ಮುಸ್ಲಿಂ ಕುಟುಂಬದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಸಾಮರಸ್ಯಕ್ಕೆ ಸಾಕ್ಷಿಯಾದ ಘಟನೆ

ಹಾಸನ : ರಾಜ್ಯದಲ್ಲಿ ಒಂದೆಡೆ ಎರಡು ಕೋಮುಗಳ ನಡುವೆ ದಳ್ಳುರಿ ಹೊತ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ನಡುವೆ ಸಾಮರಸ್ಯ ಬೆಸೆಯುವ ಘಟನೆಯೊಂದು ಹಾಸನದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮುಸ್ಲಿಂ ಕುಟುಂಬವೊಂದು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಹಿಂದೂ ಸಂಪ್ರದಾಯದಂತೆ ಪೂಜಾ ವಿಧಾನಗಳನ್ನು ನೆರವೇರಿಸುವ ಮೂಲಕ ಸಾಮರಸ್ಯ ಬೆಸೆಯುವ ಕೆಲಸ ಮಾಡಿದೆ.

ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಹಾಗೂ ಹಿಜಾಬ್​, ಕೇಸರಿ ವಿವಾದದಿಂದ ರಾಜ್ಯದ ಹಲವು ಕಡೆ ಸಂಘರ್ಷಗಳು ಉಂಟಾಗುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಈ ಘಟನೆ ಸೌಹಾರ್ದತೆಗೆ ಪ್ರೇರಣೆಯಾಗಿದೆ.

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮುಸ್ಲಿಂ ರಿಯಾಜ್ ಪಾಷಾ ಕುಟುಂಬದವರು, ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಪೂಜಾ ವಿಧಾನಗಳ ಮೂಲಕ ನೆರವೇರಿಸಿದ್ದಾರೆ. ಬೇಲೂರಿನ ಹೊರವಲಯದ ನೇರಳೆ ಆಲದ ಮರದ ಬುಡದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ರಿಯಾಜ್ ಕುಟುಂಬ ಪೂಜೆ ಸಲ್ಲಿಸುವಾಗ ಹಿಂದೂ ಧರ್ಮದ ಹಲವು ಜನರು ಸಾಥ್ ನೀಡಿದ್ದಾರೆ. ಒಟ್ಟಾರೆ ಧರ್ಮ ಮೀರಿ ಭಕ್ತಿ ತೋರಿ ರಿಯಾಜ್ ಮತ್ತು ಅವರ ಕುಟುಂಬ ಮಾದರಿಯಾಗಿದೆ.

Donate Janashakthi Media

One thought on “ಮುಸ್ಲಿಂ ಕುಟುಂಬದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಸಾಮರಸ್ಯಕ್ಕೆ ಸಾಕ್ಷಿಯಾದ ಘಟನೆ

  1. ಇಂಥ ಒಳ್ಳೆ ಸುದ್ದಿ ಟಿವಿ ದಲ್ಲಿ ಯಾಕೆ ಕಾಣುದಿಲ್ಲ ಅಂತೀನಿ 🤦‍♂️🤦‍♂️🤦‍♂️
    ಜನಶಕ್ತಿ ಮೀಡಿಯಾ ಗೇ 🙏🙏🙏

Leave a Reply

Your email address will not be published. Required fields are marked *