ಕೋಲ್ಕತ್ತಾ: ಆಹಾರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಆದಿವಾಸಿ ಸಮುದಾಯದ 13 ವರ್ಷದ ಮಗುವನ್ನು ಟಿಎಂಸಿ ಪಂಚಾಯತ್ ಸದಸ್ಯ ಮನೋರಂಜನ್ ಮಲ್ ಮತ್ತು ಅವರ ನೇತೃತ್ವದ ಗುಂಪಿನವರು ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ. ಬಲಿಯಾದ ಬಾಲಕ ಸಬಾಂಗ್‌ನ ಬೋರೋಚರಾ ಗ್ರಾಮದ ನಿವಾಸಿಯಾಗಿದ್ದು, ಅಳಿವಿನಂಚಿನಲ್ಲಿರುವ ಲೋಧಾ ಶಬರ್ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಬ್ರಿಟಿಷರ ಆಳ್ವಿಕೆಯಲ್ಲಿ ಶಬರರನ್ನು ಕ್ರಿಮಿನಲ್ ಬುಡಕಟ್ಟು ಎಂದು ಪರಿಗಣಿಸಲಾಗಿತ್ತು. ಬುಡಕಟ್ಟು ಜನಾಂಗವನ್ನು ಅಪರಾಧಿಗಳು ಎಂದು ಬಿಂಬಿಸುವ ಕಾಯಿದೆಯನ್ನು ರದ್ದುಗೊಳಿಸಲಾಗಿದೆಯಾದರೂ, ಸಮುದಾಯವು ಬಹಿಷ್ಕಾರವನ್ನು ಎದುರಿಸುತ್ತಲೇ ಇದೆ. ಹತ್ಯೆಗೀಡಾದ ಸಂತ್ರಸ್ತ ಬಾಲಕ ”ಹಸಿವಿನ ಕಾರಣಕ್ಕೆ ಆಹಾರ ಕದ್ದಿದ್ದಾರೆ” ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ರಗತಿಪರ ಸಾಹಿತಿಗಳಿಗೆ ಜೀವ ಬೆದರಿಕೆ ಪ್ರಕರಣ| ಹಿಂದುತ್ವ ಸಂಘಟನೆ ಕಾರ್ಯಕರ್ತ ಅರೆಸ್ಟ್..!
ಘಟನೆಯ ಸುದ್ದಿ ಹರಡುತ್ತಿದ್ದಂತೆ, ನೂರಾರು ಸ್ಥಳೀಯರು ಸ್ಥಳೀಯ ರಾಜ್ಯ ಹೆದ್ದಾರಿಯನ್ನು ತಡೆದು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಂತ್ರಸ್ತ ಮಗುವಿನ ಸಹೋದರ ಪರಮೇಶ್ವರ್ ನಾಯ್ಕ್ ಅವರು ಸಬಾಂಗ್ ಪೊಲೀಸ್ ಠಾಣೆಯಲ್ಲಿ ಸುಭಾ ನಾಯ್ಕ್ ಹತ್ಯೆ ಕುರಿತು ದೂರು ದಾಖಲಿಸಿದ್ದಾರೆ. ಮಗುವಿನ ತಂದೆ ವಲಸೆ ಕಾರ್ಮಿಕರಾಗಿದ್ದು, ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯು ಬುಧವಾರ ಸಂಜೆ ನಡೆದಿದ್ದು, ಸ್ಥಳೀಯ ಟಿಎಂಸಿ ಪಂಚಾಯಿತಿ ಸದಸ್ಯ ಕಳ್ಳತನ ಆರೋಪದಲ್ಲಿ ಮಗುವನ್ನು ಹಿಡಿದಿದ್ದರು. ನಂತರ ಟಿಎಂಸಿ ನಾಯಕನ ನೇತೃತ್ವದ ಗುಂಪು ಮಗುವನ್ನು ಸಲೂನ್‌ಗೆ ಕರೆದೊಯ್ದು, ತಲೆ ಬೋಳಿಸಿ, ಮರಕ್ಕೆ ಕಟ್ಟಿಹಾಕಿ ರಾತ್ರಿಯಿಡೀ ಚಿತ್ರಹಿಂಸೆ ನೀಡಿದೆ. ಗುರುವಾರ ಬೆಳಗ್ಗೆ ಗ್ರಾಮದ ರಸ್ತೆಯಲ್ಲಿ ಅವರ ನಿರ್ಜೀವ ಶವ ಪತ್ತೆಯಾಗಿದೆ. ಘಟನೆ ವಿರೋಧಿಸಿ ಸಾರ್ವಜನಿಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಮನೋರಂಜನ್ ಮಲ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕ ಸುಭಾ ನಾಯಕ್ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 9 ಅಡಿ 11 ಅಡಿ ಕಿಟಕಿಗಳಿಲ್ಲದ ಕೋಣೆಯಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಟಿಎಂಸಿ ಪಂಚಾಯತ್ ಸದಸ್ಯ ಈ ಕೋಣೆಯನ್ನು ತನ್ನ ಕಳ್ಳಭಟ್ಟಿ ಕ್ಲಬ್ ಸ್ಥಾಪಿಸಲು ಬಯಸಿದ್ದನು ಎಂದು ಆರೋಪಿಸಲಾಗಿದೆ. ಆದಿವಾಸಿ
ಇದನ್ನೂ ಓದಿ: ಹಿಂದುತ್ವದ ಗೆಲುವಿಗೆ ವಾಟ್ಸ್ ಆ್ಯಪ್ ಅಪಪ್ರಚಾರ:ಬಿಜೆಪಿ ಐಟಿ ವಿಂಗ್ ಸಂಚು!
