ಚಂಡೀಗಢ: ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರದ ಸಚಿವ ಅನಿಲ್ ವಿಜ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಉಪಾಸನಾ ನಡುವೆ ಕಾವೇರಿದ ಚರ್ಚೆ ನಡೆದಿದೆ. ಗತಿ ಪರಿಶೀಲನಾ ಸಭೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಅಮಾನತು ವಿಷಯವಾಗಿ ತನ್ನ ಆದೇಶ ಪಾಲಿಸದಿದ್ದರೆ ಗೆಟ್‌ಔಟ್’ ಎಂದು ಸಚಿವರು ಹೇಳಿದ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸಭೆಯಲ್ಲಿ ಪಾಲ್ಗೊಂಡು ಇಂಧನ, ಸಾರಿಗೆ ಮತ್ತು ಕಾರ್ಮಿಕ ಸಚಿವ ಅನಿಲ್ ವಿಜ್ ಅವರು ತಕ್ಷಣ ಅಮಾನತು ಮಾಡುವಂತೆ ನಿರ್ದೇಶಿಸಿದ್ದಾರೆ. ಕೈತಾಲ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ ಎನ್ನಲಾದ ಈ ಘಟನೆಯಲ್ಲಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಬ್ ಇನ್‌ಸ್ಟೆಕ್ಟರ್ ಅಮಾನತು ವಿಷಯವಾಗಿ ಚರ್ಚೆ ನಡೆದಿದೆ.
ಇದನ್ನೂ ಓದಿ : ಬ್ಯಾಂಕ್‌ಗಳು ದಂಡ ವಸೂಲಿ ಮಾಡುವುದನ್ನು ನಿಲ್ಲಿಸಬೇಕು: ಲೋಕಸಭೆಯ ಅರ್ಜಿಗಳ ಸಮಿತಿ ಶಿಫಾರಸು
ಆದರೆ ಸಬ್ ಇನ್‌ಸ್ಟೆಕ್ಟರ್ ಅಮಾನತು ತನ್ನ ವ್ಯಾಪ್ತಿಯಲ್ಲಿಲ್ಲ. ಏಕೆಂದರೆ ಅಧಿಕಾರಿ ಕೆಲಸ ಮಾಡುತ್ತಿರುವುದು ಬೇರೊಂದು ಜಿಲ್ಲೆಯಲ್ಲಿ ಮತ್ತು ಅವರ ಮೇಲಧಿಕಾರಿ ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಸನಾ, ‘ಈ ಕೆಲಸವನ್ನು ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ ಮಾಡಬೇಕು’ ಎಂದು ಸಮಜಾಯಿಷಿ ನೀಡಿದ್ದಾರೆ. ಇದಕ್ಕೆ ತೃಪ್ತಿಯಾಗದ ಸಚಿವರು, ಉಪಾಸನಾ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ‘ನಾನು ಹೇಳುತ್ತಿದ್ದೇನೆ. ಆತನನ್ನು ಅಮಾನತು ಮಾಡಿ’ ಎಂದು ಗದರಿದ್ದಾರೆ.
ನನ್ನ ಆದೇಶವನ್ನು ನೀವು ಪಾಲಿಸಲೇಬೇಕು ನಾನು ಹೇಳುತ್ತಿದ್ದೇನೆ ಅಮಾನತು ಮಾಡಿ. ಹಾಗಿದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ ಬರೆಯಿರಿ. ಎಂದು ಅನಿಲ್ ವಿಜ್ ಮತ್ತೆ ತಾಕೀತು ಮಾಡಿರುವ ವಿಡಿಯೊ ಹರಿದಾಡುತ್ತಿದೆ.
ಸಚಿವರಿಗೆ ವಾಸ್ತವ ಅರ್ಥ ಮಾಡಿಸಲು ಉಪಾಸನಾ ನಿರಂತರವಾಗಿ ಪ್ರಯತ್ನ ಮಾಡಿದ್ದಾರೆ. ಇದರಿಂದ ತೀವ್ರವಾಗಿ ಕೋಪಗೊಂಡ ಸಚಿವರು, ‘ನಿಮಗೆ ಅಧಿಕಾರವೇ ಇಲ್ಲವೆಂದ ಮೇಲೆ ಸಭೆಯಿಂದ ಹೊರನಡೆಯಿರಿ’ ಎಂದು ಗದರಿರುವುದು ದಾಖಲಾಗಿದೆ.
ಇದನ್ನೂ ನೋಡಿ : ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media
