ಹೊಸದಿಲ್ಲಿ: ಕರ್ನಲ್ ಸೋಫಿಯಾ ಖುರೇಷಿ ಅವರ ಮೇಲೆ ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾದ ಡೀಪ್ಫೇಕ್ ವೀಡಿಯೊ ಪ್ರಸಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಇದನ್ನು ಓದಿ :-ಬಾಹ್ಯಾಕಾಶ ಯೋಜನೆಗಳು ಭಾರತದ ಸುರಕ್ಷತೆ, ಭದ್ರತೆಗಾಗಿ: ISRO ಅಧ್ಯಕ್ಷ ನಾರಾಯಣನ್
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರ ಪೀಠ, ಈ ವಿಷಯವು ಗಂಭೀರವಾದದ್ದಾಗಿದ್ದರೂ, ದಿಲ್ಲಿ ಹೈಕೋರ್ಟ್ ಈಗಾಗಲೇ ಈ ಸಂಬಂಧ ವಿಚಾರಣೆ ನಡೆಸುತ್ತಿದೆ ಎಂಬ ಕಾರಣದಿಂದ ಅರ್ಜಿಯನ್ನು ನಿರಾಕರಿಸಿದೆ.
ಅರ್ಜಿದಾರ ನರೇಂದ್ರ ಕುಮಾರ್ ಗೋಸ್ವಾಮಿ ಅವರು, ಡೀಪ್ಫೇಕ್ ವೀಡಿಯೊಗಳಿಂದ ಸೋಫಿಯಾ ಖುರೇಷಿ ಅವರು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ಈ ಸಂಬಂಧ ಹಲವು ವೀಡಿಯೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ನ್ಯಾಯಪೀಠವು, ಸೈಬರ್ ಅಪರಾಧಿಗಳು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು, ಹೊಸ ವೀಡಿಯೊಗಳನ್ನು ತಕ್ಷಣವೇ ಅಪ್ಲೋಡ್ ಮಾಡುತ್ತಿರುವುದರಿಂದ, ಈ ರೀತಿಯ ಅಪರಾಧಗಳನ್ನು ನಿಯಂತ್ರಿಸಲು ಸೈಬರ್ ಅಪರಾಧ ನಿಯಂತ್ರಣ ಅಧಿಕಾರಿಗಳಿಗೆ ಹೆಚ್ಚಿನ ಸವಾಲು ಎದುರಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಇದನ್ನು ಓದಿ :-ಒಡಿಶಾದ ಪುರಿಗೆ ಹೊರಟಿದ್ದ ಬೆಂಗಳೂರಿನ 20 ಪ್ರವಾಸಿಗರು ಅಸ್ವಸ್ಥ
ಈ ಹಿನ್ನೆಲೆಯಲ್ಲಿ, ಅರ್ಜಿದಾರರು ದಿಲ್ಲಿ ಹೈಕೋರ್ಟ್ನಲ್ಲಿ ಈ ವಿಷಯವನ್ನು ಮುಂದುವರೆಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.