ಕೊಲ್ಲಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ಕುಲಪತಿಯ ವೇಷದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿದ ಕಾರಣಕ್ಕೆ ರಾಜ್ಯಪಾಲರನ್ನು ಪ್ರಶ್ನಿಸುವುದನ್ನಷ್ಟೆ ವಿದ್ಯಾರ್ಥಿಗಳು ಮಾಡಿದ್ದಾರೆ, ರಾಜ್ಯಪಾಲರು ಹೇಳಿದಂತೆ ಪ್ರತಿಭಟನಾಕಾರರು ಗೂಂಡಾಗಳೋ ಅಥವಾ ಕ್ರಿಮಿನಲ್‌ಗಳಲ್ಲ, ಅವರು ನಮ್ಮ ನೆಲದ ಭವಿಷ್ಯದ ಭರವಸೆಗಳು ಎಂದು ಮಂಗಳವಾರ ಹೇಳಿದ್ದಾರೆ. “ವಿದ್ಯಾರ್ಥಿಗಳ ಆರಂಭಿಕ ಪ್ರತಿಭಟನೆಗೆ ಕಿವಿಗೊಡದಿದ್ದಾಗ, ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದು ಪ್ರಜಾಪ್ರಭುತ್ವದ ಶಕ್ತಿ ಮತ್ತು ಕೇರಳದ ಅನನ್ಯತೆಯನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಕೊಲ್ಲಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, “ಅಗತ್ಯ ಭದ್ರತಾ ಕ್ರಮಗಳಿಲ್ಲದೆ ಕೋಝಿಕ್ಕೋಡ್‌ನ ಬೀದಿಗಳಲ್ಲಿ ಸಂಚರಿಸುವ ಮೂಲಕ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೇರಳದ ಕಾನೂನು ಮತ್ತು ಸುವ್ಯವಸ್ಥೆ ‘ಸುರಕ್ಷಿತ ಮತ್ತು ಆರೋಗ್ಯಕರ’ ಎಂದು ದೇಶಕ್ಕೆ ತೋರಿಸಿದ್ದಾರೆ. ಭಾರತದ ಇತರ ಎಷ್ಟು ರಾಜ್ಯಗಳು ಅಂತಹ ಸ್ಥಾನಗಳನ್ನು ಹೊಂದಿರುವ ಜನರು ಪೂರ್ವ ಭದ್ರತಾ ವ್ಯವಸ್ಥೆಗಳನ್ನು ಮಾಡದೆ ಬೀದಿಗಳಲ್ಲಿ ನಡೆಯಲು ಸುರಕ್ಷಿತವಾಗಿವೆ? ಇದು ಕೇರಳದ ವಿಶೇಷ. ಕೇರಳದ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ ಎಂಬುದನ್ನು ಸ್ವತಃ ರಾಜ್ಯಪಾಲರು ಅರಿತುಕೊಂಡಿದ್ದಾರೆ ಮತ್ತು ತಮ್ಮ ಕಾರ್ಯಗಳ ಮೂಲಕ ದೇಶಕ್ಕೆ ಅದನ್ನೇ ತೋರಿಸಿದ್ದಾರೆ” ಎಂದು ಹೇಳಿದ್ದಾರೆ. ಕುಲಪತಿ
ಇದನ್ನೂ ಓದಿ: ಸೋನಿಯಾ ಗಾಂಧಿ ಅವರನ್ನು ಲೋಕಸಭೆ ಚುನಾವಣೆಗೆ ರಾಜ್ಯದಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ ತೆಲಂಗಾಣ ಕಾಂಗ್ರೆಸ್
ಅದಾಗ್ಯೂ, ಒಂದು ರಾಜ್ಯದ ರಾಜ್ಯಪಾಲರಂತಹ ಉನ್ನತ ಸ್ಥಾನವನ್ನು ಹೊಂದಿರುವ ವ್ಯಕ್ತಿಯು ರಾಜ್ಯವು ಎಷ್ಟೇ ಸುರಕ್ಷಿತ ಮತ್ತು ಸುಭದ್ರವಾಗಿದ್ದರೂ, ತಾನು ಆಯ್ಕೆ ಮಾಡಿಕೊಂಡಂತೆ ಮಾಡಲು ಸ್ಥಾಪಿತ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಬಾರದು ಎಂದು ಸಿಎಂ ಹೇಳಿದ್ದು, ಅದಾಗ್ಯೂ ಇದು ಉತ್ತಮ ಆಯ್ಕೆಯಲ್ಲ, ಇದು ತಪ್ಪು ಎಂದು ಪಿಣರಾಯಿ ಹೇಳಿದ್ದಾರೆ. ಕುಲಪತಿ
“ಗವರ್ನರ್ ಭದ್ರತೆಯನ್ನು ನಿರಾಕರಿಸಲಿ ಅಥವಾ ಇಲ್ಲದಿರಲಿ, Z+ ಭದ್ರತಾ ವರ್ಗಕ್ಕೆ ಸೇರಿದವರಿಗೆ ಭದ್ರತೆಯನ್ನು ನೀಡುವುದು ಕೇರಳ ಪೊಲೀಸರ ಕರ್ತವ್ಯವಾಗಿದೆ. ರಾಜ್ಯಪಾಲರ ಇಷ್ಟ-ಅನಿಷ್ಟಗಳ ಪ್ರಕಾರ ಅಲ್ಲ, ಅವರ ಸ್ಥಾನಕ್ಕೆ ಅದನ್ನು ನೀಡಲಾಗುತ್ತದೆ. ಅದನ್ನು ಖಚಿತವಾಗಿ ನೀಡಲಾಗುವುದು” ಎಂದು ಪಿಣರಾಯಿ ಹೇಳಿದ್ದಾರೆ.
