ಮಂಡ್ಯ: ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಮಠದ ಸ್ವಾಮೀಜಿ ಹೇಳಿದ್ದ ವಿಡಿಯೋವೊಂದು ವಿವಾದಕ್ಕೆ ಕಾರಣವಾದವಾಗಿದೆ. ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಅಂತಾ ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಹರಿಬಿಟ್ಟಿದ್ದರು.
ವಿಡಿಯೋದಲ್ಲಿ ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ಹೇಳಿದ್ದಾರೆ. ಇಂದು ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ರಿಷಿ ಕುಮಾರ್ ಸ್ವಾಮೀಜಿಯನ್ನು ಪೊಲೀಸರು ಶ್ರೀರಂಗಪಟ್ಟಣ ಪೋಲಿಸ್ ಠಾಣೆಗೆ ಹಾಜರುಪಡಿಸಲಿದ್ದಾರೆ.
ಬೆಳಗ್ಗೆ ವಶಕ್ಕೆ ಪಡೆದಿದ್ದ ಅವರನ್ನು ಪೊಲೀಸರ ಶ್ರೀರಂಗಪಟ್ಟಣ ಠಾಣೆಗೆ ಕರೆತರುವ ಮುನ್ನ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಆರೋಗ್ಯ ತಪಾಸಣೆ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ ರಿಷಿಕುಮಾರ್ ಸ್ವಾಮೀಜಿ ನನ್ನ ಹೇಳಿಕೆಗೆ ಈಗಲೂ ನಾನು ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ಮಸೀದಿ ಒಡೆಯಲು ಹುನ್ನಾರೆ ಇದೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. “ಜಾಮೀಯಾ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿವೆ. ಇದು ದೇವಸ್ಥಾನದ ಕಟ್ಟಡವಾಗಿದೆ. ಶ್ರೀರಂಗಪಟ್ಟಣದ ದೇವಾಸ್ಥಾನವನ್ನು ಮಸೀದಿ ಮಾಡಿಕೊಂಡಿದ್ದಾರೆ. ಹಿಂದೂಗಳು ಜಾಗರೂಕರಾಗಿ. ಆದಷ್ಟು ಬೇಗ ಒಡೆಯಬೇಕಾದ ಮಸೀದಿ ಇದು” ಎಂದು ರಿಷಿ ಕುಮಾರ್ ಸ್ವಾಮೀಜಿ ಹೇಳಿದ್ದರು.