ಕಾನ್ ಚಿತ್ರೋತ್ಸವದಲ್ಲಿ ಅತ್ಯಚಾರದ ವಿರುದ್ಧ ಮಹಿಳೆಯ ಆಕ್ರೋಶ

ಪ್ಯಾರಿಸ್: ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ ಭಾಷಣ ಮತ್ತು   ಉಕ್ರೇನ್ ನಿರ್ಮಾಪಕರು ಹಲವು ಉಕ್ರೇನ್ ಸಿನಿಮಾವನ್ನು ಪ್ರದರ್ಶನ ಮಾಡಿದ್ದಾರೆ ಈ ನಡುವೆ ಎಲ್ಲರ ಒಡನಾಟ ಗಮನಿಸಿದ ಉಕ್ರೇನಿಯನ್ ಹೋರಾಟಗಾರ್ತಿ ಸಭೆಯ ಮಧ್ಯೆಯಲ್ಲಿ “ನಮ್ಮ ಮೇಲಿನ ಅತ್ಯಚಾರ ನಿಲ್ಲಿಸಿ “ಎಂದು ಬಟ್ಟೆಯನ್ನು ಕಳಚಿ ಆಕ್ರೋಶಿಸಿದ್ದಾರೆ.

ಎದೆಯ ಮೇಲೆ ಉಕ್ರೇನ್ ಧ್ವಜದ ನೀಲಿ ಮತ್ತು ಹಳದಿ ಬಣ್ಣದಲ್ಲಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾಳೆ. ಕಾಲು ಮತ್ತು ತೊಡೆಯಲ್ಲಿ ಕೆಂಪು ಬಣ್ಣದಲ್ಲಿ ಚಿತ್ರೀಸಿಕೊಂಡಿದ್ದಾಳೆ. ಮಹಿಳೆ ಕೂಗಾಡಲು ಪ್ರಾರಂಭ ಮಾಡುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‍ಗಳು ಆಕೆಯನ್ನು  ಆ ಕಾರ್ಯಕ್ರಮದಿಂದ ಹೊರಗೆ ಕಳುಹಿಸಿದ್ದಾರೆ.

ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‍ನ  ಪ್ರದರ್ಶನದ ವೇಳೆ ಉಕ್ರೇನಿಯನ್ ಮಹಿಳೆ ಈ ರೀತಿ ಪ್ರತಿಭಟನೆ ಮಾಡಿದ್ದಾಳೆ.  ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಪ್ರಾರಂಭದಿಂದಲೂ, ರಷ್ಯಾದ ಸೈನಿಕರು ಉಕ್ರೇನಿಯನ್ ನಾಗರಿಕರ ಮೇಲೆ ಅತ್ಯಾಚಾರವೆಸಗುತ್ತಿರುವ ಕುರಿತು ಹಲವಾರು ವರದಿಗಳು ಬಂದಿವೆ.

ಈ ಘಟನೆಯು ಉಕ್ರೇನ್ ಬಿಕ್ಕಟ್ಟನ್ನು ಮತ್ತೊಮ್ಮೆ ಬೆಳಕಿಗೆ ತಂದಿತು. ಇದಕ್ಕೂ ಮುನ್ನ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉತ್ಸವದ ಉದ್ಘಾಟನೆಯ ಕುರಿತು ಸಂದೇಶ ನೀಡಿದ್ದರು. ಯುದ್ಧದ ವಿರುದ್ಧ ಮಾತನಾಡಲು ಅವರನ್ನು ಕಾನ್ ಚಿತ್ರೋತ್ಸವಕ್ಕೆ ಕರೆಯಲಾಗಿತ್ತು.

 

Donate Janashakthi Media

Leave a Reply

Your email address will not be published. Required fields are marked *