ಕೊಲೊಂಬೊ: ಹೆಚ್ಚಿನ ಕಾರ್ಯನಿರ್ವಾಹಕ ಅಧಿಕಾರವನ್ನು ಬಿಟ್ಟುಕೊಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ವಾಗ್ದಾನ ಮಾಡಿದ್ದಾರೆ. ಒಂದು ತಿಂಗಳ ಪ್ರತಿಭಟನೆ ಹಾಗು ತಮ್ಮ ದೇಶದಲ್ಲಾಗುತ್ತಿರುವ ಆರ್ಥಿಕ ಮುಗ್ಗಟ್ಟು, ಹಣದುಬ್ಬರ ಇವುಗಳ ಮಧ್ಯೆ ದೇಶವನ್ನುದ್ದೇಶಿಸಿ ಮಾತಾಡಿದ ಅವರು, ಮುಂಬರುವ ಸರ್ಕಾರ ಏಕೀಕೃತ ಸರ್ಕಾರವನ್ನು ಘೋಷಿಸುವುದಾಗಿ ಹೇಳಿದ್ದಾರೆ.
ಸಂಸತ್ತಿನಲ್ಲಿ ದೇಶದ ಬಹುಮತ ಮತ್ತು ಜನರ ವಿಶ್ವಾಸ ಗಳಿಸುವವರ ಹೆಸರನ್ನು ಹೇಳಲಾಗುವುದೆಂದು ತಮ್ಮ ಭಾಷಣದಲ್ಲಿ ತಿಳಿಸಿದ ರಾಜಪಕ್ಷೆ ಸಂಸತ್ತಿಗೆ ಹೆಚ್ಚು ಅಧಿಕಾರವನ್ನು ವಹಿಸುವುದು, ಸಂವಿಧಾನದ 19 ನೇ ತಿದ್ದುಪಡಿಯ ಪ್ರಮುಖ ಅಂಶಗಳನ್ನು ಸಕ್ರಿಯಗೊಳಿಸುವ ಕಾರ್ಯ ಮಾಡುವುದಾಗಿ ಹೇಳಿದ್ದಾರೆ.
ಆಮದುಗಳನ್ನು ಪಾವತಿಸಲು ವಿದೇಶಿ ವಿನಿಮಯ ಖಾಲಿಯಾದ ನಂತರ ಶ್ರೀಲಂಕಾ ವಿದ್ಯುತ್ ಕಡಿತ, ಆಹಾರ, ಇಂಧನ ಇನ್ನಿತರ ಪ್ರಮುಖ ಸರಕುಗಳ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದು ಜನಸಾಮಾನ್ಯರ ಪರಿಸ್ಥಿತಿ ಹದಗೆಟ್ಟಿದೆ. ಸ್ಥಗಿತಗೊಂಡಿರುವ ವ್ಯವಹಾರಗಳನ್ನು ಪುರ್ನನಿರ್ವಹಿಸಲು ಹೊಸ ಸರ್ಕಾರವನ್ನು ನಿರ್ಮಿಸಬೇಕಿದೆ. ಹಾಗಾಗಿ, ಸಂಸತ್ತಿನಲ್ಲಿ ಜನರ ವಿಶ್ವಾಸ ಮತ್ತು ಬಹುಮತ ಪಡೆಯಲು ಸಮರ್ಥರಾಗಿರುವ ಪ್ರಧಾನಿಯನ್ನು ಈ ವಾರದೊಳಗೆ ನೇಮಿಸಲು ನಿರ್ಧರಿಸಲಾಗಿದೆ.
ಹೊಸ ಸರ್ಕಾರಕ್ಕೆ ಹೊಸ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಲಾಗುತ್ತದೆ. ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಅಧಿಕಾರ ನೀಡಲಾಗುವುದು ಎಂದೇಳಿದ್ದಾರೆ. ಕಾರ್ಯಕಾರಿ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸುವಂತೆ ವಿವಿಧ ಬಣಗಳಿಂದ ಬಂದಿರುವ ಕರೆಗಳನ್ನು ಪರಿಗಣಿಸಲಾಗುವುದು. ಹೊಸ ಸರ್ಕಾರ ಮತ್ತು ದೇಶವನ್ನು ಸ್ಥಿರಗೊಳಿಸಲು ಸಾಮರ್ಥ್ಯದೊಂದಿಗೆ ಚರ್ಚಿಸಲು ಅವಕಾಶವಿದೆ. ಜನರ ಜೀವ, ಜೀವನ, ಸ್ತ್ರೀಯನ್ನು ರಕ್ಷಿಸಲು ರಾಜ್ಯ ನಿಯಂತ್ರಿಸುವ ಅಡೆತಡೆಯಿಲ್ಲದ ಕಾರ್ಯವನ್ನು ನಿರ್ವಹಿಸಲು ಸಹಾಯವನ್ನು ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ಆರ್ಥಿಕ ಬಿಕ್ಕಟಿನ ಕಾರಣದಿಂದಾಗಿ ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಸಚಿವಾಲಯವು ವ್ಯಾಪಾರಿ ಒಪ್ಪಂದಗಳ ಮಾತುಕತೆಗಾಗಿ ಶ್ರೀಲಂಕಾ ಭೇಟಿ ಮಾಡುವ ಬಗ್ಗೆ ಪ್ರಸ್ತಾಪಗಳನ್ನು ಮುಂದಿಟ್ಟಿದೆ. ಹಾಗೆಯೇ ದೇಶದ ಭದ್ರತಾ ಪರಿಸ್ಥಿತಿಯಿಂದಾಗಿ ಶ್ರೀಲಂಕಾ ಪರಿಸ್ಥಿತಿ ಪರಿಶೀಲಿಸುವಂತೆ ಆಸ್ಟ್ರೇಲಿಯಾದ ಪ್ರಯಾಣಿಕರಿಗೆ ನೋಟಿಸ್ ನೀಡಿದೆ. ರಾಜಕೀಯದ ಉದ್ವಿಗ್ನತೆಯ ಕುರಿತು ಆಸ್ಟ್ರೇಲಿಯಾ ಕ್ರಿಕೆಟರಿಗೆ ವಿವರಿಸಲಾಗಿದೆ.