ಗುಡಿಬಂಡೆ: ಬ್ರಿಟಿಷರ ಅನ್ಯಾಯ ಮತ್ತು ಬುಡಕಟ್ಟು ಜನರ ಶೋಷಣೆಯ ವಿರುದ್ಧ ಬಿರ್ಸಾ ಮುಂಡಾ ಧ್ವನಿ ಎತ್ತುವ ಮೂಲಕ ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದರು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಇದನ್ನೂ ಓದಿ : ಹಾಸನ | ಧರ್ಮವನ್ನು ತೋರಿಸಿ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿ – ಕೆ ಹೇಮಲತಾ ಆರೋಪ
ಡಾ.ಕೆ.ಎಂ.ನಯಾಜ್ ಅಹ್ಮದ್ ರಚಿಸಿದ “ಬಿರ್ಸಾ ಮುಂಡಾನನ್ನು ಹುಡುಕುತ್ತಾ ಎಂಬ ಸಂಶೋಧನೆ ಕೃತಿಯನ್ನು ಗುಡಿಬಂಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು ಅಂತಹವರ ಸಾಲಿಗೆ ಬಿರ್ಸಾ ಮುಂಡಾ ಕೂಡ ಸೇರಿದ್ದಾರೆ. ಬಿರ್ಸಾ ಮುಂಡಾ ಅವರು 1875 ರ ನವೆಂಬರ್ 15 ರಂದು ಜಾರ್ಖಂಡ್ನ ಉಲಿಹಾತು ಎಂಬ ಗ್ರಾಮದಲ್ಲಿ ಜನಿಸಿದರು. ಇವರು ಹೋರಾಟದಲ್ಲಿ ಪ್ರಮುಖ ಬುಡಕಟ್ಟು ನಾಯಕರಾಗಿ ಗುರುತಿಸಿ ಕೊಂಡರು ಎಂದರು.
ಡಾ.ಕೆ.ಎಂ.ನಯಾಜ್ ಅಹ್ಮದ್ ಮಾತನಾಡಿ ಆದಿವಾಸಿ ಬುಡಕಟ್ಟು ಮಂದಿ ತಮ್ಮ ಅಸ್ಮಿತೆಗಾಗಿ ಬಿರ್ಸಾ ಮುಂಡಾರಂತೆ ಹೋರಾಡಬೇಕಿದೆ. ತಮ್ಮ ಹಕ್ಕುಗಳನ್ನು ತಾವುಗಳೇ ಪಡೆದುಕೊಳ್ಳಬೇಕಿದೆ. ದೀನ ದಲಿತರಿಗೆ, ದಮನಿತರಿಗೆ, ಶೋಷಿತರಿಗೆ ಅಂಬೇಡ್ಕರ್ ಶಕ್ತಿ ಯಾದಂತೆ, ಸ್ವಾಭಿಮಾನದ ಹೋರಾಟಗಾರ ಬಿರ್ಸಾ ಮುಂಡಾ ಆದಿವಾಸಿಗಳ ಶಕ್ತಿಯಾಗ ಬೇಕು. ಮುಗ್ದತೆಯಿಂದ, ಹಿಂಜರಿಕೆಯಿಂದ ಹೊರಬಂದು ಸಂವಿಧಾನದ ಆಶಯದಂತೆ ಬಾಳಬೇಕು, ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಮಂಜುನಾಥ, ಪ್ರಾಂಶುಪಾಲ ಅಬ್ಜಲ್ ಬಿಜಲಿ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಇಒ ನಾಗಮಣಿ, ವೈ.ನಾರಾಯಣನ್, ಸಿಡಿಪಿಒ ರಫೀಕ್, ವಕೀಲ ಎಂ.ಜಿ ಸುಧಾಕರ್, ಮುನಿಕೃಷ್ಣ, ಚಿನ್ನ ಕೈವಾರಮ್ಯ, ಆದಿರೆಡ್ಡಿ, ಡಿ.ಎನ್ ಕೃಷ್ಣಾರೆಡ್ಡಿ, ಶಿವಪ್ಪ, ವೆಂಕಟಚಲಯ್ಯ, ಸನ ನಾಗೇಂದ್ರ, ಪ್ರಕಾಶ್, ಕೃಷ್ಣೇಗೌಡ, ಸುಲೇಮಾನ್, ಎಚ್.ಪಿ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.
