ಬೆಂಗಳೂರು: ನಗರದ ಯಲಹಂಕ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸೇರಿ ಮೂವರನ್ನು ಜಮೀನು ಮಾಲೀಕರ ಹೆಸರನ್ನು ಪಹಣಿಯಲ್ಲಿ ಸೇರಿಸಲು 2 ಲಕ್ಷ ಲಂಚ ಪಡೆಯುತ್ತಿದ್ದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಧ್ಯವರ್ತಿಗಳಾದ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ನಾಗರಾಜು ಮತ್ತು ಸಂದೀಪ್ ಹಾಗೂ ಮುನಿಶಾಮಿ ರೆಡ್ಡಿ ಬಂಧಿತ ಆರೋಪಿಗಳು. ಬೆಂಗಳೂರು
ಜಮೀನಿನ ದಾಖಲೆಗೆ ಮಾಲೀಕರ ಹೆಸರು ಸೇರಿಸುವಂತೆ ವಕೀಲ ಮಹೇಶ್ ಅವರು ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ವಿಶೇಷ ತಹಶೀಲ್ದಾರ್ ಅವರು 10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 3 ಲಕ್ಷ ಪಡೆದುಕೊಂಡಿದ್ದರು.
ಇದನ್ನೂ ಓದಿ: ರಾಜ್ಯದಾದ್ಯಂತ 1,652 ಕಿಮೀ ಹೊಸ ರೈಲು ಹಳಿ ನಿರ್ಮಾಣ: ಅಶ್ವಿನಿ ವೈಷ್ಣವ್
ಎರಡನೇ ಕಂತಿನಲ್ಲಿ 2 ಲಕ್ಷ ಕೊಡುವಂತೆ ಸೂಚಿಸಿದ್ದರು. ಈ ಕುರಿತು ಮಹೇಶ್ ಅವರು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ವಿಶೇಷ ತಹಶೀಲ್ದಾರ್ ಸೂಚನೆಯಂತೆ ನಾಗರಾಜು ಅವರನ್ನು ಭೇಟಿಮಾಡಿದ ದೂರುದಾರ 2 ಲಕ್ಷ ನಗದನ್ನು ನೀಡಿದರು. ನಾಗರಾಜು ಹಣವನ್ನು ತನ್ನ ಸಂಬಂಧಿಯೂ ಆದ ವಿಐಟಿ ಕಾಲೇಜು ಪ್ರಯೋಗಾಲಯದ ಸಿಬ್ಬಂದಿ ಸಂದೀಪ್ ಕೈಗೆ ನೀಡಿದ್ದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತದ ಪೊಲೀಸರು, ಇಬ್ಬರನ್ನೂ ಬಂಧಿಸಿದರು. ಬಳಿಕ ಮುನಿಶಾಮಿ ರೆಡ್ಡಿ ಅವರನ್ನು ವಶಕ್ಕೆ ಪಡೆದು, ಬಂಧಿಸಲಾಯಿತು.
ಇದನ್ನೂ ನೋಡಿ: ಮೋದಿ ಆಡಳಿತದಿಂದ ನಮ್ಮ ಜೀವನ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ ಎಂದ ಶೇ. 37ರಷ್ಟು ಜನಸಂಖ್ಯೆ… Janashakthi Media