ಮಂಗಳೂರು: ಮಂಗಳೂರಿನ ಮುಲ್ಲಕಾಡ್, ಗಾಂಧಿನಗರ, ಕಾವೂರು, ಪಂಜಿಮೊಗರು ಹಾಗೂ ಬಸ್ತಿಗಾರ್ಡನ್ ನ ಸರ್ಕಾರಿ ಪ್ರಾಥಮಿಕ/ಪ್ರೌಢ ಶಾಲೆಗಳ 1000 ಮಕ್ಕಳಿಗೆ ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಸುರೇಶ ಪಟ್ಣಗೆರೆಯವರು ಮ್ಯಾರಥಾನ್ ನಿಂದ ಬಂದಂತಹ ಬಹುಮಾನದ ಹಣದಿಂದ ಕಲಿಕಾ ಸಾಮಗ್ರಿಗಳನ್ನು ಹಾಗೂ ಶಾಲೆಗಳಿಗೆ ಕ್ರೀಡಾಸಾಮಗ್ರಿಗಳನ್ನು ವಿತರಿಸಿದರು.
ಇದನ್ನೂ ಓದಿ: ನರೇಗಲ್ | ಮೊಳಕೆಯೊಡೆದ ಹೆಸರು ಬೆಳೆ ತಿಂದು ಎರಡು ಎಮ್ಮೆಗಳು ಸಾವು
ಸುರೇಶ ಪಟ್ಣಗೆರೆಯವರ ಈ ಸಾಮಾಜಿಕ ಕಾರ್ಯವನ್ನು ಶಾಲಾಶಿಕ್ಷಕ ವೃಂದ, ಶಾಲಾಭಿವೃಧ್ದಿ ಸಮಿತಿ ಹಾಗೂ ಸಾರ್ವಜನಿಕರು ಶ್ಲಾಘಿಸಿ ಅಭಿನಂದಿಸಿರುತ್ತಾರೆ.
ಮುಲ್ಲಕಾಡ್ ಶಾಲಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ದ. ಕ. ಜಿಲ್ಲಾ ಕ್ರೀಡಾ ಪರಿವಿಕ್ಷಕ ಭರತ್, ಕುದುರೆಮುಖ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕಟ್ಟಿಮನಿ, ಪ್ರಾಧ್ಯಾಪಕರಾದ ಅರವಿಂದ ಶಾನಭಾಗ, ಶಾಲಾಭಿವೃಧ್ದಿ ಸಮಿತಿ ಸದಸ್ಯರಾದ ಮಲ್ಲಪ್ಪ ಕುಂಬಾರ್, ಪ್ರದೀಪ್ ಮತ್ತು ಚಂದನಾ ಪ್ರದೀಪ್ ಹಾಗೂ ಶಾಲಾ ಅಧ್ಯಾಪಕರುಗಳು ಹಾಜರಿದ್ದರು.
ಇದನ್ನೂನೋಡಿ: ಬಿಹಾರದಲ್ಲಿ ಸರ್ (SIR) ಸೃಷ್ಟಿಸಿದ ಸುಳ್ಳು ಕಥೆಗಳು – ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