ಮಗು ಕಳ್ಳತನ ಮಾಡಿದೆ ಎಂದು ಆರೋಪಿಸಿ ಅಪರಾಧವನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸಲಾಗಿತ್ತು. ಮಗುವಿನ ಮೇಲೆ ಆಹಾರದ ಹೊರತಾಗಿ ಅಡುಗೆ ಪಾತ್ರೆ ಮತ್ತು ಗುದ್ದಲಿಯನ್ನು ಕದ್ದ ಆರೋಪ ಕೂಡಾ ಹೊರಿಸಲಾತಗಿತ್ತು. “13 ವರ್ಷದ ಬಾಲಕನನ್ನು ಅಪರಾಧಗಳನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸಲಾಯಿತು. ಅಲ್ಲದೆ, ಆವಾಸ್ ಯೋಜನೆಯ ಕೊಠಡಿಯನ್ನು ಪಂಚಾಯತ್ ಸದಸ್ಯನಿಗೆ ವರ್ಗಾಯಿಸಲು ಅವನ ತಾಯಿಯನ್ನು ಕೇಳಲಾಯಿತು” ಎಂದು ಸ್ಥಳೀಯರು ಹೇಳಿದ್ದಾರೆ ಎಂದು ನ್ಯೂಸ್ ಕ್ಲಿಕ್ ವರದಿ ಮಾಡಿದೆ. ಆದಿವಾಸಿ
ಮತ್ತೊಂದೆಡೆ, ಮಗು ವಿಷ ಸೇವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದಾಗ್ಯೂ, ಸಂತ್ರಸ್ತ ಮಗುವಿನ ತಂದೆ ಬತಾಶ್ ನಾಯಕ್ ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಸ್ಥಳೀಯ ಪಕ್ಷದ ಸದಸ್ಯರು ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾ ಆದಿವಾಸಿ ಅಧಿಕಾರ ರಕ್ಷಾ ಮಂಚ್ “ಕ್ರೂರ ಹತ್ಯೆ” ಯನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರವನ್ನು ಕೋರಿದೆ.
ಘಟನೆಯನ್ನು ಸಿಪಿಐ(ಎಂ) ಪಶ್ಚಿಮ ಬಂಗಾಳ ಘಟಕ ಖಂಡಿಸಿದ್ದು, “ದೆಹಲಿಯಿಂದ ಸಬಾಂಗ್‌ವರೆಗೆ, ಮತೀಯ ಮತ್ತು ಕೋಮುವಾದಿ ರಾಜಕಾರಣದ ಜೊತೆಗೆ ಬಡವರ ಮೇಲಿನ ದ್ವೇಷವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಅಧಿಕಾರದ ಕ್ರೂರ ದುರಹಂಕಾರ ಮತ್ತು ನಿರ್ದಯ ಬಹುಸಂಖ್ಯಾತವಾದದ ಪರಿಣಾಮವಾಗಿದೆ” ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ಡಿ. ಸಲೀಂ ಹೇಳಿದ್ದಾರೆ.
ವಿಡಿಯೊ ನೋಡಿ: ‘ಹೊಸ ಪಠ್ಯಪುಸ್ತಕ ರಚನೆ ಬದಲಿಗೆ ಮತ್ತೆ ಮತ್ತೆ 12 ವರ್ಷ ಹಳೆಯದಾದ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತಿರುವುದು ಯಾಕೆ?’