“ರಾಜ್ಯಪಾಲರು ಮಿಟಾಯಿ ತೆರುವು (ಕೋಝಿಕೋಡ್‌ನ ಎಸ್‌ಎಂ ಸ್ಟ್ರೀಟ್) ಅಂಗಡಿಗಳಿಗೆ ಭೇಟಿ ನೀಡಿದರು. ಅಲ್ಲಿನ ಸಿಹಿತಿಂಡಿಗಳನ್ನು ಸಹ ಸವಿದರು. ಒಂದರ್ಥದಲ್ಲಿ ಅವರು ಮಾಡಿದ್ದು ಒಳ್ಳೆಯದೇ – ಆ ಮೂಲಕ ಬೀದಿಯ ಕೀರ್ತಿಗೆ ಕಾರಣರಾಗಿದ್ದಾರೆ. ಇದು ಕೇರಳದ ಆರೋಗ್ಯಕರ ಮತ್ತು ಸುರಕ್ಷಿತ ಪರಿಸ್ಥಿತಿಗಳನ್ನು ಎತ್ತಿ ತೋರಿಸಲು ಸಹಾಯ ಮಾಡಿದೆ” ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಶಂಕುಸ್ಥಾಪನೆಯಲ್ಲಿ ಪಾಲ್ಗೊಳ್ಳದಂತೆ ಅಡ್ವಾಣಿ, ಜೋಶಿಗೆ ಮನವಿ!
ಭದ್ರತಾ ಸಮಸ್ಯೆ ಉಂಟು ಮಾಡುವ ಉದ್ದೇಶದಿಂದ ರಾಜ್ಯಪಾಲರು ಪೊಲೀಸ್ ರಕ್ಷಣೆ ನಿರಾಕರಿಸಿದ್ದಾರೆಯೇ ಎಂಬ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಪಿಣರಾಯಿ ವಿಜಯನ್, “ರಾಜ್ಯಪಾಲರೇ ತಲೆಯಲ್ಲಿ ಏನಿದೆ ಎನ್ನುವುದನ್ನು ಅವರೇ ಹೇಳಬೇಕು” ಎಂದು ಹೇಳಿದ್ದಾರೆ. ಆದಾಗ್ಯೂ, ಕೇರಳದಲ್ಲಿ ಪ್ರತಿಭಟನೆಗಳು ಎಂದಿಗೂ ನಿಯಂತ್ರಣ ಮೀರುವ ರೀತಿಯಲ್ಲಿ ಇರುವುದಿಲ್ಲ ಎಂಬುವುದನ್ನು ರಾಜ್ಯಪಾಲರು ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಕುಲಪತಿ
“ರಾಜ್ಯಪಾಲರು ಎದುರಿಸಿದ ಪ್ರತಿಭಟನೆಗಳು ಅವರಿಂದಾಗಿ ಉಂಟಾದ ಸಮಸ್ಯೆಗಳ ಕಾರಣಕ್ಕಾಗಿದೆ. ಅದಕ್ಕಾಗಿ ಅವರು ಬೇರೆ ಕಡೆ ನೋಡುವ ಅಗತ್ಯವಿಲ್ಲ. ರಾಜ್ಯಪಾಲರು ಹೇಳಿದಂತೆ ಪ್ರತಿಭಟನಾಕಾರರು ಗೂಂಡಾಗಳೋ ಅಥವಾ ಕ್ರಿಮಿನಲ್‌ಗಳಲ್ಲ. ಅವರು ನಮ್ಮ ನೆಲದ ಭವಿಷ್ಯದ ಭರವಸೆಗಳನ್ನು ಹೊಂದಿರುವ ವಿದ್ಯಾರ್ಥಿಗಳು. ಕುಲಪತಿಯ ವೇಷದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿದ ಕಾರಣಕ್ಕೆ ರಾಜ್ಯಪಾಲರನ್ನು ಪ್ರಶ್ನಿಸುವುದನ್ನಷ್ಟೆ ಅವರು ಮಾಡಿದ್ದು” ಎಂದು ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಬೆಂಬಲಿಸಿದ್ದಾರೆ.
ಸರ್ಕಾರ ಮತ್ತು ಅದರ ನವ ಕೇರಳ ಸದಸ್ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಕೇರಳ ವಿದ್ಯಾರ್ಥಿ ಒಕ್ಕೂಟದ ಪ್ರತಿಭಟನೆಗಳು ಪ್ರಜಾಸತ್ತಾತ್ಮಕವಾಗಿಲ್ಲವೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, “ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರತಿಭಟನೆ ಪ್ರಜಾಸತ್ತಾತ್ಮಕವಾಗಿರಬೇಕೋ ಬೇಡವೋ ಎಂಬುದನ್ನು ಅವರೇ ನಿರ್ಧರಿಸಬೇಕು. ಆದರೆ ಅವರು ಏನನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಅವರು ಹೇಳಬೇಕಿದೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಸಮುದಾಯ ರಾಜ್ಯ ಸಮ್ಮೇಳನ : ರಂಗಗೀತೆಗಳು : ಜರ್ನಿ ಥಿಯೇಟರ್ ತಂಡದಿಂದ Janashakthi Media