ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ

ಬೆಂಗಳೂರು:  ಸೋಮವಾರ  SSLC ಫಲಿತಾಂಶ (Result) ಪ್ರಕಟವಾಗಲಿದೆ.  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೋಮವಾರ ಫಲಿತಾಂಶ ಪ್ರಕಟಿವುಸುವುದಾಗಿ ತಿಳಿಸಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಮಂಡಳಿ, ಸೋಮವಾರ ಬೆಳಗ್ಗೆ 10 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. 11 ಗಂಟೆಯ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ. ಫಲಿತಾಂಶವನ್ನು  http://karresults.nic.in ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದೆ.

ಮಾರ್ಚ್‌ 31 ರಿಂದ ಏ. 15ರವರೆಗೆ 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ಈ ಬಾರಿ ರಾಜ್ಯದಲ್ಲಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಬಾರಿ ಶಿಕ್ಷಣ ಸಚಿವರ ಬದಲಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸುತ್ತಿದೆ. ಚುನಾವಣೆಗೆ ಅಡ್ಡಿಯಾಗದಂತೆ ಮಕ್ಕಳಿಗೂ ತೊಂದರೆಯಾಗದಂತೆ ಫಲಿತಾಂಶ ಬಿಡುಗಡೆ ಮಾಡಲಾಗುತ್ತಿದೆ.

ಈ ಲಿಂಕ್ ಬಳಸಿ ಫಲಿತಾಂಶ ಚೆಕ್ ಮಾಡಿ : ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪರೀಕ್ಷಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ.  kseab.karnataka.gov.in  ಅಥವಾ  karresults.nic.in ಗೆ ಭೇಟಿ ನೀಡಿ ಫಲಿತಾಂಶ ಪರೀಕ್ಷಿಸಿ. ನಾಳೆ ನಿಮಗೆ ಇದೇ ಲಿಂಕ್​ನಲ್ಲಿ ಫಲಿತಾಂಶ ಸಿಗಲಿದೆ. ನಿಮ್ಮ ಜನ್ಮದಿನಾಂಕ ಹಾಗೂ ಹಾಲ್​ಟಿಕೆಟ್​ ನಂಬರ್​ ಹಾಕಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *