ಬಾಲಕಿಯ ಆತ್ಮಹತ್ಯೆಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ: ಎಸ್.ಎಫ್.ಐ ಪ್ರತಿಭಟನೆ

ಬಳ್ಳಾರಿ: ತಾಳುರು ಗ್ರಾಮದಲ್ಲಿ ಅಪ್ರಾಪ್ತ ಶಾಲಾ ಬಾಲಕಿಯು ಲೈಂಗಿಕ ದೌರ್ಜನ್ಯದಿಂದ ಆತ್ಮಹತ್ಯೆಗೆ ಕಾರಣನಾದ ಸುರೇಶ್ ಹಾಗೂ ಸಂಗಡಿಗರಿಗೆ ಕಠಿಣ ಶಿಕ್ಷೆ ವಿಧಿಸಿ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ರಕ್ಷಣೆ ಹಾಗೂ 25 ಲಕ್ಷ ಪರಿಹಾರಕ್ಕಾಗಿ ಒತ್ತಾಯಸಿ  3-05-2025 ರಂದು ಎಸ್ಎಫ್ಐ ನೇತೃತ್ವದಲ್ಲಿ ಮಾನ್ಯ ಉಪ ಪೊಲೀಸ್ ವರಿಷ್ಠಾಧಿಕಾರ, (DYSP) ಇವರಿಗೆ ಪ್ರತಿಭಟನೆ ಮೂಲಕ ಮನವಿ ಪತ್ರವನ್ನು ನೀಡಲಾಯಿತು. ಕಾರಣ

ಈ ಸಂದರ್ಭದಲ್ಲಿ SFI ತಾಲೂಕು ಸಂಚಾಲಕ ಶಿವರೆಡ್ಡಿ ಮಾತನಾಡಿ, ತಾಳೂರು ಗ್ರಾಮದಲ್ಲಿ 10 ನೇ ತರಗತಿಯ 14 ವರ್ಷದ ಬಾಲಕಿಯ ಮೇಲೆ 26 ವರ್ಷದ ಯುವಕ ಸುರೇಶ ತುಂಬಾ ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ದಿನಾಂಕ 30-04-2025 ರಂದು ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಾರಣ

ದಿನಾಂಕ 02.05.2025 ರಂದು ಸಂಜೆ SFI, DYFI. CITU ಸಂಘಟನೆ ನೇತೃತ್ವದಲ್ಲಿ ಸಂತ್ರಸ್ತ ಕುಟುಂಬದ ಮನೆಗೆ ನಿಯೋಗ ಭೇಟಿಕೊಟ್ಟು ಘಟನೆಯ ವಿವರ ಪಡೆಯಲಾಯಿತು. ಘಟನೆಯಿಂದ ಧೃತಿಗೆಟ್ಟು ಅತಂಕದಲ್ಲಿರುವ ದುಃಖತಪ್ತ ಕುಟುಂಬದಿಂದ ಘಟನೆಯ ವಿವರ ನೀಡಲು ಸಮಯಾವಕಾಶ ಬೇಕಿದೆ. ಕಾರಣ

ಇದನ್ನೂ ಓದಿ: ಎಲ್‌ಕೆಜಿ ಮತ್ತು ಯುಕೆಜಿ ಪ್ರವೇಶಕ್ಕೆ ವಯೋಮಿತಿಯಲ್ಲಿ ಯಾವುದೇ ಸಡಿಲಿಕೆ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ

