ದಕ್ಷಿಣಕನ್ನಡ : ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸುರತ್ಕಲ್ ವಲಯ ಮಟ್ಟದ ಬೀದಿಬದಿ ವ್ಯಾಪಾರಿಗಳ ಸಮಾವೇಶವು ಇಂದು ಸುರತ್ಕಲ್ ನಗರದ ಕರ್ನಾಟಕ ಸೇವಾ ವೃಂದದ ವೇದಿಕೆಯಲ್ಲಿ ಜರಗಿತು.
ಸಂಘದ ಗೌರವಾಧ್ಯಕ್ಷರಾದ ಬಿಕೆ ಇಮ್ತಿಯಾಜ್ ಸಮಾವೇಶ ಉದ್ಘಾಟಿಸಿದರು ನಂತರ ಮಾತನಾಡಿದ ಅವರು ಬೀದಿ ವ್ಯಾಪಾರಿಗಳ ಬದುಕುವ ಹಕ್ಕಿನ ಮೇಲೆ ಧಾಳಿ ಮಾಡಲಾಗಿದೆ. ದೂರದೃಷ್ಟಿತ್ವದ ಯೋಜನೆ, ಯೋಚನೆಗಳಿಲ್ಲದೆ ಟೈಗರ್ ಕಾರ್ಯಾಚರಣೆ ನಡೆಸಲಾಗಿದೆ. ಬೀದಿ ವ್ಯಾಪಾರ ವಲಯ ಘೋಷಣೆ ಮಾಡುವಾಗ ಬೀದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅವೈಜ್ಞಾನಿಕವಾಗಿ ವಲಯ ಸ್ಥಾಪನೆಗೆ ಮುಂದಾಗಿದ್ದಾರೆ.
ಸುರತ್ಕಲ್ ವಲಯ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಬೀದಿ ವ್ಯಾಪಾರಿಗಳಿದ್ದಾರೆ ಅವರಿಗಾಗಿ ಮಹಾನಗರ ಪಾಲಿಕೆಯ ಸುರತ್ಕಲ್ ವಲಯ -1 ಆಯುಕ್ತರ ಅದ್ಯಕ್ಷತೆಯಲ್ಲಿ ಪಟ್ಟಣ ವ್ಯಾಪಾರ ಸಮಿತಿ ರಚನೆ ಮಾಡಬೇಕೆಂದು ಆಗ್ರಹಿಸಿದರು. ಟೈಗರ್ ಕಾರ್ಯಾಚರಣೆಯಲ್ಲಿ ವಶಪಡಿಸಲಾದ ಸರಕನ್ನು ವಾಪಸ್ ಕೊಡಬೇಕು,ಹಾನಿಗೊಳಗಾದ ವಸ್ತುಗಳಿಗೆ ಪರಿಹಾರ ನೀಡಿ ಸಮರ್ಪಕ ಬೀದಿ ವ್ಯಾಪಾರ ವಲಯ ರಚನೆ ಆಗುವವರೆಗೆ ಯಥಾಸ್ಥಿತಿ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಇದನ್ನು ಓದಿ : ಕನಕಗಿರಿಯ ಶೈಕ್ಷಣಿಕ ಸರ್ವತೋಮುಖ ಅಭಿವೃದ್ಧಿಗಾಗಿ ಆಗ್ರಹಿಸಿ ಎಸ್ ಎಫ್ ಐ ಪ್ರಥಮ ಸಮ್ಮೇಳನ
ಸಂಘದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ ಎಸ್ , ಅಧ್ಯಕ್ಷರಾದ ಮುಜಾಫರ್ ಅಹ್ಮದ್ ಮಾತನಾಡಿದರು. ಸಂಘದ ಹಿರಿಯ ಸದಸ್ಯರಾದ ಧನಂಜಯ ಸುರತ್ಕಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಿಜಯ್, ಭಾಸ್ಕರ್ ತಡಂಬೈಲ್, ಶೈಲಾ ಸಿಕ್ವೇರಾ, ಫೆಲಿಕ್ಸ್ ನಜರತ್, ಸಲಾಂ ಜನತಾಕಾಲನಿ, ಅಜೀಜ್ ಕೃಷ್ಣಾಪುರ,ಬಾಲಕೃಷ್ಣ, ಮೊಯ್ದಿನ್ ಎಂ ಎಸ್ ಬೈಕಂಪಾಡಿ, ಹರೀಶ್ ಬೈಕಂಪಾಡಿ,ಯಲ್ಲನ ಗೌಡ ಮುಂತಾದವರು ಉಪಸ್ಥಿತರಿದ್ದರು.ಹನೀಫ್ ಇಡ್ಯಾ ಸ್ವಾಗತಿಸಿ ವಂದಿಸಿದರು.
ಸಮಾವೇಶದಲ್ಲಿ ಇ ಕೆಳಕಂಡ ನಿರ್ಣಯ ಕೈಗೊಳ್ಳಲಾಯಿತು
1. ಮಹಾನಗರ ಪಾಲಿಕೆಯ ಸುರತ್ಕಲ್ ವಲಯ-1 ರ ವ್ಯಾಪ್ತಿಯ ಎಲ್ಲಾ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪ್ರತ್ಯೇಕ ಪಟ್ಟಣ ವ್ಯಾಪಾರ ಸಮಿತಿ ರಚಿಸುವುದು.
2. 667ರ ಪಟ್ಟಿಯಲ್ಲಿರುವ ಸುರತ್ಕಲ್ ವ್ಯಾಪ್ತಿಯ ಬೀದಿ ವ್ಯಾಪಾರಿಗಳಿಗೆ ಕೂಡಲೇ ಐಡಿ ಕಾರ್ಡ್ ವಿತರಿಸಬೇಕು.*
3. ಸುರತ್ಕಲ್ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ವ್ಯಾಪಾರಿಸ್ನೇಹಿ, ಗ್ರಾಹಕಸ್ನೇಹಿ ಬೀದಿ ವ್ಯಾಪಾರ ವಲಯ ರಚನೆ ಮಾಡಬೇಕು
4. ಬೀದಿ ವ್ಯಾಪಾರಿಗಳ ಮೇಲಿನ ಧಾಳಿ, ದಬ್ಬಾಳಿಕೆ ನಿಲ್ಲಿಸಿ ಅವರ ಬದುಕುವ ಹಕ್ಕನ್ನು ರಕ್ಷಣೆ ಮಾಡಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು.
ಇದನ್ನು ನೋಡಿ : GST ಕುರಿತು ಪ್ರಶ್ನೆ ಕೇಳಿದ ಉದ್ಯಮಿ; ಕ್ಷಮೆ ಕೇಳಿಸಿದರೇ ನಿರ್ಮಲಾ ಸೀತಾರಾಮನ್?Janashakthi Media