ಶುಚಿತ್ವ ಕಾಪಾಡದ ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್‌ಗೆ 1 ಲಕ್ಷ ರೂ. ದಂಡ!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳು ನಗರದ ಹೋಟೆಲ್‌ಗಳು ಹಾಗೂ ಪಿ.ಜಿಗಳ ಶುಚಿತ್ವವನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಇದೀಗ ಶುಚಿತ್ವ ಕಾಪಾಡದ ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್‌ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಜಯನಗರ 4ನೇ ಟಿ-ಬ್ಲಾಕ್ ನ ಸ್ವಾಗತ್ ರಸ್ತೆಯಲ್ಲಿರುವ ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್‌ನಲ್ಲಿ ಹಸಿಕಸ ಹಾಗೂ ಒಣಕಸ ಬೇರ್ಪಡಿಸದೆ ಘನತ್ಯಾಜ್ಯ ನಿರ್ವಹಣೆ ಸರಿಯಾಗಿ ನಿರ್ವಹಣೆ ಮಾಡದೇ ಇದ್ದುದರಿಂದ ಪಾಲಿಕೆಯ ಘನತ್ಯಾಜ್ಯ ವಿಭಾಗದಿಂದ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ.

ದಾಳಿ ವೇಳೆ ಶುಚಿತ್ವ ಕಾಪಾಡದೆ ಘನತ್ಯಾಜ್ಯ ನಿರ್ವಹಣೆ ಮಾಡದಿರುವುದಲ್ಲದೆ ಹೋಟೆಲ್ ಒಳಗಡೆ ಶುಚಿತ್ವ ಕಾಪಾಡಿಕೊಳ್ಳದೆ ಇರುವುದಕ್ಕೆ ಘನತ್ಯಾಜ್ಯ ನಿರ್ವಹಣೆ ನಿಯಮಗಳಡಿಯಲ್ಲಿ ಹೋಟೆಲ್ ಮಾಲೀಕರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಿ ಶುಚಿತ್ವ ಕಾಪಾಡಿಕೊಳ್ಳದೆ ಇದ್ದರೆ ಅಥವಾ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಎಚ್ಚರಿಕೆ ನೀಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಜೆಟ್ ಅಧಿವೇಶನದಲ್ಲಿ ʻರೋಹಿತ್ ವೇಮುಲ ಕಾಯ್ದೆʼ ಬಿಡುಗಡೆಗೆ ಆಗ್ರಹ

ಜಾಹೀರಾತುಗಳಿಗೆ ಒಂದು ಬಾರಿ ಒಟಿಒ ಅವಕಾಶ

ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025ರ ನಿಯಮ-8 ಅಡಿಯಲ್ಲಿ ಪರಂಪರಾಗತ ಜಾಹೀರಾತುಗಳಿಗೆ (ಲೆಗಸಿ) ಅನುಮತಿ ಪಡೆಯಲು ಹಾಗೂ ಎಲ್.ಇ.ಡಿ ಸ್ವಯಂ ಜಾಹೀರಾತು ಫಲಕಗಳನ್ನು ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸಲು ಒಂದು ಬಾರಿ ಅವಕಾಶ (ಒಟಿಒ) ಕಲ್ಪಿಸಿದ್ದು ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಅರ್ಹ ಜಾಹೀರಾತು ಸಂಸ್ಥೆಗಳು ಅಥವಾ ವ್ಯಕ್ತಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ನಿಯಮಾನುಸಾರ ಜಾಹೀರಾತು ಪ್ರದರ್ಶಿಸುವಂತೆ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರದೇಶ ಜಾಹೀರಾತು ನಿಯಮಗಳು-2025 ದಿನಾಂಕ:13-01-2026ರಂದು ಜಾರಿಗೆ ಬಂದಿದ್ದು, ನಿಯಮ-8.7(i)ರಲ್ಲಿ ಬಿಬಿಎಂಪಿ ಜಾಹೀರಾತು ಉಪವಿಧಿಗಳು-2006 ಅಡಿಯಲ್ಲಿ ಖಾಸಗಿ ಆಸ್ತಿಯ ಮೇಲೆ ಜಾಹೀರಾತು ಅಳವಡಿಸಲು ಅನುಮತಿ ಪಡೆದಿರುವ ಹಾಗೂ ಸಂಪೂರ್ಣ ಜಾಹೀರಾತು ತೆರಿಗೆ ಪಾವತಿಸಿರುವ ಜಾಹೀರಾತು ಸಂಸ್ಥೆಗಳನ್ನು ಪರಂಪರಾಗತ ಜಾಹೀರಾತು (ಲೆಗಸಿ) ಸಂಸ್ಥೆಗಳೆಂದು ಪರಿಗಣಿಸಲಾಗಿದೆ.

ನಿಯಮ-8.7(vii)ರಲ್ಲಿ ಯಾವುದೇ ಹಿಂದಿನ ಜಾಹೀರಾತು ಉಪವಿಧಿಗಳ ಅಡಿಯಲ್ಲಿ ಎಲ್.ಇ.ಡಿ ಜಾಹೀರಾತು ಪ್ರದರ್ಶನ ಫಲಕಕ್ಕಾಗಿ ಅನುಮತಿ ಪಡೆಯಲಾದ ಮತ್ತು ಚಾಲ್ತಿಯಲ್ಲಿರುವ ಅನುಮತಿ ಅವಧಿಯೊಳಗೆ ಇರುವಂತಹ ಎಲ್ಲಾ ಎಲ್.ಇ.ಡಿ ಸ್ವಯಂ ಜಾಹೀರಾತುಗಳನ್ನು ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸಿಕೊಳ್ಳಲು ಒಂದು ಬಾರಿ ಅವಕಾಶ (ಒಟಿಒ) ವನ್ನು ಕಲ್ಪಿಸಿಲಾಗಿರುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಅರ್ಹ ಜಾಹೀರಾತುದಾರರು ಅಥವಾ ವ್ಯಕ್ತಿಗಳು ನಿಗದಿಪಡಿಸಿದ ಅರ್ಜಿ ನಮೂನೆ ಮತ್ತು ಪೂರಕ ದಾಖಲೆಗಳೊಂದಿಗೆ ದಿನಾಂಕ 13-04-2026 ರೊಳಗಾಗಿ, ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರ ಕಚೇರಿ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಜಾಹೀರಾತು ವಿಭಾಗ ಕಚೇರಿ, ಅನೆಕ್ಸ್-2 ಕಟ್ಟಡ, 2ನೇ ಮಹಡಿ, ಎನ್.ಆರ್.ಚೌಕ, ಬೆಂಗಳೂರು ಅವರಿಗೆ ಕಚೇರಿ ಸಮಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ನೋಡಿ: ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media

Donate Janashakthi Media

Leave a Reply

Your email address will not be published. Required fields are marked *