ನವದೆಹಲಿ: ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರುತ್ತಿದ್ದಂತೆಯೇ ಇತ್ತ ಷೇರುಮಾರುಕಟ್ಟೆ ಏರಿದ್ದು, ಮೋದಿ ಸರಕಾರ ರಚನೆ ನಂತರ ಷೇರು ಮಾರುಕಟ್ಟೆಗೆ ಕಳೆ ಬರುತ್ತದೆ ಎಂಬ ತಜ್ಞರ ಮಾತು ನಿಜವಾಗಿದೆ. ಪ್ರಮಾಣ
ಷೇರು ಮಾರುಕಟ್ಟೆ ಪ್ರಗತಿ ಕಳೆದ ವಾರದಿಂದ ಆರಂಭವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶ, ಪ್ರಮಾಣ ವಚನ ಸ್ವೀಕಾರ ಮತ್ತೆ ಈಗ ಖಾತೆ ಹಂಚಿಕೆ ಪ್ರಕ್ರಿಯೆಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದ್ದು, ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಅಪಹರಣ ಆರೋಪ ತಳ್ಳಿಹಾಕಿದ ಭವಾನಿ ರೇವಣ್ಣ
ಭಾನುವಾರ ನಡೆದ ಪ್ರಮಾಣ ವಚನ ಸ್ವೀಕಾರದ ನಂತರ ಮಾರುಕಟ್ಟೆ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 76,890.34 ಏರಿಕೆ ಕಂಡಿದ್ದು ಶೇ.0.3 ರಷ್ಟು ಪ್ರಗತಿ ಸಾಧಿಸಿದೆ. ಇನ್ನು ನಿಫ್ಟಿ 23,372 ಕ್ಕೇರಿದ್ದುಶೇ. 0.4 ರಷ್ಟು ಏರಿಕೆ ದಾಖಲಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೆನ್ಸೆಕ್ಸ್ 76,960 ಆಗಿದ್ದು ನಿಫ್ಟಿ 23,411.90 ತನಕ ಮುಟ್ಟಿದೆ. ಎಲ್ಲ ಪ್ರಗತಿ ಸೂಚನೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಸಂತಸ ಕಂಡು ಬಂದಿದೆ. ಹಣಕಾಸು, ರಸ್ತೆ ನಿರ್ಮಾಣ. ಎನರ್ಜಿ, ವಾಣಿಜ್ಯ, ರೈಲ್ವೇ ಖಾತೆಗಳು ಹಂಚಿಕೆ ಆದರೆ ಈ ಎಲ್ಲ ಪ್ರಗತಿ ನಡೆಯಲಿವೆ.
ಮುಂದಿನ ವಾರದಲ್ಲಿ ಕೂಡ ಮಾರುಕಟ್ಟೆ ಏರುಗತಿಯಲ್ಲಿ ಇರಲಿದೆ ಎಂದು ಷೇರು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಮುಂದಿನ ವಾರ ನಡೆಯಲಿರುವ ಸಂಪುಟ ಸಚಿವರಿಗೆ ಸ್ಥಾನ ಮಾನ ಹಂಚುವ ಪ್ರಕ್ರಿಯೆ ಈ ಏರುಗತಿಗೆ ಕಾರಣ ಎನ್ನಲಾಗಿದೆ.
ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಬಿಜೆಪಿಯ ಗರ್ವಭಂಗವೇ? ಕಾಂಗ್ರೆಸ್ ಗೆ ಶಾಪ ವಿಮೋಚನೆಯೇ? Janashakthi Media