ಪಶ್ಚಿಮ ಬಂಗಾಳ: ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿನ ಮೇಲೆ ಕಲ್ಲು ತೂರಾಟ

Please follow and like us:

ಹೌರಾ: ಪಶ್ಚಿಮ ಬಂಗಾಳದಲ್ಲಿ ನೆನ್ನೆ ತಡರಾತ್ರಿ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಹೌರಾದ ರೈಲು ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.  ರೈಲಿನ ಕೆಲವು ಬೋಗಿಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.

ರೈಲು ಹೌರ ರೈಲು ನಿಲ್ದಾಣದಿಂದ ಮಾಲ್ಡಾ ಮಾರ್ಗವಾಗಿ ಡಾರ್ಜಿಲಿಂಗ್‌ ಗೆ ತೆರಳುತ್ತಿತ್ತು. ಮುರ್ಷಿದಾಬಾದ್ ಜಿಲ್ಲೆಯ ಫರಕ್ಕಾ ಬಳಿ ಕಲ್ಲು ತೂರಾಟ ನಡೆದಿದೆ. ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದೆ ಎಂದು ಆರ್‌ಪಿಎಫ್ ಕಮಾಂಡರ್ ಮಾಹಿತಿ ನೀಡಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಸಿ3 ಮತ್ತು ಸಿ6 ಬೋಗಿಗೆ ಕಲ್ಲು ತೂರಾಟದಿಂದಾಗಿ ಹಾನಿಗೀಡಾಗಿರುವುದು ಕಂಡುಬಂದಿದೆ.

ಕಳೆದ ಫೆಬ್ರುವರಿ ಹಾಗೂ ಜನವರಿ ತಿಂಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಇಂತಹ ಘಟನೆಗಳು ದುರದೃಷ್ಟಕರ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೂರ್ವ ರೈಲ್ವೆಯ ಕೌಶಿಕ್ ಮಿತ್ರ ತಿಳಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Please follow and like us:
Donate Janashakthi Media

Leave a Reply

Your email address will not be published. Required fields are marked *