ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಐಎಸ್‌ಎಲ್ ಮತ್ತು ಸೇಲಂ ಉಕ್ಕು ಸ್ಥಾವರಗಳ ಪುನಶ್ಚೇತನ ಸಂಬಂಧಿಸಿದಂತೆ ನಡೆದ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (ವಿಐಎಸ್‌ಎಲ್) ಹಾಗೂ ಸೇಲಂ ಉಕ್ಕು ಸ್ಥಾವರಗಳ ಪುನಶ್ಚೇತನದ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ತ್ವರಿತವಾಗಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿ | ಚನ್ನರಾಯಪಟ್ಟಣ ಭೂ ಸ್ವಾಧೀನ ರೈತರಿಗೆ ನೋಟಿಸ್ ನೀಡಿದ ಕೆಐಎಡಿಬಿ ಅಧಿಕಾರಿಗಳು
ವಿಐಎಸ್‌ಎಲ್‌ನಲ್ಲಿ ಹಂತ ಹಂತವಾಗಿ ಆಧುನೀಕರಣ, ಫೋರ್ಜಿಂಗ್ ಪ್ರಯೋಗ ಸೇರಿದಂತೆ ಪುನಶ್ಚೇತನ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ಕುಮಾರಸ್ವಾಮಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸೇಲಂ ಉಕ್ಕು ಸ್ಥಾವರದಲ್ಲಿ ಜಾಗತಿಕ ಪಾಲುದಾರಿಕೆಯೊಂದಿಗೆ ಖರೀದಿ ಹಾಗೂ ಉತ್ಪಾದನಾ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ: ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media
