ಎಸ್‌ಪಿ ಅಭ್ಯರ್ಥಿ ಸೋಲಿಸಲು ಬಿಜೆಪಿಗೆ ಬೇಕಿದ್ದರೂ ಮತ ಹಾಕುತ್ತೇವೆ: ಮಾಯಾವತಿ ವಾಗ್ದಾಳಿ

  • ಲೋಕಸಭಾ ಚುನಾವಣೆ ವೇಳೆ ಎಸ್‍್ಪಿ ಜೊತೆಗಿನ ಮೈತ್ರಿ ಬಗ್ಗೆ ಆಳವಾಗಿ ಯೋಚಿಸಬೇಕಿತ್ತು

ಲಖನೌ: ಉತ್ತರಪ್ರದೇಶದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿಗೆ ಮತ ಹಾಕಲು ಸಿದ್ಧ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ  ಹೇಳಿದ್ದಾರೆ. ಈ ಮೂಲಕ 2019ರ ಲೋಕಸಭಾ ಚುನಾವಣೆ ವೇಳೆ ಮಿತ್ರ ಪಕ್ಷವಾಗಿದ್ದ ಸಮಾಜವಾದಿ ಪಕ್ಷದ ಅಖಿಲೇಶ್‍ ಯಾದವ್‍ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.

ಗುರುವಾರ ಮಾತನಾಡಿದ ಅವರು, ತಮ್ಮ ಮೈತ್ರಿ ಸಲುವಾಗಿ ಸಮಾಜವಾದಿ ಪಕ್ಷದ ವಿರುದ್ಧದ 1995ರ ಪ್ರಕರಣ ಹಿಂತೆಗೆದುಕೊಂಡಿದ್ದು ತಪ್ಪಾಗಿದೆ. ಉತ್ತರ ಪ್ರದೇಶದ ಮುಂದಿನ ಪರಿಷತ್‌ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ನಾವು ನಿರ್ಧರಿಸಿದ್ದೇವೆ. ಇದಕ್ಕಾಗಿ ನಮ್ಮ ಎಲ್ಲ ಶಕ್ತಿಯನ್ನು ನಾವು ವಿನಿಯೋಗಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಮತವನ್ನುಬಿಜೆಪಿ ಅಭ್ಯರ್ಥಿಗೆ ಅಥವಾ ಬೇರೆ ಪಕ್ಷದ ಅಭ್ಯರ್ಥಿಗೆ ಹಾಕಬೇಕಾದ ಅಗತ್ಯ ಬಂದೆ ನಾವೂ ಅದನ್ನು ಮಾಡುತ್ತೇವೆ. ಸಮಾಜವಾದಿ ಪಕ್ಷದ ಎರಡನೇ ಅಭ್ಯರ್ಥಿಯ ಮೇಲೆ ಪ್ರಾಬಲ್ಯ ಸಾಧಿಸಲು ಯಾವುದೇ ಪಕ್ಷದ ಅಭ್ಯರ್ಥಿ ಬಯಸಿದರೆ ಅವರು ಬಿಎಸ್‌ಪಿಯ ಎಲ್ಲಾ ಶಾಸಕರ ಮತಗಳನ್ನು ಖಚಿತವಾಗಿ ಪಡೆಯುತ್ತಾರೆ ಎಂದು ಹೇಳಿದರು.

ನವೆಂಬರ್‌ 9 ರಂದು ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಹಿನ್ನಡೆಯಾದ ಬಳಿಕ ಮಾಯಾವತಿ ಅಖಿಲೇಶ್‌ ಯಾದವ್‌ ಮೇಲೆ ಈ ವಾಗ್ದಾಳಿ ನಡೆಸಿದ್ದಾರೆ. ಅಗತ್ಯವಿರುವ ಸದಸ್ಯಬಲ ಇಲ್ಲದಿದ್ದರೂ ಒಂದು ರಾಜ್ಯಸಭಾ ಸ್ಥಾನಕ್ಕೆ ಅಭ್ಯರ್ಥಿ ರಾಮ್‌ಜಿ ಗೌತಮ್ ಅವರನ್ನು ಬಿಎಸ್‌ಪಿ ಕಣಕ್ಕಿಳಿಸಿದ್ದಾರೆ. ಬಿಜೆಪಿಯೇತರ ಪಕ್ಷಗಳ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ.

ನಾವು ಎಸ್‌ಪಿಯೊಂದಿಗೆ ಕೈ ಜೋಡಿಸಬಾರದಿತ್ತು. ನಾವು ಸ್ವಲ್ಪ ಆಳವಾಗಿ ಯೋಚಿಸಬೇಕಿತ್ತು. ತರಾತುರಿಯಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಮೂಲಕ ನಾವು ಬಹಳ ದೊಡ್ಡ ತಪ್ಪು ಮಾಡಿದ್ದೇವೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ನಾವು ಸಮಾಜವಾದಿ ಪಕ್ಷದೊಂದಿಗೆ ಸ್ಪರ್ಧಿಸಲು ನಿರ್ಧರಿಸಿದಾಗ, ಅದಕ್ಕಾಗಿ ನಾವು ತುಂಬಾ ಶ್ರಮಿಸಿದ್ದೇವೆ.

ಆದರೆ, ಅಖಿಲೇಶ್ ಯಾದವ್ ಮಾತ್ರ ನಾವು ಕೊಟ್ಟಿದ್ದ ಪ್ರಕರಣ ಹಿಂತೆಗೆದು ಕೊಳ್ಳುವಂತೆ ನಮ್ಮ ನಾಯಕ ಎಸ್‌ಸಿ ಮಿಶ್ರಾಗೆ ಹೇಳುತ್ತಲೇ ಇದ್ದರು ಎಂದರು. ಲೋಕಸಭಾ ಚುನಾವಣೆಯ ಸಮಯದಲ್ಲಿ ಕೋಮುವಾದಿ ಪಡೆಗಳ ವಿರುದ್ಧ ಹೋರಾಡಲು ನಮ್ಮ ಪಕ್ಷ ಎಸ್‌ಪಿ ಜೊತೆ ಕೈಜೋಡಿಸಿತ್ತು. ಅವರ ಕೌಟುಂಬಿಕ ಕಲಹದಿಂದಾಗಿ, ಅವರು ಬಿಎಸ್‌ಪಿಯೊಂದಿಗಿನ ಮೈತ್ರಿಯಿಂದ ಹೆಚ್ಚಿನ ಸ್ಥಾನ ಗೆಲ್ಲಲು ಆಗಲಿಲ್ಲ ಎಂದರು.

 

Donate Janashakthi Media

Leave a Reply

Your email address will not be published. Required fields are marked *