ವಿಶ್ವಕಪ್ 2023: ಭಾರತದ ವಿರುದ್ಧ ಹೀನಾಯ ಸೋಲು; ಸಂಪೂರ್ಣ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಜಾ

ಕೊಲಂಬೊ:ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ತಂಡವು ಹೀನಾಯ ಸೋಲು ಅನುಭವಿಸಿದ ನಂತರ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯನ್ನು ವಜಾಗೊಳಿಸಿ ಶ್ರೀಲಂಕಾದ ಕ್ರೀಡಾ ಸಚಿವ ರೋಷನ್‌ ರಣಸಿಂಘೆ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ನವೆಂಬರ್ 2ರಂದು ಗುರುವಾರ ಮುಂಬೈ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ 358 ರನ್‌ಗಳ ಬೃಹತ್ ಗುರಿ ನೀಡಿತ್ತು. ಆದರೆ ಶ್ರೀಲಂಕಾ ಕೇವಲ 55 ರನ್‌ಗಳಿಗೆ ಆಲೌಟ್​ ಆಗಿ 302ರನ್‌ಗಳ ಸೋಲು ಅನುಭವಿಸಿತ್ತು, ಈ ಘೋರ ಪರಾಭವದಿಂದ ಸಿಟ್ಟಿಗೆದ್ದಿದ್ದ ರಣಸಿಂಘೆ, ಇದೊಂದು ದೊಡ್ಡ ಅವಮಾನ. ಈ ಕೂಡಲೇ ಮಂಡಳಿ ಸದಸ್ಯರು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಆಗ್ರಹಿಸಿದ್ದರು. ನೈತಿಕ ಹೊಣೆಹೊತ್ತು ಆಟಗಾರರರು ಸ್ವಯಂ ಪ್ರೇರಿತ ರಾಜೀನಾಮೆ ಸಲ್ಲಿಸಬೇಕು ಎಂದು ಹೇಳಿದ್ದರು. ಅಭಿಮಾನಿಗಳು ಸಹ ಕ್ರಿಕೆಟ್ ಮಂಡಳಿ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿICC World Cup 2023: ಇಂದಿನಿಂದ ಕ್ರಿಕೆಟ್ ವಿಶ್ವಕಪ್‌‌ ಆರಂಭ

ಏಷ್ಯಾಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿಯೂ ಲಂಕಾ ತಂಡ ಭಾರತ ಎದುರು ಕೇವಲ 50 ರನ್​ಗೆ ಆಲೌಟ್​ ಆಗಿ ಹೀನಾಯ ಸೋಲು ಕಂಡಿತ್ತು. ಈ ವೇಳೆಯೂ ರಣಸಿಂಘೆ ಅವರು ಕ್ರಿಕೆಟ್​ ಮಂಡಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಎಚ್ಚರಿಕೆಯನ್ನೂ ನೀಡಿದ್ದರು.

ಇಂದು (ನವೆಂಬರ್​​ 6) ಅಧ್ಯಕ್ಷ ಶಮ್ಮಿ ಸಿಲ್ವಾ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳನ್ನು ವಜಾಗೊಳಿಸಿ ಮಧ್ಯಂತರ ಅಧ್ಯಕ್ಷರನ್ನಾಗಿ ಅರ್ಜುನ ರಣತುಂಗ ಅವರಿಗೆ ಅಧಿಕಾರ ನೀಡಲಾಗಿದೆ. ಶ್ರೀಲಂಕಾ ಮಂಡಳಿಯಲ್ಲಿ 2ನೇ ಅತ್ಯನ್ನತ ಸ್ಥಾನ ಹೊಂದಿರುವ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಅವರು ಅಭಿಮಾನಿಗಳ ಪ್ರತಿಭಟನೆಯ ನಡುವೆ ಶನಿವಾರ ರಾಜೀನಾಮೆ ನೀಡಿದ್ದರು.

ಸದ್ಯ ಶ್ರೀಲಂಕಾ ತಂಡ ಹಾಲಿ ವಿಶ್ವಕಪ್​ನಲ್ಲಿ 7 ಪಂದ್ಯಗಳನ್ನು ಆಡಿದ್ದು 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇಂದು ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿದೆ. ಒಂದೊಮ್ಮೆ ಈ ಪಂದ್ಯದಲ್ಲೂ ಸೋತರೆ ಲಂಕಾ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

ಇದನ್ನೂ ನೀಡಿ : ಕ್ರೀಡಾ ಬದ್ಧತೆ ಮೆರೆದ ಮೊಹಮ್ಮದ್‌ ಸಿರಾಜ್‌

 

 

Donate Janashakthi Media

Leave a Reply

Your email address will not be published. Required fields are marked *