ತಿರುವನಂತಪುರಂ: ರಾಜ್ಯದಲ್ಲಿ ಶಿಕ್ಷಣವನ್ನು ಡಿಜಿಟಲ್ ಮೂಲಕ ಮುಂದುವರಿಸಲು ಬೇಕಾಗುವ ಸರ್ವ ರೀತಿಯ ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಮೂರನೇ ಅಲೆ ಮುಗಿದ ನಂತರವೂ ಏನು ಸಂಭವಿಸಲೆ ಎಂಬುದು ತಿಳಿದಿಲ್ಲ ಹಾಗಾಗಿ ವಿವಿಧ ಮೂಲಗಳಿಂದ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಶಿಕ್ಷಣಕ್ಕೆ ಆದ್ಯತೆ ನೀಡಿ ಡಿಜಿಟಲ್ ಕಲಿಕೆಗೆ ಉಚಿತ ಇಂಟರ್ನೆಟ್ ಮತ್ತು ಸಂಪರ್ಕವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ವಿಧಾನಸಭಾ ಅಧಿವೇಶನದಲ್ಲಿ ಕೇರಳದ ಆಡಳಿತರೂಢ ಎಲ್‌ಡಿಎಫ್ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಇದನ್ನು ಓದಿ: ಶಾಲಾ ಶಿಕ್ಷಣ ಗುಣಮಟ್ಟ – ಕೇರಳ, ತಮಿಳುನಾಡು ಅತ್ಯುತ್ತಮ
ವಿಧಾನಸಭೆಯಲ್ಲಿ ಪ್ರಶ್ನೋತ್ತೋರ ವೇಳೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಪಿಣರಾಯಿ ವಿಜಯನ್ ಅವರು ಸರಕಾರವು ಗಮನಾರ್ಹ ಸಂಖ್ಯೆಯ ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಟಿವಿ, ಅಥವಾ ಸ್ಮಾರ್ಟ್‌ಫೋನ್ ಪಡೆಯಲು ಸಾಧ್ಯವಿಲ್ಲವಾಗಿದೆ. ಅನೇಕರು ಶೈಕ್ಷಣಿಕವಾಗಿ ಹಿಂದುಳಿದಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸಲು ಸರ್ಕಾರ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದರು.
ಡಿಜಿಟಲ್ ಶಿಕ್ಷಣದಲ್ಲಿ ಯಾವುದೇ ರೀತಿಯಲ್ಲಿ ಭಿನ್ನತೆ ಇರುವುದಿಲ್ಲ. ಅಗತ್ಯ ನಿಬಂಧನೆಯನ್ನು ಸರ್ಕಾರ ಮಾಡಲಿದೆ. ಕೆಲವು ಮಕ್ಕಳಿಗೆ ಡಿಜಿಟಲ್ ಕಲಿಕೆಗೆ ಬೇಕಾದ ಉಪಕರಣಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಮೊದಲ ಅಲೆ ಎದುರಾದಾಗ, ಎರಡನೇ ಅಲೆ ಬಗ್ಗೆ ಯೋಚಿಸಿರಲಿಲ್ಲ. ಈಗ ಮೂರನೇ ಅಲೆ ಬಗ್ಗೆ ಸೂಚನೆಗಳು ಬಹಳ ದಟ್ಟವಾಗಿದೆ. ಕೋವಿಡ್ ಸ್ವಲ್ಪ ಸಮಯದವರೆಗೆ ನಮ್ಮೊಂದಿಗೆ ಇರಲಿದೆ ಎಂದು ಇದು ಸೂಚಿಸುತ್ತದೆ. ಆದ್ದರಿಂದ, ಆನ್‌ಲೈನ್ ಶಿಕ್ಷಣವು ತ್ವರಿತವಾಗಿ ಕೊನೆಗೊಳ್ಳುತ್ತದೆ ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬರಿಗೂ ಪಠ್ಯಪುಸ್ತಕದಂತಹ ಡಿಜಿಟಲ್ ಸಾಧನ ಬೇಕು. ಅದಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನು ಓದಿ: ಗೆದ್ದೆವು ಎಂದು ಕಾಲಹರಣ ಮಾಡಿದ ಕೇಂದ್ರ-ಮುಂಬರುವ ಪರಿಣಾಮದ ಕಡೆ ಗಮನ ಹರಿಸಲಿಲ್ಲ: ಅಮರ್ತ್ಯ ಸೇನ್
ಅನೇಕ ವಿದ್ಯಾರ್ಥಿಗಳು, ವಿಶೇಷವಾಗಿ ಬುಡಕಟ್ಟು ಮಕ್ಕಳು, ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಅಥವಾ ಮೊಬೈಲ್ ಫೋನ್ ನೆಟ್‌ವರ್ಕ್ ಇಲ್ಲದ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಕೆಲವು ಕುಟುಂಬಗಳು ಸಂಪರ್ಕ ಸೇವಾ ಪೂರೈಕೆದಾರರು ವಿಧಿಸುವ ಇಂಟರ್‌ನೆಟ್ ದರವನ್ನು ಭರಿಸಲಾಗುತ್ತಿಲ್ಲ ಎಂದು ಅವರು ವಿವರಿಸಿದರು.
ಹಲವೆಡೆ ಸಂಪರ್ಕ ಸಮಸ್ಯೆ ಇನ್ನು ಇವೆ. ಈಗಾಗಲೇ ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರ ಸಭೆ ನಡೆಸಲಾಗಿದೆ ಮತ್ತು ಕೆಎಸ್‌ಇಬಿ ಮತ್ತು ಕೇಬಲ್ ನೆಟ್‌ವರ್ಕ್ ಸಹಾಯದಿಂದ ಸಂಪರ್ಕವನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.