ಬೆಂಗಳೂರು| ಪರೀಕ್ಷೆಗಳ ಅಕ್ರಮ ತಡೆಗೆ ರಾಜ್ಯ ಪರೀಕ್ಷಾ ಪ್ರಾಧಿಕಾರ ಮಹತ್ವದ ಕ್ರಮ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಮಹತ್ವದ ಕ್ರಮ ಕೈಗೊಮಡಿದ್ದು, ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಡೆಯುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎಐ ತಾಂತ್ರಿಕತೆಯ ಮೊಬೈಲ್ ಆಧಾರಿತ ಅಭ್ಯರ್ಥಿ ದೃಢೀಕರಣ ವ್ಯವಸ್ಥೆಯನ್ನು ವಿಧಾನ ಪರಿಷತ್ ನ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬಳಕೆ ಮಾಡಿದೆ. ಬೆಂಗಳೂರು

ಇಂಜಿನಿಯರಿಂಗ್ ತಂಡ ಮೊಬೈಲ್ ಬೇಸ್ಡ್ ಕ್ಯಾಂಡಿಡೇಟ್ ಅಥೆಂಟಿಕೇಶನ್ ವ್ಯವಸ್ಥೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿದ್ಧಪಡಿಸಿದೆ. ಕಂಪ್ಯೂಟರ್ ಆಪರೇಟರ್ ಮತ್ತು ಇತರೆ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಪ್ರಯೋಗಾರ್ಥವಾಗಿ ಇದನ್ನು ಬಳಕೆ ಮಾಡಲಾಗಿದ್ದು, ಮೊದಲ ಪ್ರಯತ್ನ ಯಶಸ್ವಿಯಾಗಿದೆ.

ಇದನ್ನೂ ಓದಿ: ನವ ಭಾರತದ ಪಯಣವೂ ಭಗತ್‌ ಸಿಂಗ್‌ ಪ್ರಸ್ತುತತೆಯೂ

ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಸ್ಮಾರ್ಟ್ ಫೋನ್ ಬಳಕೆ ಮಾಡಿಕೊಂಡು ಅವರ ಫೋಟೋ ಸೆರೆ ಹಿಡಿಯಲಾಗುವುದು. ಇದು ಕೂಡಲೇ ಪ್ರಾಧಿಕಾರದ ಡೇಟಾ ಸರ್ವರ್ ನೊಂದಿಗೆ ಸಂಪರ್ಕಗೊಂಡು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಿರುವ ಭಾವಚಿತ್ರದೊಂದಿಗೆ ತಾಳೆ ಮಾಡಿ ನೈಜತೆ ದೃಢಪಡಿಸುತ್ತದೆ. ಮುಂದಿನ ಪರೀಕ್ಷೆಗಳಲ್ಲಿಯೂ ಇದನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ನೋಡಿ: ಸದನದಲ್ಲಿ ‘ಹನಿ ಟ್ರ್ಯಾಪ್’ ಸದ್ದು! – ಮೀನಾಕ್ಷಿ ಬಾಳಿ, ಕೆ.ಎಸ್. ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *