ಬೆಂಗಳೂರು : ಇಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಮಂಡಿಸಿದ ರಾಜ್ಯದ 2021-2022ರ ಸಾಲಿನ ಆಯವ್ಯಯದಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗಾಗಿ ಒಟ್ಟಾರೆಯಾಗಿ 31,028 ಕೋಟಿ ರೂ.ಗಳ ಅನುದಾನ ಬಿಡುಗಡೆ.
ಈ ಕೆಳಗಿನಂತೆ ಅನುದಾನವನ್ನು ಮೀಸಲಿಟ್ಟಿರುವ ವಿವಿಧ ಯೋಜನೆಗಳ ಕೆಲವು ಪ್ರಮುಖ ಅಂಶಗಳು
- ರೂ. 500 ಕೋಟಿ – ಸಾವಯವ ಕೃಷಿ ಉತ್ತೇಜನಕ್ಕಾಗಿ ಯೋಜನೆ ಜಾರಿಗಾಗಿ
- ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್‌ಗಳಿಗೆ ನೀಡುತ್ತಿದ್ದ ಸಹಾಯಧನ 25-45 PTO HP ಟ್ಯ್ರಾಕ್ಟರ್‌ಗಳಿಗೂ ವಿಸ್ತರಣೆ
- ರೂ. 10 ಕೋಟಿ – ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ಅಭಿಯಾನ ಕಾರ್ಯಕ್ರಮ. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಗೆ ರೂ. 75 ಕೋಟಿ ಮೀಸಲಿಡುವುದು.
- ರೂ. 50 ಕೋಟಿ – ಆತ್ಮ ನಿರ್ಭರ ಭಾರತ ಅಡಿಯಲ್ಲಿ ಆಹಾರ ಸಂಸ್ಕರಣೆ ಹಾಗೂ ಕೊಯ್ಲೋತ್ತರ ನಿರ್ವಹಣಾ ಘಟಕಗಳಿಗೆ ನೀಡುತ್ತಿದ್ದ ಶೇ. 35 ರಷ್ಟು ಸಹಾಯಧನವನ್ನು ಶೇಕಡಾ 50ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಶೇ.15ರಷ್ಟು ಹೆಚ್ಚುವರಿ ಸಹಾಯಧನಕ್ಕಾಗಿ.
- ರೂ. 25 ಕೋಟಿ – ಅಡಿಕೆ ಬೆಳೆಗಾರರಿಗೆ ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತ ಸಂಶೋಧನೆ ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು.
- ರೂ. 62 ಕೋಟಿ – ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼ ಯ ಕಾರ್ಯಕ್ರಮಗಳ ಅನುಷ್ಥಾನಕ್ಕಾಗಿ
- ರೂ. 30 ಕೋಟಿ – ರಾಜ್ಯದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯ ದರ್ಶಿನಿಗಳ ಸ್ಥಾಪನೆಗಾಗಿ
- ರೂ. 02 ಕೋಟಿ – ರಾಜ್ಯದ 16 ಮೀನುಮರಿ ಉತ್ಪಾದನಾ ಕೇಂದ್ರಗಳ ತಾಂತ್ರಿಕ ಉನ್ನತೀಕರಣಕ್ಕಾಗಿ
- ರೂ. 198 ಕೋಟಿ – ರಾಜ್ಯದ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳ ಗಣಕೀಕರಣಕ್ಕಾಗಿ
- ರೂ. 75 ಕೋಟಿ – ರಾಮನಗರದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕಾಗಿ
- ಸಾವಯವ ಮತ್ತು ಸಿರಿಧಾನ್ಯಗಳ ವೈಜ್ಞಾನಿಕ ಮಾರಾಟಕ್ಕಾಗಿ ರಾಷ್ಟ್ರೀಯ ಇ-ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಅವಕಾಶ.
- ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಶೇಕಡಾ 50 ಮೀಸಲು ಹೆಚ್ಚಳ.
- ಆಹಾರ ಪಾರ್ಕ್ ಸ್ಥಾಪನೆ – ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಗ್ರಾಮದಲ್ಲಿ ಸ್ಥಾಪನೆ
- ಕೊಪ್ಪಳ ಜಿಲ್ಲೆಯ ಸಿರಿವಾರದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ
- ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆಗಳ ಸ್ಥಾಪನೆ
ರೂ. 1500 ಕೋಟಿ ವೆಚ್ಚದಲ್ಲಿ ರಾಜ್ಯದ 58 ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ (DRIP) ಯೋಜನೆ ಅಡಿ ಅನುಷ್ಠಾನಗೊಳಿಸುವುದು.
ರೂ. 500 ಕೋಟಿ ವೆಚ್ಚದಲ್ಲಿ ಬೆಂಗಳೂ ನಗರ, ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳುರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತದ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರು ತುಂಬಿಸುವ ಯೋಜನೆಗಾಗಿ.
ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ ಪಶ್ಚಿಮವಾಹಿನಿ ಯೋಜನೆಯಡಿ ಮುಂದಿನ 5 ವರ್ಷದಲ್ಲಿ ರೂ. 3986 ಕೋಟಿ ರೂ.ಗಳ ವೆಚ್ಚ. 2021-22ನೇ ಸಾಲಿನಲ್ಲಿ ರೂ. 500 ಕೋಟಿ ಹಣ ಬಿಡುಗಡೆ.
ರೂ. 300 ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ನದಿಗಳಲ್ಲಿ ಪ್ರವಾಹ ಮತ್ತು ಭಾರಿ ಅಲೆಗಳಿಂದ ಉಪ್ಪುನೀರು ಹಿಮ್ಮುಖವಾಗಿ ನುಗ್ಗುವುದನ್ನು ತಡೆಗಟ್ಟಲು Flap Gate ಮೂಲಕ ಖಾರ್‌ಲ್ಯಾಂಡ್ ಯೋಜನೆ ಜಾರಿಗಾಗಿ ಹಣವನ್ನು ಮೀಸಲಿಡಲಾಗಿದೆ.