ಬೆಂಗಳೂರು : ಪರೀಕ್ಷೆ ಮುಗಿಸಿಕೊಂಡು ಫಲಿತಾಂಶಕ್ಕೆ ಕಾದು ಕುಳಿತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ, ಪ್ರೌಢ ಶಿಕ್ಷಣ ಮಂಡಳಿ ಶೇ.10 ಕೃಪಾಂಕಗಳನ್ನ ಘೋಷಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.
ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದಿದ್ದು , ಪರೀಕ್ಷಾ ಬರೆದ ಎಲ್ಲಾ ಮಕ್ಕಳು ರಜೆಯ ದಿನಗಳನ್ನ ಕಳೆಯುತ್ತಿದ್ದಾರೆ. ಜೊತೆಗೆ ತಮ್ಮ ಪರೀಕ್ಷೆಯ ಫಲಿತಾಂಶವನ್ನ ತಿಳಿಯಲು ಕಾತುರರಾಗಿದ್ದಾರೆ. ಈ ವೇಳೆ ಪ್ರೌಢಶಿಕ್ಷಣ ಮಂಡಳಿ ಶೇ.10 ರಷ್ಟು ಕೃಪಾಂಕಗಳನ್ನ ಯಾವುದಾದರು ಮೂರು ವಿಷಯಗಳಿಗೆ ಮಾತ್ರ ನೀಡಲಾಗುತ್ತದೆ ಎಂದು ನಿರ್ಧರಿಸಿದೆ.
ಈ ನಿರ್ಧಾರದ ಬಳಿಕ ಪರೀಕ್ಷೆ ಬರೆದ ವಿಧ್ಯಾರ್ಥಿಗಳು ಅನುತ್ತೀರ್ಣರಾಗುವ ಸಾಧ್ಯತೆಗಳು ಬಹಳ ವಿರಳವಾಗಿರುತ್ತವೆ. ಏಕೆಂದರೆ ಯಾವುದಾದರು ವಿಷಯದಲ್ಲಿ ಕಡಿಮೆ ಅಂಕ ಬರುವ ಸಾಧ್ಯತೆ ಇರುವಲ್ಲಿ, ಈ ಶೇ.10 ಕೃಪಾಂಕಗಳು ನೆರವಾಗಲಿವೆ. ಆದ್ದರಿಂದ ಈ ಬಾರಿ ಗೈರು ಹಾಜರಾದ ವಿಧ್ಯಾರ್ಥಿಗಳನ್ನ ಬಿಟ್ಟರೆ ಅನುತ್ತೀರ್ಣರಾಗುವರು ಬೆರಳೆಣಕೆಯಷ್ಟು ಎಂದು ಊಹಿಸಬಹುದಾಗಿದೆ. 25 ಕ್ಕಿಂತ ಹೆಚ್ಚು ಮತ್ತು 30ಕ್ಕಿಂತ ಕಡಿಮೆ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತದೆ.
ಹಾಗಾಗಿ ಈ ಬಾರಿಯೂ ಕೊರೋನಾ ಕಾರಣದಿಂದಾಗಿ ಮಕ್ಕಳಿಗೆ ಸರಿಯಾಗಿ ಪಠ್ಯಕ್ರಮ ನಡೆದಿಲ್ಲ. ಆ ಕಾರಣ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ ಪ್ರೌಢಶಿಕ್ಷಣ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ, ಹಾಗಾಗಿ ಉತ್ತೀರ್ಣರಾಗಲು 25 ಕ್ಕಿಂತ ಹೆಚ್ಚು ಮತ್ತು 35 ಕ್ಕಿಂತ ಕಡಿಮೆ ಅಂಕಗಳನ್ನ ಪಡೆದುಕೊಂಡ ವಿಧ್ಯಾರ್ಥಿಗಳಿಗೆ, ಈ ಕೃಪಾಂಕಗಳು ಸಹಾಯಕಾರಿಯಾಗಲಿವೆ.