ಜೆರುಸಲೆಮ್: ಇಸ್ರೇಲ್ ಇದೀಗ ಡಬಲ್ ಸಂಕಷ್ಟಕ್ಕೆ ಸಿಲುಕಿದೆ, ಒಂದು ಕಡೆ ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಯುದ್ಧ ನಡೆಸುತ್ತಿದೆ. ಯುದ್ಧದ ಕಾರಣಕ್ಕೆ ಗಾಜಾ ಪಟ್ಟಿ ಸೇರಿದಂತೆ ಲೆಬನಾನ್ ಹಾಗೂ ಸಿರಿಯಾ ಮೇಲೂ ದಾಳಿ ಮಾಡುತ್ತಿದೆ. ಇನ್ನೊಂದು ಕಡೆ ತನ್ನ ದೇಶದ ಮೇಲೆ ಆಕ್ರಮಣ ನಡೆಯುವ ಭೀತಿ ಕೂಡ ಎದುರಿಸುತ್ತಿದೆ.
ಇಂತಹ ಸಮಯದಲ್ಲೇ, ಕಾಡ್ಗಿಚ್ಚು ಹೊತ್ತಿಕೊಂಡು ನರಳುತ್ತಿರುವ ದೇಶ, ಇದೀಗ ದಿಢೀರ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಕಾರ್ಮಿಕರಿಲ್ಲದೆ ಸಮಾಜದ ಚಕ್ರ ತಿರುಗದು – ಬಿಕೆ ಇಮ್ತಿಯಾಜ್
ಹೊರವಲಯದಲ್ಲಿ ಭಾರಿ ಕಾಡ್ಗಿಚ್ಚುಗಳು ಉಂಟಾಗಿದ್ದು, ಇಸ್ರೇಲ್ ಅಧಿಕಾರಿಗಳು ಕೇವಲ 24 ಗಂಟೆಗಳಲ್ಲಿ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಬೇಕಾಯಿತು. 13 ಕ್ಕೂ ಅಧಿಕ ಮಂದಿಗಂಭೀರಾಗಿ ಗಾಯಗೊಂಡಿದ್ದಾರೆ.
ಸುತ್ತಮುತ್ತಲಿನ ಬೆಟ್ಟಗಳ ತುದಿಯಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಅನೇಕ ಮಂದಿ ತಮ್ಮ ಕಾರುಗಳನ್ನು ಬಿಟ್ಟು ಜ್ವಾಲೆಯಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. 160 ಕ್ಕೂ ಹೆಚ್ಚು ರಕ್ಷಣಾ ಮತ್ತು ಅಗ್ನಿಶಾಮಕ ದಳಗಳು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿವೆ.