ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಆಸ್ಟ್ರೇಲಿಯಾಕ್ಕೆ ಅಕ್ರಮ ವಲಸೆಗೆ ಯತ್ನ – 51 ಮಂದಿ ಬಂಧನ

Please follow and like us:

ಕೊಲಂಬೊ: ಶ್ರೀಲಂಕಾದಲ್ಲಿ ಸತತ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಕೆಲವರು ಇದರಿಂದ ಪಾರಾಗಲು ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ವಲಸೆ ಹೋಗಲು ಮುಂದಾಗುತ್ತಿದ್ದ 51 ಮಂದಿ ಪ್ರಜೆಗಳನ್ನು ಇಂದು(ಜುಲೈ 03) ಬಂಧಿಸಲಾಗಿದೆ. ಕಳೆದ ಒಂದು ವಾರದಲ್ಲಿ ಅಕ್ರಮ ವಲಸೆಗೆ ಯತ್ನಿಸಿದ 4ನೇ ಘಟನೆ ಇದಾಗಿದೆ ಎಂದು ಶ್ರೀಲಂಕಾ ವಾಯುಪಡೆ ತಿಳಿಸಿದೆ.

ಲಂಕಾದ ಪಶ್ಚಿಮ ಕರಾವಳಿಯ ಮಾರವಿಲಾದಲ್ಲಿ ಶ್ರೀಲಂಕಾದ ಕೋಸ್ಟ್‌ಗಾರ್ಡ್‌ ಮತ್ತು ಪೊಲೀಸ್ ತಂಡ ಇಂದು ಬೆಳಿಗ್ಗೆ ಕಾರ್ಯಚರಣೆ ನಡೆಸುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಪೂರ್ವ ಸಮುದ್ರದ ಮಾರ್ಗವಾಗಿ 51 ಮಂದಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಯತ್ನಿಸುತ್ತಿದ್ದದ್ದು ಕಂಡುಬಂದಿದೆ. ಸಮುದ್ರದಲ್ಲಿ ಮೀನುಗಾರಿಕಾ ಟ್ರಾಲರ್ ಅನ್ನು ವಶಪಡಿಸಿಕೊಂಡಿದ್ದರಿಂದ ಇವರೆಲ್ಲರೂ ಸಿಕ್ಕಿಬಿದ್ದಾರೆ.

ಇಂದು ಬೆಳಿಗ್ಗೆ ಪೂರ್ವ ಸಮುದ್ರದ ಮಾರ್ಗವಾಗಿ 51 ಜನರನ್ನು ಹೊತ್ತೊಯ್ಯುತ್ತಿದ್ದ ಸ್ಥಳೀಯ ಬಹು-ದಿನದ ಮೀನುಗಾರಿಕೆ ಟ್ರಾಲರ್ ಇದಾಗಿದೆ. ಅವರು ಸಮುದ್ರಮಾರ್ಗದಿಂದ ಅಕ್ರಮವಾಗಿ ವಲಸೆ ಹೋಗುವ ಯತ್ನದಲ್ಲಿದ್ದಾರೆ ಎಂದು ನೌಕಾಪಡೆ ಶಂಕೆ ವ್ಯಕ್ತಪಡಿಸಿದೆ.

ಕಳೆದ ಜೂನ್ 27, 28ರಂದು ಅಕ್ರಮವಾಗಿ ವಲಸೆ ಹೋಗುತ್ತಿದ್ದ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಪಲಾಯನ ಮಾಡುತ್ತಿದ್ದು, ವರ್ಷದ ಆರಂಭಿಕ ದಿನಗಳಿಂದ ಇವು ಘಟಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾ ಸರ್ಕಾರ ಅಕ್ರಮ ವಲಸಿಗರನ್ನು ನಿಯಂತ್ರಿಸಲು ಕ್ರಮವಹಿಸಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *