ಬೆಂಗಳೂರು| ಸೈಬರ್ ಅಪರಾಧ ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ

ಬೆಂಗಳೂರು: ಸೈಬರ್ ಅಪರಾಧದ ಭೀತಿಯಿಂದ ಜನರನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಹಾಕಿದ್ದೂ, ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್‌ಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಇದು ಕರ್ನಾಟಕಕ್ಕೆ ಗೌರವ ತರಿಸುವ ಬೆಳವಣಿಗೆಯಾಗಿದೆ. ಬೆಂಗಳೂರು

ಈ ಸಂದರ್ಭದಲ್ಲಿ ಮಾತಾನಾಡಿದ ಗೃಹಸಚಿವ ಜಿ. ಪರಮೇಶ್ವರ್, ಕರ್ನಾಟಕದ ಆರ್ಥಿಕ ಸ್ಥಿತಿ ಬಲಿಷ್ಠವಾಗಿದೆ. ಇತ್ತೀಚೆಗೆ ಕೆಲವೊಂದು ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಅಂತಹ ಘಟನೆಗಳ ತಕ್ಷಣದ ತನಿಖೆ ಹಾಗೂ ತಡೆಗಟ್ಟಲು ಈ ಕಮಾಂಡ್ ಸೆಂಟರ್ ಬೆಂಬಲವಾಗಲಿದೆ ಎಂದರು. ಬೆಂಗಳೂರು

ಈ ಕಮಾಂಡ್ ಸೆಂಟರ್‌ನ್ನು ಪ್ರತ್ಯೇಕ ತನಿಖಾ ಘಟಕದಂತೆಯೇ ರೂಪಿಸಲಾಗಿದ್ದು, ದೇಶದಲ್ಲೇ ಈ ರೀತಿಯ ಕೊನೆಯ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಮೊದಲ ಘಟಕ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ಪಡೆದುಕೊಂಡಿದೆ. ಈ ಘಟಕವು ನೇರವಾಗಿ ಸೈಬರ್ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವುದು, ತಕ್ಷಣದ ದಾಖಲೆ ಸಂಗ್ರಹ ಹಾಗೂ ತಾಂತ್ರಿಕ ಸಹಾಯ ಒದಗಿಸುವ ಕೆಲಸವನ್ನು ನಿರ್ವಹಿಸಲಿದೆ.

ಇದನ್ನೂ ಓದಿ: ಗಾಜಾದ ಅಪಾರ್ಟ್‌ಮೆಂಟ್ ಮೇಲೆ ಇಸ್ರೇಲಿ ಹಾರಿ ದಾಳಿ: ಕನಿಷ್ಠ 23 ನಾಗರಿಕರು ಸಾವು

ಘಟಕದ ಡಿ‌ಐ‌ಜಿ ಆಗಿ ಭೂಷಣ್ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ IGP, SP ಹುದ್ದೆಗಳಿಗೂ ಅಧಿಕಾರಿಗಳನ್ನು ಹಂತ ಹಂತವಾಗಿ ನೇಮಕ ಮಾಡುವ ಉದ್ದೇಶ ಸರ್ಕಾರದದ್ದಾಗಿದೆ. ಪ್ರಣವ್ ಮೊಹಾಂತಿಗೆ ಈ ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹೊಣೆಗಾರಿಕೆಯನ್ನು ನೀಡಲಾಗಿದೆ.

ಸೈಬರ್ ಕಮಾಂಡ್ ಸೆಂಟರ್ ನಿರ್ಮಾಣದಿಂದ, ಡಿಜಿಟಲ್ ಯುಗದಲ್ಲಿ ಜನರ ಖಾತರಿ ಹಾಗೂ ಸುರಕ್ಷತೆ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಘಟಕದ ಚಟುವಟಿಕೆಗಳು ಜಾರಿಯಾಗಲಿದ್ದು, ತಕ್ಷಣದ ಸ್ಪಂದನೆ, ತಾಂತ್ರಿಕ ನೈಪುಣ್ಯತೆ, ನವೀನ ತಂತ್ರಜ್ಞಾನ ಬಳಕೆ ಮೂಲಕ ಅಪರಾಧಿಗಳಿಗೆ ಕೈಗೆಟುಕುವ ಯೋಜನೆಯಾಗಿ ರೂಪುಗೊಳ್ಳಲಿದೆ.

ಜತೆಗೆ ಈ ಘಟಕವು ಕೇವಲ ತನಿಖೆಗೆ ಮಾತ್ರ ಸೀಮಿತವಲ್ಲದೆ, ಸೈಬರ್‌ ಕ್ರೈಮ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಮತ್ತು ಡಿಜಿಟಲ್ ಲಿಟರೆಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಇದು ರಾಜ್ಯದ ಡಿಜಿಟಲ್ ಭದ್ರತೆಯತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಬಹುದಾಗಿದೆ.

ಇದನ್ನೂ ನೋಡಿ: ಆರ್‌ಎಸ್‌ಎಸ್‌ ಕುರಿತ ಪ್ರಶ್ನೆಗಳನ್ನು ಸಿದ್ಧಪಡಿಸಿದ ಪ್ರಾಧ್ಯಾಪಕಿಗೆ ಜೀವನಪರ್ಯಂತ ನಿಷೇಧ! Janashakthi Media

Donate Janashakthi Media

Leave a Reply

Your email address will not be published. Required fields are marked *