ಮೈಸೂರು: ಇಲ್ಲಿನ ಮಂಡಿ ಮೊಹಲ್ಲದ ಮಿಷನ್ ಆಸ್ಪತ್ರೆ ಮುಂದಿನ ಜಾಕಿರ್ ಹುಸೇನ್ ವೃತ್ತದಲ್ಲಿ ಸಂಕ್ರಾಂತಿಯನ್ನು ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿ ತಿನ್ನುವ ಮೂಲಕ ಸೌಹಾರ್ದ ಸಂಕ್ರಾಂತಿಯನ್ನು ಆಚರಿಸಲಾಯಿತು.
ಸೌಹಾರ್ದ ಕರ್ನಾಟಕ, ಮೈಸೂರು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಂಗಾಯಣದ ಮಾಜಿ ನಿರ್ದೇಶಕ ಹೆಚ್ ಜನಾರ್ದನ (ಜೆನ್ನಿ), ಇಂದು ಸೌಹಾರ್ದ, ಸಮೃದ್ದಿ, ಸಾಮರಸ್ಯಕ್ಕೆ ಕೋಮುವಾದ ಅಡ್ಡಿಯಾಗಿದೆ. ಈ ಸೌಹಾರ್ದ ಸಂಕ್ರಾಂತಿ ಆಚರಿಸುವ ಮೂಲಕ ಇಂದು ನಿಜವಾದ ಭಾರತವನ್ನು ಕಂಡಿದ್ದೇವೆ. ಸೌಹಾರ್ದ ಕಾರ್ಯಕ್ರಮಗಳನ್ನು, ಹಬ್ಬವನ್ನು ಆಚರಿಸುವ ಮೂಲಕ ಹೊಸತನವನ್ನು ಕಟ್ಟಬೇಕಿದೆ ಎಂದು ಕರೆ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಹಳೆ ಮತದ ಕೊಳೆಯನ್ನು ತೊಡೆಯಬೇಕು. ಸ್ವಾರ್ಥ, ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಜಾತಿ, ಧರ್ಮ, ಲಿಂಗ ಎಲ್ಲಾ ರೀತಿಯ ಭೇದವನ್ನು ಮೀರಿ ನಾವು ಮನುಜ ಮತ ವಿಶ್ವಪಥದತ್ತ ಹೋಗಲು ಇಂತಹ ಸೌಹಾರ್ದತೆಯ ಸಣ್ಣ ಸಣ್ಣ ಕಾರ್ಯಕ್ರಮವೇ ಸೌಹಾರ್ದ ಭಾರತ ಕಟ್ಟಲು ದಾರಿ ಎಂದರು.
ಸೌಹಾರ್ದ ಕರ್ನಾಟಕದ ಜಗದೀಶ್ ಸೂರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಂ.ಎಫ್.ಕಲಿಂ, ಲ.ಜಗನ್ನಾಥ್, ಜಿ.ರಾಜೇಂದ್ರ, ಅಬ್ದುಲ್ ಖಾದೀರ್, ಉಮರರ್ ಬೇಗ್, ಮೌಲಾನ ನೂರಿ, ನೂರ್ ಮರ್ಚೆಂಟ್, ಮೈಕಲ್ ಸಗಾಯ್ ರಾಜ್, ಜ್ಞಾನ ಪ್ರಕಾಶ್, ಕೃಷ್ಣಪ್ರಸಾದ್, ಜಿ.ಪಿ.ಬಸವರಾಜ್, ಪಂಡಿತಾರಾಧ್ಯ, ಜಿ.ಜಯರಾಂ, ಪ್ರೊ.ವನಜ, ಮಾಲಾ, ರಮಣಿ, ಇದ್ರಿಸ್, ವಿಜಯ್ ಕುಮಾರ್, ಶಿವರಾಂ ಮುಂತಾದವರು ಸೇರಿದಂತೆ ನೂರಾರು ಜನ ಈ ಸೌಹಾರ್ದ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