ತಿರುವನಂತಪುರಂ: ಕೇರಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪನೆ ಮಾಡಲಾಗುವುದು ಎಂದು ಮಂಗಳವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಹೊಸ ನ್ಯಾಯಾಲಯಗಳ ಸ್ಥಾಪನೆ ಕುರಿತು ಶಾಸಕ ಕ್ಸೇವಿಯರ್ ಚಿಟ್ಟಿಲಪಿಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹೇಳಿಕೆಯನ್ನು ನೀಡಿದ್ದಾರೆ.
“ಕೇರಳದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪನೆ ಮಾಡುವ ಬಗ್ಗೆ ಕೇರಳದ ರಾಜ್ಯ ಸರ್ಕಾರವು ಆದ್ಯತೆಯನ್ನು ನೀಡುತ್ತದೆ. ಆದರೆ ಬೇರೆ ಕೋರ್ಟ್‌ಗಳನ್ನು ರಾಜ್ಯದಲ್ಲಿ ಸದ್ಯಕ್ಕೆ ಸ್ಥಾಪನೆ ಮಾಡುವ ಪ್ರಸ್ತಾಪ ಈಗ ಇಲ್ಲ,” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.
“ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ವಿಚಾರಣೆಗಾಗಿ ವಿಶೇಷ ಕೋರ್ಟ್ ಮಾತ್ರವಲ್ಲದೇ ಬಾವಯ ವಡಕ್ಕಂಚೇರಿ ಉಪ ನ್ಯಾಯಾಲಯ ಸ್ಥಾಪನೆ ಬಗ್ಗೆಯೂ ಆದ್ಯತೆ ನೀಡುತ್ತೇವೆ. ಹೊಸ ನ್ಯಾಯಾಲಯಗಳ ಆದ್ಯತೆಯ ಪಟ್ಟಿಯಲ್ಲಿ ವಡಕ್ಕಂಚೇರಿ ಉಪ ನ್ಯಾಯಾಲಯವನ್ನು ಮೂರನೇ ಸ್ಥಾನದಲ್ಲಿ ಇದೆ,” ಎಂದು ತಿಳಿಸಿದರು.
“ಪ್ರಸ್ತುತ ಹೊಸ ನ್ಯಾಯಾಲಯ ಸ್ಥಾಪನೆ ಮಾಡುವ ಕುರಿತಾಗಿ ಕೇರಳ ರಾಜ್ಯ ಸರ್ಕಾರವು ಈವರೆಗೆ ಯಾವುದೇ ನಿಧಾರವನ್ನು ಕೈಗೊಂಡಿಲ್ಲ. ಪ್ರಸ್ತುತ ಬೆಳವಣಿಗೆಗಳನ್ನು ನಾವು ಗಮನದಲ್ಲಿ ಇಟ್ಟುಕೊಂಡು ಮಹಿಳೆಯರು ಹಾಗೂ ಮಕ್ಕಳ ವಿರುದ್ಧವಾಗಿ ನಡೆಯುವ ಅಪರಾಧ ಕೃತ್ಯಗಳ ವಿಚಾರಣೆಯನ್ನು ನಡೆಸಲು ಹೊಸ ವಿಶೇಷ ನ್ಯಾಯಾಲಯವನ್ನು ಸ್ಥಾಪನೆ ಮಾಡುವ ಬಗ್ಗೆ ನಾವು ಆದ್ಯತೆಯನ್ನು ನೀಡುತ್ತೇವೆ,” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.