ಅಪರಾಧಿಯು ಮನೆಯ ಪಕ್ಕದಲ್ಲೇ ಇದ್ದು ಅಮಾನವೀಯ ಕೃತ್ಯದ ಹಿಂದೆ ಅವನ ಕುಟುಂಬ ಸದಸ್ಯರು ಹಾಗೂ ದೃಷ್ಠ ಸ್ನೇಹಿತರ ಗ್ಯಾಂಗ ಸೇರಿದೆ. ಸಮೂಹಿಕ ರೇಪ್ ಆಗಿದೆ ಎಂಬ ಅನುಮಾನ ಜನರು ವ್ಯಕ್ತಪಡಿಸುತ್ತಿರುವರು. ಮತ್ತು ಜಿಲ್ಲೆಯ SP ಯವರ ಮುಂದೆ ಅಪರಾಧಿಯು ಸ್ವತಃ ನಾನೇ ಮಾಡಿದ್ದು ಅಂತ ಒಪ್ಪಿಕೊಂಡಿದ್ದಾನೆ,  ಇನ್ನು ಉಳಿದಂತ ಅಪರಾಧಿಗಳನ್ನು ಸಮಗ್ರವಾದ ತನಿಖೆ ನಡೆಸಿ ಘಟನೆಯಲ್ಲಿ ಪಾಲ್ಗೊಂಡ ಹಾಗೂ ಸಹಾಯ ಹಾಗೂ ಪ್ರಚೋದನೆ ನೀಡಿದ ಕುಟುಂಬ, ವ್ಯಕ್ತಿಗಳನ್ನು ಭಹಿರಂಗ ಪಡಿಸಿ ಬಂಧಿಸಬೇಕೆಂದು SFI  ಒತ್ತಾಯಿಸಿದೆ.

ಆತಂಕದಲ್ಲಿರುವ ಸಂತ್ರಸ್ತ ಕುಟುಂಬವು ತನಿಖೆಗೆ ವಿವರ ನೀಡಲು ಸಾಧ್ಯವಾಗಿಲ್ಲ. ನಿಯೋಗ ಬೇಟಿ ಸಂದರ್ಭದಲ್ಲಿ ಮನೆಗೆ ಬಂದ ಕುಟುಂಬಕ್ಕೆ ಘಟನೆಯ ಮನೆಯಲ್ಲಿ ಬಂಗಾರದ ಒಡೆವೆಗಳು, ನಗದು ಹಣ ದೋಚಿರುವದು ತಿಳಿದು ಬಂದಿದೆ. ಗ್ರಾಮದಲ್ಲಿ ಇದಕ್ಕೂ ಮುಂಚಿತವಾಗಿ ಸಹ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಾ ಬಂದಿವೆ.

ಮರ್ಯಾದೆ ಹಾಗೂ ಭಯದಿಂದ ಬೆಳೆಕಿಗಿ ಬಾರದೆ ಮುಚ್ಚಿ ಹೋಗಿವೆ. ಬಾಲಕಿಯರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಬಾಲಕಿಯರನ್ನು ಶಾಲಾ ಕಾಲೇಜುಗಳಿಗೆ ಕಳಿಸಲು ಹಿಂಜೆರಿಯುತ್ತಾರೆ. ಸಂಡೂರು ತಾಲೂಕಿನ ಬಹುತೇಕ ಶಾಲೆಗಳು ವಾಸಸ್ಥಳ, ಗ್ರಾಮಗಳ ಹೊರವಲಯದಲ್ಲಿವೆ.

ಶಾಲಾ ಮಕ್ಕಳಿಗೆ ಪ್ರಯಾಣ, ಸುರಕ್ಷತೆಯ ಕೊರತೆಯಿದೆ. ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪುಂಡರನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಬೇಕೆಂದು SFI ಮುಖಂಡು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ  SFI ತಾಲೂಕು ಸಂಚಲನ ಸಮಿತಿ ಸದ್ಯಸರುಗಳಾದ ಅಕ್ಷಯ್ ಕುಮಾರ್, ಶಂಕರ್, CITU ಬಿಸಿ ಊಟ ನೌಕರರ ಸಂಘದ ತಾಲೂಕು ಅಧ್ಯಕ್ಷರು ದ್ರಾಕ್ಷಿಯಾನಿ, DYFI ತಾಲೂಕು ಅಧ್ಯಕ್ಷರು ಶರೀಫ್, DYFI ಜಿಲ್ಲಾ ಪದಾಧಿಕಾರಿಯಾದ ಕಾಲೂಬ್ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಬಸವ ಜಯಂತಿ ವಿಶೇಷ | ಬಸವಣ್ಣನ ವಚನಗಳು | ಎಚ್.ಸಿ. ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *