ.
ಶಾಲೆಯ ಮೂರು ಮಕ್ಕಳ ಇನಿಷಿಯಲ್ ಕೆಎಲ್ಎಸ್ ಎಂದು ಬರೆದಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಲಾರಂಭಿಸಿದರು. ನಿನ್ನೆ ತರಗತಿಯಲ್ಲಿ ಏನು ನಡೆಯಿತು ಎಂದು ನನಗೆ ಗೊತ್ತಿರಲಿಲ್ಲ. ಇಂದು ಬಿಇಒ ಮತ್ತು ಡಿಡಿಪಿಐ ಬಂದು ಮಾತನಾಡಿದಾಗ ವಿಷಯ ಗೊತ್ತಾಯಿತು ನೀವು ಗಣಿತ ಶಿಕ್ಷಕಿಯಾಗಿ ನಿಮ್ಮ ಕಲಿಕೆಯ ವಿಷಯದ ಬಗ್ಗೆ ಮಾತ್ರ ಮಾತನಾಡಬೇಕು, ಬೇರೆ ಸೂಕ್ಷ್ಮ ವಿಚಾರಗಳನ್ನು ವಿದ್ಯಾರ್ಥಿಗಳ ಜೊತೆ ಮಾತನಾಡಬಾರದು ಎಂದು ಹೇಳಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದರು.