ಬೆಂಗಳೂರು: ಯುವಜನರನ್ನು ಕೇಂದ್ರೀಕರಿಸಿ ಜನಶಿಕ್ಷಣ ಟ್ರಸ್ಟ್ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ಕು.ವೆಂ.ಪು. ರವರ ಯುವಜನರಿಗೆ ‘ವಿಚಾರಕ್ರಾಂತಿಗೆ ಆಹ್ವಾನ’ ಕ್ಕೆ ಐವತ್ತು ವರ್ಷಗಳಾಗಿವೆ. ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆ ನೀಡಿ ತೊಂಬತ್ತು ವರ್ಷಗಳಾಗಿವೆ. ಇಂದಿಗೂ ಅವು ಪ್ರಸ್ತುತವಾಗಿವೆ. ‘ವಿಚಾರಕ್ರಾಂತಿಗೆ ಆಹ್ವಾನ’ ಮತ್ತು ಯುವಜನರಿಗೆ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಎರಡು ವಿಷಯದಲ್ಲಿ ತಮಗೆ ಇಷ್ಟವಾದ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಬಂಧ ಬರೆಯಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಎರಡೂ ಪ್ರಬಂಧಗಳು ʻಜನಶಕ್ತಿ ಮೀಡಿಯಾʼ ಯೂಟ್ಯೂಬ್‌ನ ಪಾಡ್‌ಕಾಸ್ಟ್‌ನಲ್ಲಿ ಆಡಿಯೋ ರೂಪದ ಪಠ್ಯವಿದ್ದು, ಅದನ್ನು ಬಳಸಿಕೊಳ್ಳಬಹುದಾಗಿದೆ. ಆಡಿಯೋ ಲಿಂಕ್ ಕೇಳಲು ಇಲ್ಲಿ ಕ್ಲಿಕ್ ಮಾಡಿ: https://youtube.com/playlist?list=PLcvbOOs8etgTobXZqlIIFKz27NdX5B092&si=Exc_f9AIbYPVeh31
ಇದನ್ನೂ ಓದಿ: ಕೋಗಿಲು ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು – ಕೋಮುವಾದೀಕರಣ ನಿಲ್ಲಿಸಲು ಸಿಪಿಐ(ಎಂ) ಅಗ್ರಹ
ಪದವಿ ಪೂರ್ವ, ಪದವಿ ಮತ್ತು ಸ್ನಾತಕ್ಕೋತ್ತರ ವಿದ್ಯಾರ್ಥಿಗಳು ಪ್ರಬಂಧವನ್ನು ಬರೆಯಲು ಅರ್ಹರಾಗಿದ್ದಾರೆ. 2000 ಶಬ್ದಗಳಿಗೆ ಮೀರದಂತೆ ಪ್ರಬಂಧವನ್ನು ನುಡಿ/ ಯುನಿಕೋಡ್ ಇಲ್ಲವೆ ಬರವಣಿಗೆಯ ಮೂಲಕವೂ ಕಳುಹಿಸಬಹುದಾಗಿದೆ. ಉತ್ತಮ ಪ್ರಬಂಧಗಳನ್ನು ಜನಶಿಕ್ಷಣ ಟ್ರಸ್ಟ್ ನಡೆಸುವ ವೆಬ್ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಬಹುಮಾನ ರೂ 5000, ಎರಡನೆಯ ಬಹುಮಾನ ರೂ 3000, ಮೂರನೆಯ ಬಹುಮಾನ ರೂ. 1000 ಇರಲಿದೆ.

ಪ್ರಬಂಧ ಸ್ಪರ್ಧೆಯ ನಿಯಮಗಳು
1) ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬೇಕು. ತಮ್ಮ ಹೆಸರು, ದೂರವಾಣಿ ಸಂಖ್ಯೆ, ಕಾಲೇಜಿನ ಗುರುತಿನ ಚೀಟಿಯ ಝರಾಕ್ಸ್ ಪ್ರತಿಯನ್ನು ಪ್ರಬಂಧದ ಜೊತೆ ಲಗತ್ತಿಸಬೇಕು.
2) ಪ್ರಬಂಧವನ್ನು ಇಮೇಲ್ ಮೂಲಕ ಕಳುಹಿಸುವುದಾದರೆ [email protected] ಗೆ ಕಳುಹಿಸಬಹುದು. ವಾಟ್ಸ್‌ಪ್ ಮೂಲಕ ಕಳುಹಿಸುವುದಾದರೆ.. 63604 53158 ಸಂಖ್ಯೆಗೆ ವಾಟ್ಸ್‌ಪ್ ಮಾಡಬಹುದು. ಕೈ ಬರಹದಲ್ಲಿ ಕಳುಹಿಸುವುದಾದರೆ ಜನಶಿಕ್ಷಣ ಟ್ರಸ್ಟ್, ನಂ 70, ಸುಬ್ಬರಾಮಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ ಬೆಂಗಳೂರು – 560004 ಈ ವಿಳಾಸಕ್ಕೆ ಕಳುಹಿಸಬಹುದು.
3) ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಬೇಕು
4) ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕ ಬಹುಮಾನ ನೀಡಲಾಗುವುದು
5) ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಕುರಿತು ಪತ್ರ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ
6) ಜನವರಿ 30 ಅಂತಿಮ ದಿನಾಂಕವಾಗಿರುತ್ತದೆ. ನಂತರ ಬರುವ ಪ್ರಬಂಧವನ್ನು ಪರಿಗಣಿಸುವುದಿಲ್ಲ
ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆಗೆ ಪ್ರತ್ಯೇಕ ಕಾಯ್ದೆಗೆ ಸಿದ್ಧತೆ!?| ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
