ಲಖನೌ: ಸಮಾಜವಾದಿ ಪಕ್ಷದ ನಾಯಕ ಅಬ್ದುಲ್ಲಾ ಅಜಂ ಖಾನ್ ಅವರು 17 ತಿಂಗಳ ನಂತರ ಮಂಗಳವಾರ ಉತ್ತರ ಪ್ರದೇಶದ ಹಾರ್ದೋಯ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರು. ಅವರ ಪಕ್ಷದ ನಾಯಕರು ಮತ್ತು ಬೆಂಬಲಿಗರು ಅಬ್ದುಲ್ಲಾ ಅಜಂ ಖಾನ್ ಅವರನ್ನು ಸ್ವಾಗತಿಸಲು ಜೈಲಿನ ಹೊರಗೆ ನೆರೆದಿದ್ದರು.
ಅಬ್ದುಲ್ಲಾ ಅಜಂ ಖಾನ್ ಅವರು ರಾಂಪುರದಲ್ಲಿರುವ ಸುವಾರ್ ಕ್ಷೇತ್ರದ ಮಾಜಿ ಶಾಸಕರು ಮತ್ತು ಸದ್ಯ ಜೈಲಿನಲ್ಲಿರುವ ಹಿರಿಯ ಎಸ್‌ಪಿ ನಾಯಕ ಮತ್ತು ಮಾಜಿ ಸಚಿವ ಅಜಂ ಖಾನ್ ಅವರ ಪುತ್ರ.
ಇದನ್ನು ಓದಿ :-ಬೆಂಗಳೂರು| ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡದೇ ಇದ್ದರೆ ಮುಖ್ಯಸ್ಥರೇ ಹೊಣೆ
ಜೈಲಿನಿಂದ ಹೊರಬಂದ ನಂತರ ಅಬ್ದುಲ್ಲಾ ಖಾನ್ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ಆದರೆ ಅವರ ವಕೀಲ ಸತ್ನಾಮ್ ಸಿಂಗ್ ನಟ್ಟು ಮಾತನಾಡಿ, “ಇಡೀ ದೇಶಕ್ಕೆ ತಿಳಿದಿರುವಂತೆ, ಮೊಹಮ್ಮದ್ ಅಜಂ ಖಾನ್ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡಲು ಜೈಲಿನಲ್ಲಿರಿಸಲಾಯಿತು ಎಂದರು.
ಇಂದು, ಅಬ್ದುಲ್ಲಾ ಭಾಯಿ ಬಿಡುಗಡೆಗೆ ದಾರಿ ಮಾಡಿಕೊಟ್ಟಿದ್ದಕ್ಕಾಗಿ ನಾವು ದೇವರು, ಅಲ್ಲಾ ಮತ್ತು ವಾಹೆಗುರು ಅವರಿಗೆ ಧನ್ಯವಾದ ಹೇಳುತ್ತೇವೆ. ಅವರು ಅಂತಿಮವಾಗಿ ಆರೋಪ ಮುಕ್ತರಾಗಿ ಬರುತ್ತಾರೆ” ಎಂದರು.
ಮಾಜಿ ಶಾಸಕರ ಬಿಡುಗಡೆಯ ಸುದ್ದಿ ಹರಡುತ್ತಿದ್ದಂತೆ, ಮೊರಾದಾಬಾದ್ ಸಂಸದ ಮತ್ತು ಎಸ್‌ಪಿ ನಾಯಕ ರುಚಿ ವೀರಾ ಅವರೊಂದಿಗೆ ಅವರ ಬೆಂಬಲಿಗರು ಜೈಲಿನ ಹೊರಗೆ ಜಮಾಯಿಸಿದ್ದರು.
ಜೈಲಿನಿಂದ ಬಿಡುಗಡೆಯಾದ ನಂತರ, ಅಬ್ದುಲ್ಲಾ ಅಜಂ ಖಾನ್ ತಮ್ಮ ಬೆಂಬಲಿಗರ ಬೆಂಗಾವಲು ಪಡೆಯೊಂದಿಗೆ ಸಂಜೆ 4.10 ಕ್ಕೆ ಜೈಲು ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತೆರಳಿದರು.
2020 ರಲ್ಲಿ ದಾಖಲಾಗಿದ್ದ ಶತ್ರು ಆಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಬ್ದುಲ್ಲಾ ಅಜಂ ಖಾನ್ ಅವರಿಗೆ ಸಂಸದ/ಶಾಸಕರ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್ ಇತ್ತೀಚೆಗೆ ಅಬ್ದುಲ್ಲಾ ಅಜಂ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಯಂತ್ರ ಕಳ್ಳತನ ಪ್ರಕರಣ ಸೇರಿದಂತೆ 45 ಪ್ರಕರಣಗಳು ಅಬ್ದುಲ್ಲಾ ಅಜಂ ಖಾನ್ ವಿರುದ್ಧ ದಾಖಲಾಗಿದ್ದು, ಅವರು ಆ ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ.