ವಿಶೇಷ ಚೇತನ ಶಿಕ್ಷಕರ ಸಮಸ್ಯೆ – ಬೇಡಿಕೆಗಳಿಗೆ ತುರ್ತು ಗಮನ ನೀಡಲು ಮನವಿ ಸಲ್ಲಿಕೆ

ಯಂಕರ್: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಚೇತನ ಅತಿಥಿ ಶಿಕ್ಷಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ತುರ್ತು ಗಮನ ನೀಡಲು ಕೋರಿ ಆಗಸ್ಟ್‌ 1ರಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಮಸ್ಯೆ

ಈ ಕುರಿತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‍ಇಸಿ)ಯ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಆರ್. ಸೋಮಶೇಖರಗೌಡ, ಅತಿಥಿ ಶಿಕ್ಷಕಿ (ವಿಶೇಷ ಚೇತನ) ನಾಗರತ್ನ ಎಸ್.ಜಿ. ಮತ್ತು ಜಿಲ್ಲಾ ಅಧ್ಯಕ್ಷ ಸುತ್ರಾಯ ಸುಧಾಕರ್ ಅವರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸರ್ಕಾರಿ ಪಾಥಮಿಕ ಮತ್ತು ಪೌಢಶಾಲೆಗಳ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ವಿಶೇಷ ಚೇತನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ | ಪ್ರಜ್ವಲ್ ರೇವಣ್ಣ ದೋಷಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

ಸೇವಾ ಹಿರಿತನವನ್ನು ಪರಿಗಣಿಸಿ ವಿಶೇಷ ಚೇತನ ಅಭ್ಯರ್ಥಿಗಳನ್ನು ಸೇವೆಯಲ್ಲಿ ಪ್ರತಿ ವರ್ಷವೂ ಸೇವೆಯಲ್ಲಿ ಮುಂದುವರಿಸ ಬೇಕು ಮತ್ತು ಈಗಿರುವ ಮೆರಿಟ್ ಪದ್ಧತಿಯನ್ನು ಕೈ ಬಿಡಬೇಕು.

ವಿಶೇಷ ಚೇತನ ಅಭ್ಯರ್ಥಿಗಳಿಗೆ ಅವರು ನೆಲೆಸಿರುವ ಸ್ಥಳದ ಸುತ್ತಮುತ್ತಲು ಇರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕು.

ಹತ್ತು ವರ್ಷಗಳಿಂದ ಹೆಚ್ಚು ಕಾಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ವಿಶೇಷ ಚೇತನ ಅತಿಥಿ ಶಿಕ್ಷಕರನ್ನು ಸರ್ಕಾರ ಕಾಯಂ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ನೋಡಿ: ಭೂಮಿ ಕಸಿದುಕೊಳ್ಳಲು ಬಂದ ನೈಸ್‌ ಕಂಪನಿ ವಿರುದ್ಧ ರೈತರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *