ಬೆಳಗಾವಿ: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ನೀಡದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪಿಎಚ್ ಡಿ ಸ್ಕಾಲರ್ ವಿದ್ಯಾರ್ಥಿನಿಯನ್ನು ಸುಜಾತಾ ಬೆಂಡೆ (32) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ರಾಣಿ ಚನ್ನಮ್ಮ ವಿವಿಯ 14 ನೇ ಘಟಿಕೋತ್ಸವದಲ್ಲಿ ಸುಜಾತಾ ಅವರಿಗೆ ಪಿಎಚ್ ಡಿ ನೀಡಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನದಲ್ಲಿ : ಸಾಹಾಸ್ ಸಂಸ್ಥೆಯಿಂದ ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ – ರಾಧ ಬಿ ಎಸ್
ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸುಜಾತಾ ಪಿಎಚ್ ಡಿ ಮಾಡುತ್ತಿದ್ದರು. ಆದರೆ ರಾಣಿ ಚನ್ನಮ್ಮ ವಿವಿಯ 14 ನೇ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿ ಕೊಟ್ಟಿರಲಿಲ್ಲ. ಇದರಿಂದ ತೀವ್ರ ಮನನೊಂದ ಸುಜಾತಾ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ ಎಂ ತ್ಯಾಗರಾಜ್, ರಿಜಿಸ್ಟರ್ ಸಂತೋಷ ಕಾಮೇಗೌಡ ಬೇಕೆಂದೇ ನನ್ನನ್ನು ಟಾರ್ಗೆಟ್ ಮಾಡಿ ಪಿಎಚ್ ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪ್ರೊ. ಕೆ ಎಲ್ ಎನ್ ಮೂರ್ತಿ ಅವರು ನನಗೆ ಗೈಡ್ ಮಾಡುತ್ತಿದರು. ಗೈಡ್ ಮೂರ್ತಿಯವರ ಕಿರುಕುಳ ಕುರಿತಾಗಿ ನಾನು ಈ ಹಿಂದೆ ಕುಲಪತಿ ಹಾಗೂ ರಿಜಿಸ್ಟರ್ ಗೆ ದೂರು ನೀಡಿದ್ದೆ. ಅದರಂತೆ ಗೈಡ್ ಕಿರುಕುಳ ಸಮಸ್ಯೆ ಬಗೆಹರಿಸಲಾಗಿತ್ತು. ಆದರೆ ಇದೀಗ ಎಲ್ಲಾ ಸಮಸ್ಯೆ ಬಗೆಹರಿದರೂ ಕೂಡ ನಮಗೆ ಪಿಎಚ್ ಡಿ ಪದವಿ ನೀಡಲಿಲ್ಲ. ಬೇಕೆಂದೇ ನನ್ನನ್ನು ಟಾರ್ಗೆಟ್ ಮಾಡಿ ಪಿಎಚ್ ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದು ಹೇಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಸುಜಾತಾ ಅವರು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ನೋಡಿ : ನಾಟಕ| ಸಂಪತ್ತಿಗೆ ಸವಾಲ್ | ಮೀಡಿಯಾ ಕ್ಲಬ್ ಕೊಪ್ಪಳ |ಪಿ.ಬಿ. ಧುತ್ತರಗಿ Janashakthi Media
