ರಾಜ್ಯದೆಲ್ಲೆಡೆ ಸೌಹಾರ್ದ ಯುಗಾದಿ ಆಚರಣೆ

ಬೆಂಗಳೂರು : ಹಿಂದೂ, ಮುಸ್ಲಿಮ್‌, ಕ್ರೈಸ್ತ ಸಮುದಾಯದಿಂದ ಸೌಹಾರ್ದಯುತವಾಗಿ ಯುಗಾದಿ ಆಚರಣೆಯನ್ನು ರಾಜ್ಯಾದ್ಯಂತ ಆಚರಿಸಲಾಯಿತು.

ಸೌಹಾರ್ದ ಕರ್ನಾಟಕ, ಜನಪರ ಸಂಘಟನೆಗಳು ರಾಜ್ಯವ್ಯಾಪಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಕಾರ್ಯಕ್ರಮಕ್ಕೆ ವ್ಯಾಪಕ ಸ್ಪಂದನೆ ದೊರೆತಿದ್ದು ಬೇವು, ಬೆಲ್ಲ ಹಂಚಿ ತಿನ್ನುವ ಮೂಲಕ ಸೌಹಾರ್ದ ಯುಗಾದಿಯನ್ನು ಆಚರಿಸಲಾಯಿತು.

ಕಲಬುರಗಿಯ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಯ ಆವರಣದಲ್ಲಿ ಸರ್ವ ಧರ್ಮದ ಜನ ಸೇರಿ ಯುಗಾದಿ ಹಬ್ಬವನ್ನು ಆಚರಿಸಿದ್ದು ವಿಷೇಶವಾಗಿತ್ತು. ಹಿಂದು,ಮುಸ್ಲಿಂ, ಕ್ರಿಶ್ಚಿಯನ್ ಬೌದ್ಧ ಹೀಗೆ ಹಲವಾರು ಸಮುದಾಯ ಧರ್ಮದ ಬಾಂಧವರು ಸೇರಿಕೊಂಡು ಯುಗಾದಿ ಹಬ್ಬವನ್ನ ಆಚರಿಸಿ ಬೇವು ಬೆಲ್ಲದ ಪಾನಕವನ್ನ ಸವಿದರು.

ಸೌಹಾರ್ದ ಕರ್ನಾಟಕ, ಮೈಸೂರು ವತಿಯಿಂದ ಇಂದು ಯುಗಾದಿ ಹಬ್ಬದ ಅಂಗವಾಗಿ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸೌಹಾರ್ದ ಯುಗಾದಿ ಆಚರಿಸಲಾಯಿತು.ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರೊಂದಿಗೆ ಬೇವು ಬೆಲ್ಲ, ಹೋಳಿಗೆಯನ್ನು ಪರಸ್ಪರ ಹಂಚಿಕೊಳ್ಳಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಪಟ್ಟಣದಲ್ಲಿ ಎಲ್ಲಾ ಹಿಂದೂ, ಮುಸ್ಲಿಂ, ಕ್ರೈಸ್ತ ಜನಾಂಗದ ಜನರೆಲ್ಲರೂ ಸೇರಿ ತಾಲೂಕು ಕಚೇರಿಯ ಮುಂಬಾಗ ಬೇವು, ಬೆಲ್ಲ ತಿನ್ನುವ ಮುಖಾಂತರ . ಸೌಹಾರ್ದ ಯುಗಾದಿ ಹಬ್ಬವನ್ನು ಆಚರಿಸಿದರು ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸುವ ಪಣ ತೊಡಲಾಯಿತು.

ಹಗರಿಬೊಮ್ಮನಹಳ್ಳಿಯಲ್ಲಿ ಸೌಹಾರ್ದ ಕರ್ನಾಟಕದಿಂದ
ಸೌಹಾರ್ದ ಯುಗಾದಿಯನ್ನು ಆಚರಿಸಲಾಯಿತು. ಸೌಹಾರ್ದ ಪರಂಪರೆಯನ್ನು ಉಳಿಸೋಣ, ಬೇವು ಬೆಲ್ಲ ಸವಿದು ಭಾವವೈಕ್ಯತೆ ಬೆಸಿಯೋಣ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪಣತೊಟ್ಟರು.

ಜನಪರ ಸಂಘಟನೆಗಳು, ಸೌಹಾರ್ದ ಕರ್ನಾಟಕ ವೇದಿಕೆಯಿಂದ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಈ ಸೌಹಾರ್ದ ಯುಗಾದಿ ಆಚರಣೆಯಲ್ಲಿ ಪರಸ್ಪರ ಬೇವು ಬೆಲ್ಲ ಹಂಚಿ ಸಂಭ್ರಮಿಸಿದರು ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮತಸ್ಥರು ಪರಸ್ಪರ ಬೇವು ಬೆಲ್ಲ ಹಂಚಿಕೊಂಡು ಯುಗಾದಿ ಆಚರಣೆ ಮಾಡಿದರು.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಕೋಲಾರ, ಶ್ರೀನಿವಾಸಪುರ, ಹಾಸನ, ಬೀದರ, ಬಳ್ಳಾರಿ, ವಿಜಯಪುರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸೌಹಾರ್ದ ಯುಗಾದಿಯನ್ನು ಆಚರಿಸಲಾಗಿದೆ.

ಭಾರತ ಎಲ್ಲ ಮತಗಳ ಜನರು ಇರುವ ದೇಶ. ಇಂತಹ ವಿಭಿನ್ನ ಸಂಸ್ಕೃತಿಗಳ, ಆಚರಣೆಗಳಿರುವ ಜನಗಳು ಇರುವ ದೇಶದಲ್ಲಿ ಈ ಹಿಂದೆ ಧರ್ಮ, ಧರ್ಮಗಳ ಜನರ ನಡುವೆ ಸಾಮರಸ್ಯವಿತ್ತು. ಆದರೆ, ಈಗ ರಾಜಕಾರಣಕ್ಕಾಗಿ ಜನರ ಮಧ್ಯ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ. ಹೀಗಾಗಿ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮನುಜ ಮತ ನಮ್ಮದಾಗಬೇಕು. ಹೀಗಾಗಿ ಸರ್ವರೂ ಸಾಮರಸ್ಯದಿಂದ ಇರಬೇಕು ಎಂದು ಜನಪರ ಸಂಘಟನೆಗಳು ಕರೆ ನೀಡಿವೆ.

 

Donate Janashakthi Media

Leave a Reply

Your email address will not be published. Required fields are marked *