ಬೆಂಗಳೂರು | ‘ಪ್ರಜಾವಾಣಿ ದೀಪಾವಳಿ ಕಥೆ ಮತ್ತು ಕವನ ಸ್ಪರ್ಧೆ: ದಯಾನಂದ ಸೇರಿ ಆರು ಜನರಿಗೆ ಬಹುಮಾನ

ಬೆಂಗಳೂರು : ದಯಾನಂದ ಅವರ ಕಥೆ ‘ಹಾತೆಮರಿಗೆ ಹಾರುವುದ ಕಲಿಸಲು ರೆಕ್ಕೆಯೇ ಬೇಕಿಲ್ಲ’ ಹಾಗೂ ಡಾ.ಲಕ್ಷ್ಮಣ ವಿ.ಎ. ಅವರ ಕವನ ‘ಬಾಳಿಕೆ’ ಆಯಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿವೆ.  2025ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥೆ ಮತ್ತು ಕವನ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರು

ಇದನ್ನೂ ಓದಿ : ಯಲ್ಲಾಲಿಂಗ ಕೊಲೆ ಪ್ರಕರಣ| ಬಲಾಡ್ಯರ ಕಡೆ ವಾಲಿದ ನ್ಯಾಯ – ಮತ್ತೊಮ್ಮೆ ಯಲ್ಲಾಲಿಂಗನ ಕೊಲೆ

ಬಿ.ಶ್ರೀನಿವಾಸ ಅವರ ‘ಶವಪೆಟ್ಟಿಗೆ’, ಜಿ.ಸಿ. ರವಿ ಅವರ ‘ಕೈ ಹಿಡಿದು ನಡೆಸೆನ್ನ ತಂದೆ’, ಇಂದ್ರಕುಮಾರ್ ಎಚ್.ಬಿ. ಅವರ ‘ಸುತ್ತಿಹುದು ಸುಳಿಯಿಹುದು ಸತ್ತಿಹುದು ಸತಾಯಿಸುತಿಹುದು’, ಎಂ.ಎಸ್‌.ಶೇಖರ್‌ ಅವರ ‘ವರಹಾ ಪ್ರಸಂಗ’ ಹಾಗೂ ವಿಕಾಸ್ ನೇಗಿಲೋಣಿ ಅವರ ‘ಅಂತಿಮ ಯಾತ್ರೆ’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಕಥಾಸ್ಪರ್ಧೆಯಲ್ಲಿ ಪ್ರಸಾದ ಶೆಣೈ ಆರ್.ಕೆ. ಅವರ ‘ಗುಡು ಗುಡು ಗೊಮ್ಮಟದೇವ’ ಹಾಗೂ ಮಹಾದೇವ ಹಡಪದ ಅವರ ‘ತಾಯಿಪುರಾಣ’ ಕಥೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನಕ್ಕೆ ಭಾಜನವಾಗಿವೆ.

ಕವನ ಸ್ಪರ್ಧೆಯಲ್ಲಿ ಟಿ.ಎಚ್.ಲವಕುಮಾರ ಅವರ ‘ಹರಾಜು’ ಮತ್ತು ಪಿ.ನಂದಕುಮಾರ್‌ ಅವರ ‘ಕಲ್ಯಾಣ ಮುಡಿದಿದೆ ಮುತ್ತಿನುಂಗುರ ಸಾಲು’ ಕವನಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಸ್ಮಿತಾ ಅಮೃತರಾಜ್ ಸಂಪಾಜೆ ಅವರ ‘ಸ್ಥಿತಿ’, ದೀಪ್ತಿ ಭದ್ರಾವತಿ ಅವರ ‘ಒಂದು ಭೇಟಿ ಎಷ್ಟು ಕಷ್ಟ’, ರೇಣುಕಾ ರಮಾನಂದ ಅವರ ‘ತುಲಾಭಾರ’, ಸದಾಶಿವ ಸೊರಟೂರು ಅವರ ‘ವ್ಯಾಕರಣ ಸುಳ್ಳು ಹೇಳಬಾರದು’ ಹಾಗೂ ಶಂಕರ್ ಸಿಹಿಮೊಗ್ಗೆ ಅವರ ‘ಅರ್ಥ’ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.

ಸಾಹಿತಿ ಪ್ರೊ.ಸಬಿಹಾ ಭೂಮಿಗೌಡ ಹಾಗೂ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕವಿ ವಿಕ್ರಮ ವಿಸಾಜಿ ಹಾಗೂ ಕವಯತ್ರಿ ಗೀತಾ ವಸಂತ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಇದನ್ನೂ ನೋಡಿ : ನಮಗೆ 10 ಸಾವಿರ ಪಿಂಚಣಿ ನೀಡಿ – ವಿಕಲಚೇತನರ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *