ನವದೆಹಲಿ | ರಾಬಿನ್‌ ಉತ್ತಪ್ಪ, ಯುವರಾಜ್‌ ಸಿಂಗ್‌ ಹಾಗೂ ನಟ ಸೋನು ಸೂದ್‌ ಜಾರಿ ನಿರ್ದೇಶನಾಲ ಸಮನ್ಸ್‌

ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ)  ಆನ್‌ಲೈನ್‌ ಬೆಟ್ಟಿಂಗ್‌ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಕ್ರಿಕೆಟಿಗರಾದ ರಾಬಿನ್‌ ಉತ್ತಪ್ಪ, ಯುವರಾಜ್‌ ಸಿಂಗ್‌ ಹಾಗೂ ನಟ ಸೋನು ಸೂದ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ನವದೆಹಲಿ

ಇದನ್ನೂ ಓದಿ : ರಸಗೊಬ್ಬರ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 2 ಕಾರ್ಮಿಕರು ಸಾವು

1xಬೆಟ್‌ ಆ್ಯಪ್‌ಗೆ ಸಂಬಂಧಿಸಿದಂತೆ ದೆಹಲಿಯ ಇ.ಡಿ ಕೇಂದ್ರ ಕಚೇರಿಯಲ್ಲಿ ಸೆ.22ರಂದು ಉತ್ತಪ್ಪ, 23ರಂದು ಯುವರಾಜ್‌ ಸಿಂಗ್‌, 24ರಂದು ಸೋನು ಸೂದ್‌ ಅವರ ವಿಚಾರಣೆ ನಡೆಸಲಾಗುತ್ತದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇ.ಡಿ.ಯು ಈಗಾಗಲೇ ಕ್ರಿಕೆಟಿಗರಾದ ಸುರೇಶ್‌ ರೈನಾ, ಶಿಖರ್‌ ಧವನ್‌, ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಅವರ ವಿಚಾರಣೆ ನಡೆಸಿದೆ. ಬೆಂಗಾಳಿ ನಟ ಅಂಕುಶ್‌ ಹಜ್ರಾ (36) ಮಂಗಳವಾರ ಇ.ಡಿ. ಎದುರು ವಿಚಾರಣೆಗೆ ಹಾಜರಾಗಿದ್ದರು. ಆದರೆ, ನಟಿ ಊರ್ವಶಿ ರೌಟೇಲ (31) ವಿಚಾರಣೆಗೆ ಇನ್ನೂ ಹಾಜರಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ನೋಡಿ : ಕಾನೂನು ಅರಿವು | ಮಕ್ಕಳ ಕಸ್ಟಡಿ ಮತ್ತು ಪಾಲನೆ ಕಾನೂನುಗಳು | ಜನಶಕ್ತಿ ಮೀಡಿಯಾ, ಧ್ವನಿ ಲೀಗಲ್ ಟ್ರಸ್ಟ್

Donate Janashakthi Media

Leave a Reply

Your email address will not be published. Required fields are marked *